ತಿರುಪುರ : ತಿರುಪುರ–ಮಂಗಳಂ ರಸ್ತೆಯ ಸೆಂಗುಂತಪುರಂನಲ್ಲಿರುವ ರಾಜ ಗಣಪತಿ ದೇವಸ್ಥಾನದಲ್ಲಿ ಮುಸ್ಲಿಂ ಯುವಕನೊಬ್ಬ ಮುಖ್ಯ ದ್ವಾರದ ಕಡೆಗೆ ಬೆನ್ನು ತಿರುಗಿಸಿ ನಮಾಜ್ ಮಾಡಿದ್ದಾನೆ. ಇದು ಹಿಂದೂ ಭಕ್ತರಿಗೆ ತೀರಾ ನೋವುಂಟು ಮಾಡಿದೆ.
ಪೂಚುಕಾಡು ನಿವಾಸಿ ಅಜ್ಮಲ್ ಖಾನ್ ಅಕ್ಟೋಬರ್ 26ರಂದು ದೇವಸ್ಥಾನಕ್ಕೆ ಪ್ರವೇಶಿಸಿದ್ದಾನೆ. ಆತ ನಮಾಜ್ ಮಾಡುತ್ತಿರುವುದನ್ನು ನೋಡಿದ ದೇವಾಲಯದ ಅರ್ಚಕ ನಾಗನಾಥನ್ ಮತ್ತು ಭಕ್ತರು ಆತನನ್ನು ದೇವಸ್ಥಾನದಿಂದ ಹೊರಹೋಗುವಂತೆ ಕೇಳಿಕೊಂಡಿದ್ದಾರೆ. ಆದರೂ ಅದನ್ನು ಲೆಕ್ಕಿಸದೆ ಆತ ನಮಾಜ್ ಮುಂದುವರೆಸಿದ್ದಾನೆ.
ಹೆಚ್ಚಿನ ಜನರ ಸಹಾಯದಿಂದ ಆತನನ್ನು ದೇವಸ್ಥಾನದ ಆವರಣದಿಂದ ಹೊರಗೆ ಕರೆದೊಯ್ಯಲಾಯಿತು. ಇದು ಅಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ತಂದೊಡ್ಡಿತ್ತು. ತಮಿಳುನಾಡು ಪೊಲೀಸರು ಘಟನೆಯ ತನಿಖೆ ಮುಂದುವರೆಸಿದ್ದಾರೆ.















