ಮನೆ ಸುದ್ದಿ ಜಾಲ ಅಹಮದಾಬಾದ್ ವಿಮಾನ ಅಪಘಾತ : ಎಲ್ಲವೂ ಸುಟ್ಟು ಕರಕಲಾದರೂ ಅವಶೇಷದ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ!

ಅಹಮದಾಬಾದ್ ವಿಮಾನ ಅಪಘಾತ : ಎಲ್ಲವೂ ಸುಟ್ಟು ಕರಕಲಾದರೂ ಅವಶೇಷದ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ!

0

ಅಹಮದಾಬಾದ್: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತವು ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ ಸುಮಾರು 265 ಮಂದಿ ಮೃತಪಟ್ಟಿದ್ದು, ಅದರ ಪೈಕಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರೂ ಇದ್ದಾರೆ.

ಈ ಭೀಕರ ಅಗ್ನಿಪಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದೆಯಾದರೂ, ಒಂದು ವಿಶೇಷ ಘಟನೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅವಶೇಷಗಳ ಮಧ್ಯೆ ಭಗವದ್ಗೀತೆಯೊಂದು ಬೆಂಕಿಯಿಂದ ಸುಟ್ಟು ಹೋಗದ ಸ್ಥಿತಿಯಲ್ಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ವೇಳೆ ಸುಟ್ಟು ಹೋಗಿದ ಆವಶೇಷಗಳ ಅಡಿಯಲ್ಲಿ ಒಂದು ಭಗವದ್ಗೀತೆ ಪುಸ್ತಕ ಪತ್ತೆಯಾಗಿದೆ. ಆ ದೃಶ್ಯಗಳು ಇದೀಗ ಎಲ್ಲೆಲ್ಲೂ ವೈರಲ್ ಆಗುತ್ತಿದ್ದು, ಭಗವದ್ಗೀತೆಯ ಹಾನಿಯಾಗದ ಪುಟಗಳನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ದೃಶ್ಯ ವೀಡಿಯೊದಲ್ಲಿದೆ. ಪುಸ್ತಕದ ಹೊರ ಹೊದಿಕೆ ಸ್ವಲ್ಪ ಹೊತ್ತಿಹೋಗಿದ್ದರೂ ಒಳಗಿನ ಪುಟಗಳು ಸುರಕ್ಷಿತವಾಗಿ ಇದ್ದಂತೆ ಕಂಡುಬರುತ್ತಿದೆ.