ಮನೆ ರಾಜ್ಯ ರಸ್ತೆಯಲ್ಲಿ ಐಶ್ವರ್ಯ ಡ್ರೈವಿಂಗ್ ಸ್ಕೂಲ್ ನ ವಾಹನಗಳ ಪಾರ್ಕಿಂಗ್: ಸಾರ್ವಜನಿಕರಿಗೆ ತೊಂದರೆ

ರಸ್ತೆಯಲ್ಲಿ ಐಶ್ವರ್ಯ ಡ್ರೈವಿಂಗ್ ಸ್ಕೂಲ್ ನ ವಾಹನಗಳ ಪಾರ್ಕಿಂಗ್: ಸಾರ್ವಜನಿಕರಿಗೆ ತೊಂದರೆ

0

ಮೈಸೂರು(Mysuru): ಪ್ರಸ್ತುತ ದಿನಗಳಲ್ಲಿ ಪಾದಚಾರಿಯ ಮಾರ್ಗ ಪಾದಚಾರಿ ಉಪಯೋಗಕ್ಕಿಂತ ಹೆಚ್ಚಾಗಿ ವಾಹನ ನಿಲುಗಡೆ, ವಸ್ತುಗಳನ್ನು ಮಾರಾಟ ಮಾಡಲು ಬಳಸುವುದು ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಇದು ನಗರದೆಲ್ಲೆಡೆ ಸರ್ವೇ ಸಾಮಾನ್ಯವಾಗಿದೆ.

ಅಂತೆಯೇ ಹೆಬ್ಬಾಳ್ 2ನೇ ಹಂತದಲ್ಲಿರುವ ಕಾವೇರಿ ಸರ್ಕಲ್ ನಲ್ಲಿರುವ ಐಶ್ವರ್ಯ ಡ್ರೈವಿಂಗ್ ಸ್ಕೂಲ್ ನ ಡ್ರೈವಿಂಗ್ ತರಬೇತಿ ನೀಡುವ ಕಾರ್ ಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಯಾವುದೇ ಡ್ರೈವಿಂಗ್ ಸ್ಕೂಲ್ ಪರವಾನಗಿ ಪಡೆಯಲು ವಾಹನ ನಿಲುಗಡೆಗೆ ಜಾಗ ಹೊಂದಿರಬೇಕು. ಆದರೆ ಐಶ್ವರ್ಯ ಡ್ರೈವಿಂಗ್ ಸ್ಕೂಲ್ ನಲ್ಲಿ ವಾಹನ ನಿಲುಗಡೆಗೆ ಜಾಗ ಇಲ್ಲ. ಇದರಿಂದಾಗಿ ಡ್ರೈವಿಂಗ್ ತರಬೇತಿ ನೀಡುವ ಕಾರ್ ಗಳನ್ನು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಇತರ ವಾಹನಗಳಿಗೆ ಸಮಸ್ಯೆ ಉಂಟಾಗಿದೆ.

ಅಕ್ಕಪಕ್ಕದಲ್ಲಿ ಶಾಲೆಯೂ ಇರುವುದರಿಂದ ಶಾಲಾ ಮಕ್ಕಳು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಜಾತಿ, ಧರ್ಮದ ಹೆಸರಿನಲ್ಲಿ ಅಭಿವೃದ್ಧಿ ತಾರತಮ್ಯ ಮಾಡುವುದು ಹೇಯ: ಹೆಚ್ ಡಿಕೆ
ಮುಂದಿನ ಲೇಖನಪ್ರೇಮ ಪ್ರಕರಣ: ಯುವಕನ ಹತ್ಯೆ, ಮೂವರು ಆರೋಪಿಗಳ ಬಂಧನ