ಮನೆ ಸುದ್ದಿ ಜಾಲ ಅನುಮಾನಸ್ಪದ ಬ್ಯಾಗ್ ಪತ್ತೆ: ಬಾಂಬ್ ಭೀತಿ

ಅನುಮಾನಸ್ಪದ ಬ್ಯಾಗ್ ಪತ್ತೆ: ಬಾಂಬ್ ಭೀತಿ

0

ನವದೆಹಲಿ: ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ಇಂದು ಮಧ್ಯಾಹ್ನ ಎರಡು ಅನುಮಾನಾಸ್ಪದ ಬ್ಯಾಗ್‌ಗಳು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಬಾಂಬ್ ಭೀತಿ ಉಂಟು ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ಬ್ಯಾಗ್‌ಗಳ ಬಗ್ಗೆ ದೆಹಲಿ ಪೊಲೀಸರಿಗೆ ಕರೆ ಬಂದ ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಜನವರಿ 14 ರಂದು ಪೂರ್ವ ದೆಹಲಿಯ ಗಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ಚೀಲವೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾದ ಕೆಲವೇ ದಿನಗಳಲ್ಲಿ ಮತ್ತೆ ಬಾಂಬ್ ಭೀತಿ ಸಂಭವಿಸಿದೆ.

ಎಲ್‌ಇಡಿಯನ್ನು ನಿಷ್ಕ್ರಿಯಗೊಳಿಸಲು ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯ ಸಮೀಪವಿರುವ ಮಾರುಕಟ್ಟೆಯಲ್ಲಿ ಎಂಟು ಅಡಿ ಗುಂಡಿವನ್ನು ತೆಗೆದಿದ್ದರು. .

ಹಿಂದಿನ ಲೇಖನಸಿದ್ದರಾಮಯ್ಯರಿಗೆ ಅಧಿಕಾರದಲ್ಲಿರುವಾಗ ಮಹನೀಯರು ನೆನಪಾಗುವುದಿಲ್ಲ: ಪ್ರತಾಪ್ ಸಿಂಹ
ಮುಂದಿನ ಲೇಖನಜಾನುವಾರು ಕಳವು ಪ್ರಕರಣ: 6 ಮಂದಿ ಬಂಧನ, 12 ಹಸು, ಒಂದು ಕರು ರಕ್ಷಣೆ