ಮನೆ ಆರೋಗ್ಯ ಅಳಲೆಕಾಯಿ

ಅಳಲೆಕಾಯಿ

0

      ಅಳಲೆಕಾಯಿಗೆ ಇರುವ ಅಪಾರವಾದ ಔಷಧಿಯ ಗುಣಗಳಿಂದಾಗಿ ಅಳಲೆ ಕಾಯಿಯನ್ನು “ಔಷಧಿಗಳ ರಾಜ” ಎಂದು ಕರೆಯುತ್ತಾರೆ ಪ್ರಚಲಿತವಾದ ಎಲ್ಲಾ ವೈದ್ಯ ಪದ್ದತಿಯಲ್ಲೂ ಅಳಲೆ ಕಾಯಿಯನ್ನು ಔಷಧಿಯಾಗಿ ಉಪಯೋಗಿಸಲಾಗುತ್ತಿದೆ. ಅಳಲೆ ಕಾಯಿಯ ಬಹು ಉಪಯೋಗದಿಂದ, ಅಳಲೆಕಾಯಿ ಒಂದಿದ್ದರೆ, ಎಂತಹ ಕಾಯಿಲೆಗಾದರೂ ಚಿಕಿತ್ಸೆ  ನೀಡುವ ಸಾಮರ್ಥ್ಯ ಇರುತ್ತದೆಯೆಂಬ ಕಾರಣದಿಂದ “ಅಳೆಕಾಯಿ ಪಂಡಿತ” ಎಂಬ ಉಕ್ತಿ ಪ್ರಚಲಿತವಾಗಿದೆ. ಅಳಲೇಕಾಯಿ ಮನೆಯಲ್ಲಿದ್ದರೆ ಒಬ್ಬ ವೈದ್ಯ ಮನೆಯಲ್ಲಿದ್ದಂತೆ ಎಂಬ ನಂಬಿಕೆ ನಮ್ಮ ಹಿರಿಯರಲ್ಲಿ ಇದೆ. ಪುರಾಣ ಕಥೆಗಳಲ್ಲಿ ಅಳಲೆಕಾಯಿಯ  ಉತ್ಪತ್ತಿಯಾದ ಬಗ್ಗೆ ವರ್ಣನೆಯಿದೆ.ಕ್ಷೀರಸಾಗರವನ್ನು ಮಂಥನ ಮಾಡಿದಾಗ ಅಮೃತ ಉದ್ಭವವಾಯಿತು. ಈ ಅಮೃತವನ್ನು ದೇವತೆಗಳಿಗೆ ಹಂಚುವಾಗ ಚೆಲ್ಲಿದ ಒಂದು ತೊಟ್ಟು ಭೂಮಿಯ ಮೇಲೆ ಬಿದ್ದು ಅಳಲೆಕಾಯಿಯಾಗಿ ರೂಪಾಂತರವಾಯಿತಂತೆ.ಶಿವನಿಗೆ ಪ್ರಿಯವಾದ ಎಂಬ ಕಾರಣಕ್ಕೆ ಹರೀಥಕಿ ಎಂಬ ಹೆಸರು ಬಂದಿದೆ.

Join Our Whatsapp Group

          ಈ ಮರದ ಟರ್ಮಿನಾಲಿಯ ಎಂಬ ಜಾತಿ ಸೂಚಕ ಹೆಸರು, ಡರ್ಮಿನಾಲಿಸ್ ಎಂಬ ಲ್ಯಾಟೀನ್ ಪದನ್ನಾಧರಿಸಿದೆ, ಇದರ ಅರ್ಥ ತುದಿ ಭಾಗ ಎಂದು. ಈ ಮರದ ಜಾತಿಗೆ ಸೇರಿದ ಬಹುತೇಕ ಸಸ್ಯಗಳಲ್ಲಿ ಎಲೆಗಳು ಕಾಂಡದ ತುದಿಯಲ್ಲಿ ಗುಪ್ತನಾಗಿರುತ್ತವೆ. ಈ ಕಾರಣದಿಂದ ಮೇಲಿನ ಜಾತಿ ಸೂಚಕ ಹೆಸರನ್ನು ನಾಮಕರಣ ಮಾಡಿದೆ. ಈ ಮರವನ್ನು ಆಫ್ಘಾನಿಸ್ತಾನ್ದದ ಕಾಬುಲ್ ನಿಂದ ಸಸ್ಯ ಜಗತ್ತಿಗೆ ಮೊದಲು ಬಾರಿ ಪರಿಚಯಿಸುದುದರಿಂದ,ಆ ಪ್ರದೇಶದ ಹೆಸರನ್ನು ಲ್ಯಾಟಿನೀಕರಿಸಿ ಚೆಬುಲ ಎಂಬ ಪ್ರಭೇದ ಸೂಚಕ ಹೆಸರನ್ನು ನಾಮಕರಣ ಮಾಡಿದೆ.

    ಅಳಲೆಕಾಯಿ ಮರ ಸಾಮಾನ್ಯವಾಗಿ ಕಳ್ಳಿ ಕುರುಚಲು ಗಿಡಗಳನ್ನೂಳಗೊಂಡ ಸಸ್ಯಾವರಣ ಮತ್ತು ಬೇಸಿಗೆಯಲ್ಲಿ ಎಲೆಯುದುರುವ ಮೈದಾನ ಸೀಮೆಯ ಸಸ್ಯವರ್ಣದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಸಾಗುವಳಿ ಜಮೀನಿನ ಸಮೀಪದ ಬೆಳೆದಿರುವ ಮರಗಳನ್ನು ಕಾಯಿಗಳಿಗೋಸ್ಕರ ಸುರಕ್ಷಿಸಿರುವುದನ್ನು  ಕಾಣಬಹುದು.

     ಅಳೆಲಿಕಾಯಿ ಮರ 10.5cm ಎತ್ತರ ಬೆಳೆಯುತ್ತದೆ. ಎಳೆಯ ಕಾಂಡ ಹೊಳಪಾಗಿದೆ. ಕೆಲವೊಮ್ಮೆ ಕಾಂಡದ ಮೇಲೆ ಕಂದು ಬಣ್ಣದ ಸೂಕ್ಷ್ಮ ರೋಮಗಳಿರುತ್ತವೆ. ಎಲೆಗಳು ಅಭಿಮುಖವಾಗಿ ಜೋಡಣೆಯಾಗಿವೆ. ಆದರೆ,ಬಹುತೇಕ ಎಲೆಗಳು ಕಾಂಡದ ತುದಿ ಭಾಗದಲ್ಲಿ ಗುಪ್ತವಾಗಿರುತ್ತವೆ. ಎಲೆಗಳು ಅಂಡಾಕಾರ ಅಥವಾ ಉದ್ದ ಅಂಡಾಕಾರವಾಗಿವೆ. ಎಲೆಗಳು ತೊಗಲಿನಂತೆ ಒರಟು, ಎಲೆಯ ಅಂಚು ಸಮನಾಗಿದೆ, ಎಲೆಯ ತುದಿ ಮೊಂಡಾಗಿದೆ ಇಲ್ಲವೆ ಸ್ವಲ್ಪ ಚೂಪಾಗಿರುತ್ತದೆ ಎಲೆಯ ಮೇಲ್ಬಾಗ ಹೊಳಪಾಗಿದೆ.ಕೆಳಭಾಗದಲ್ಲಿ ಸೂಕ್ಷ್ಮವಾದ ರೋಮಗಳಿವೆ. ಎಲೆಯ ತೊಟ್ಟಿನ ಉದ್ದ ಎರಡು ಸೆಂಟಿಮೀಟರ್ ಎಲೆ ಮತ್ತು ಎಲೆಯ ತೊಟ್ಟು ಸಂಧಿಸುವ ಜಾಗದಲ್ಲಿ ಎರಡು ಗ್ರಂಥಿಗಳಿವೆ. ಹೂಗಳ ಬಣ್ಣ ವಾಸಲು ಬಿಳುಪು. ಹೂಗಳಿಗೆ ತೊಟ್ಟಿಲ ಹೂಗಳು ಸ್ಟ್ರೈಕ್ ಮಾದರಿಯ ಪುಷ್ಪಮಂಜರಿಯಲ್ಲಿ ಜೋಡಣೆಯಾಗಿವೆ. ಹೂವಿನಲ್ಲಿ ಐದು ಪುಷ್ಪಪಾತ್ರಾ ಪತ್ರಗಳಿವೆ.ಇವು  ಪರಸ್ಪರ  ಬೇಸಿಗೆಯಾಗಿ ಕೊಳವೆಯಂತಹ ಪುಷ್ಪ ಪಾತ್ರೆಯಾಗಿದೆ. ಹೂವಿನಲ್ಲಿ ಪುಷ್ಪದಳಗಳೆಲ್ಲ.ಕೇಸರಗಳ ಸಂಖ್ಯೆ 10 ಅಂಡಾಶಯ ಅಂಡಾಕಾರವಾಗಿದೆ. ಅಂಡಾಶಯದಲ್ಲಿ ಒಂದು ಕೋಣೆ ಯಿದೆ.ಕಾಯಿಯನ್ನು ಡ್ರೂಪ್ ಎಂದು ಕರೆಯುತ್ತಾರೆ. ಗೋಳಾಕಾರವಾಗಿದೆ ಹೊರಮೈ ಹೊಳಪಾಗಿದೆ ಮತ್ತು ಏಣು ಗಳಿರುವಂತೆ ಕಾಣುತ್ತದೆ.