ಮನೆ ಸುದ್ದಿ ಜಾಲ ಶಾಲಾ ಮುಖ್ಯ ಶಿಕ್ಷಕಿಯಿಂದ ನಿಂದನೆ, ಹಲ್ಲೆ ಆರೋಪ: ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಶಾಲಾ ಮುಖ್ಯ ಶಿಕ್ಷಕಿಯಿಂದ ನಿಂದನೆ, ಹಲ್ಲೆ ಆರೋಪ: ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ

0

ಮೈಸೂರು(Mysuru):  ಕೆಟ್ಟ ಪದಗಳಿಂದ ನಿಂದನೆ ಮತ್ತು ಹಲ್ಲೆ ಮಾಡುತ್ತಾರೆ ಎಂದು ಆರೋಪಿಸಿ ಇಲ್ಲಿನ ಕೂರ್ಗಳ್ಳಿ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಶಾಲಾ ಮಕ್ಕಳು  ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಶಾಲಾ ಮುಖ್ಯ ಶಿಕ್ಷಕಿ ಅನುಸೂಯ ಅವರು ಮಕ್ಕಳಿಗೆ ಕೆಟ್ಟ ಪದಗಳಿಂದ ನಿಂದನೆ ಮತ್ತು ಹಲ್ಲೆ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಪೋಷಕರೊಡಗೂಡಿ ಪ್ರತಿಭಟನೆ  ಧರಣಿ ನಡೆಸಿದರು.

ಶಾಲೆಯಿಂದ ಅವರನ್ನು ವರ್ಗಾವಣೆ ಮಾಡಬೇಕು. ನಮ್ಮ ಶಾಲೆಗೆ ಇವರು ಬೇಡವೆಂದು  ಮುಖ್ಯ ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗಿ ಶಾಲಾ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು.

ವಿನಾಕಾರಣ ಮಕ್ಕಳ ಮೇಲೆ ರೇಗುವುದು, ಕೆಟ್ಟ ಪದಗಳಿಂದ ನಿಂದನೆ ಮಾಡುತ್ತಾರೆ. ಶಾಲೆಯ ಅಭಿವೃದ್ಧಿ ಕೆಲಸ ಏನೂ ಮಾಡುತ್ತಿಲ್ಲ. ಎಸ್ ಡಿಎಂಸಿ ಅಧ್ಯಕ್ಷ ಗಮನಕ್ಕೆ ತರದೆ ಶಾಲಾ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಾರೆ. .ಕೂಡಲೇ ಇವರನ್ನು ವರ್ಗಾವಣೆ ಮಾಡಿ ಎಂದು ಪೋಷಕರು ಸ್ಥಳೀಯರು ಆಗ್ರಹಿಸಿದರು

ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕಿ ಅನಸೂಯ, ತಪ್ಪು ಮಾಡಿದ ಮಕ್ಕಳನ್ನು  ಮುದ್ದು ಮಾಡೋಕೆ ಆಗುತ್ತಾ. ಒಂದು ಮಾತು ಬೈದರೆ ಏನು ತಪ್ಪು. ಇವರು ನನ್ನನ್ನು  ಟಾರ್ಗೆಟ್ ಮಾಡಿ ದುರುದ್ದೇಶದಿಂದ ನನ್ನ ಮೇಲೆ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಲೇಖನಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ
ಮುಂದಿನ ಲೇಖನಮಂಕಣಕ