ಮನೆ ರಾಜ್ಯ ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ: ಬೆಳ್ಳಂದೂರು  ಪೊಲೀಸರಿಂದ ತನಿಖೆ

ಬೆಂಗಳೂರಿನಲ್ಲಿ ಲವ್ ಜಿಹಾದ್ ಆರೋಪ: ಬೆಳ್ಳಂದೂರು  ಪೊಲೀಸರಿಂದ ತನಿಖೆ

0

ಬೆಂಗಳೂರು: ಕಾಶ್ಮೀರದ ಮುಸ್ಲಿಂ ಯುವಕ ತನ್ನನ್ನು ಬಳಸಿಕೊಂಡು, ಮತಾಂತರ ಮಾಡಿ ಈಗ ಬೆದರಿಕೆ ಹಾಕುತ್ತಿದ್ದಾನೆ. ನಾನ್ ಲವ್ ಜಿಹಾದ್​​ಗೆ ಒಳಗಾಗಿದ್ದೇನೆಂದು ಆರೋಪಿಸಿ ಯುವತಿಯೊಬ್ಬಳು ಟ್ವೀಟ್ ಮಾಡಿದ್ದಾಳೆ.

ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ನಗರ ಪೊಲೀಸ್ ಹಾಗೂ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿ ನೆರವಿಗೆ ದಾವಿಸುವಂತೆ ಮನವಿ ಮಾಡಿದ್ದಾಳೆ.

ನಾನು ಲವ್ ಜಿಹಾದ್​ಗೆ ಒಳಗಾಗಿದ್ದೇನೆ, ನನ್ನ ಮೇಲೆ ಅತ್ಯಾಚಾರ ನಡೆದಿದೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ ಎಂದು ಯುವತಿ ಟ್ವೀಟ್ ಮಾಡಿದ್ದಾಳೆ.

ಟ್ವೀಟ್ ​ನಲ್ಲಿ ಕೆಲ ವಿಚಾರಗಳನ್ನು ಸಹ ಉಲ್ಲೇಖಿಸಿರುವ ಯುವತಿ, ಫೇಸ್ ಬುಕ್ ಮೂಲಕ ಕಾಶ್ಮೀರ ಯುವಕನ ಪರಿಚಯವಾಗಿ ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿತ್ತು. ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚನೆ ಎಸಗಿದ್ದಾನೆ. ಸದ್ಯ ಮದುವೆಯಾಗುವುದಿಲ್ಲ ಎಂದು ತನ್ನನ್ನು ನಿರ್ಲಕ್ಷ್ಯಿಸಿದ್ದಾನೆ. ತನಗೆ ಪ್ರಾಣ ಬೆದರಿಕೆ ಹಾಕಿರುವ ಆರೋಪವೂ ಮಾಡಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸರು ಜೊತೆಗೆ ಕಾಶ್ಮೀರ ಪೊಲೀಸರಿಗೂ ಟ್ವೀಟ್ ಮಾಡಿದ್ದಾಳೆ.

ಯುವತಿಯ ಟ್ವೀಟ್ ಗಮನಿಸಿದ ಪೊಲೀಸರು, ಸ್ಥಳೀಯರ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಅದರಂತೆ, ಸಂತ್ರಸ್ಥ ಯುವತಿ, ಬೆಳ್ಳಂದೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದಿನ ಲೇಖನಮಂಗಳೂರು ಕಸ್ಟಮ್ಸ್ ತಂಡ ವಶಪಡಿಸಿಕೊಂಡಿದ್ದ ರಕ್ತಚಂದನ28 ಕೋಟಿಗೆ ಆನ್ ಲೈನ್ ನಲ್ಲಿ ಹರಾಜು
ಮುಂದಿನ ಲೇಖನವಿಚ್ಛೇದನ ಮಂಜೂರಾತಿ ಅವಧಿ ಮನ್ನಾ; ಒಪ್ಪಿಗೆ ಮೇಲೆ ವಿಚ್ಛೇದನ ನೀಡಲು ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ