ಮನೆ ತಂತ್ರಜ್ಞಾನ ಭಾರತದಲ್ಲಿ ಸ್ಯಾಮ್‌’ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌’ಗಳು ತಯಾರಿಕೆ

ಭಾರತದಲ್ಲಿ ಸ್ಯಾಮ್‌’ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌’ಗಳು ತಯಾರಿಕೆ

0

ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್‌ ಬ್ರಾಂಡ್‌ ಸ್ಯಾಮ್‌’ಸಂಗ್‌, ಭಾರತದಲ್ಲಿ ಮಾರಾಟ ಮಾಡುವ ತನ್ನ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌’ಫೋನ್‌’ಗಳನ್ನು ಭಾರತದಲ್ಲೇ ತಯಾರಿಸುವುದಾಗಿ ಹೇಳಿದೆ.

ನೋಯ್ಡಾದಲ್ಲಿರುವ ದೇಶದ ಅತೀ ದೊಡ್ಡ ಮೊಬೈಲ್‌ ತಯಾರಿಕ ಘಟಕದಲ್ಲಿ ಈ ಫೋನ್‌ಗಳು ಉತ್ಪಾದನೆಯಾಗಲಿದೆ.

2018ರಲ್ಲಿ ಈ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು. ಭಾರತದ ಉತ್ಪಾದನೆ ಹಾಗೂ ಬೆಳವಣಿಗೆ ಬೆಳವಣಿಗೆ ಹೊಂದುವ ಉದ್ದೇಶಕ್ಕೆ ಪೂರಕವಾಗಿ, ‘ಮೇಡ್‌ ಇನ್‌ ಇಂಡಿಯಾ‘ ಗ್ಯಾಲಕ್ಸಿ S23 ಮೊಬೈಲ್‌ ಫೋನ್‌’ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಸ್ಯಾಮ್‌’ಸಂಗ್‌ಹೇಳಿದೆ.

ಈ ಸ್ಮಾರ್ಟ್‌’ಫೋನ್‌’ಗಳಲ್ಲಿ Snapdragon 8 Gen ಪ್ರೊಸೆಸರ್ ಇರಲಿದ್ದು, ಅನೂಹ್ಯ ಅನುಭವ ನೀಡುವ ಗೇಮಿಂಗ್‌ ಫೀಚರ್‌ ಇರಲಿದೆ. ಇದಕ್ಕಾಗಿ ವಿಶ್ವದ ವೇಗದ ಮೊಬೈಲ್ ಗ್ರಾಫಿಕ್ಸ್‌’ಗಳನ್ನು ಬಳಕೆ ಮಾಡಲಾಗಿದೆ.

ಈ ಮೊಬೈಲ್‌’ನಲ್ಲಿ ಮರುಬಳಕೆ ಮಾಡಲಾದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗಿದ್ದು, 200MP ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.