ಮನೆ ಸುದ್ದಿ ಜಾಲ ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ, ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ: ಸಚಿವ ಎಂ.ಸಿ ಸುಧಾಕರ್

ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ, ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ: ಸಚಿವ ಎಂ.ಸಿ ಸುಧಾಕರ್

0

ಬೆಂಗಳೂರು:  ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ, ಮತ್ತು 5 ಸಾವಿರ ರೂ. ವೇತನ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರ ಬೇಡಿಕೆ ಸಂಬಂಧ ಇಂದು ಸಭೆ ನಡೆಸಿ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಅತಿಥಿ ಉಪನ್ಯಾಸಕರಿಗೆ  5 ಸಾವಿರ ರೂ. ವೇತನ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ  ಮಾಡಿದೆ. ಜನವರಿಯಿಂದಲೇ ವೇತನ ಹೆಚ್ಚಳ  ಮಾಡಲಾಗುತ್ತದೆ.  5 ಲಕ್ಷದವರೆಗೆ ಆರೋಗ್ಯ ವಿಮೆ ನೀಡಲಾಗುತ್ತದೆ. ವರ್ಕ್ ಲೋಡ್ ಬಗ್ಗೆಯೂ ಸೂಚನೆ ನೀಡಲಾಗಿದೆ. ಇನ್ನು ಸಹಾಯಕ ಉಪನ್ಯಾಸಕರ  ನೇಮಕಾತಿ ವೇಳೆ ಸೇವೆ ಪರಿಗಣಿಸಲಾಗುತ್ತದೆ.  ಹೊಸದಾಗಿ ನೇಮಕಾತಿ ವೇಳೆ ಅತಿಥಿ ಉಪನ್ಯಾಸಕರಿಗೆ  ಕೃಪಾಂಕ ನೀಡಲು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಹೀಗಾಗಿ ಜನವರಿ  1ರಿಂದ ಅತಿಥಿ ಉಪನ್ಯಾಸಕರು  ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದ ಸಚಿವ ಎಂ.ಸಿ ಸುಧಾಕರ್,   ಹಾಜರಾಗದ್ದರೆ  ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಹಿಂದಿನ ಲೇಖನಡಾ.ಎಸ್.ಎಲ್.ಭೈರಪ್ಪರ ಕಾಪಿ ರೈಟ್ ಉಲ್ಲಂಘನೆ: ರೂ.5,05,000  ನಷ್ಟ ಪರಿಹಾರ ನೀಡುವಂತೆ ಮೈಸೂರು ಕೋರ್ಟ್ ತೀರ್ಪು
ಮುಂದಿನ ಲೇಖನಸ್ವಪಕ್ಷದ ವಿರುದ್ದವೇ ಯತ್ನಾಳ್ ಅಸಮಾಧಾನ: ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ