ಮನೆ ಸುದ್ದಿ ಜಾಲ ಏರ್ ಟೆಲ್ ಇಂಟರ್ ನೆಟ್ ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ: ಕ್ಷಮೆಯಾಚನೆ

ಏರ್ ಟೆಲ್ ಇಂಟರ್ ನೆಟ್ ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ: ಕ್ಷಮೆಯಾಚನೆ

0

ನವದೆಹಲಿ: ದೇಶದಾದ್ಯಂತ ಏರ್‌ಟೆಲ್‌ ಇಂಟರ್‌ನೆಟ್‌ ಸೇವೆಯಲ್ಲಿ ಅಲ್ಪಾವಧಿ ವ್ಯತ್ಯಯ ಕಾಣಿಸಿಕೊಂಡಿದೆ ಎಂದು ಬಳಕೆದಾರರು ದೂರು ನೀಡಿದ್ದು, ಈ ವ್ಯತ್ಯಯವು ತಾಂತ್ರಿಕ ದೋಷದಿಂದ ಉಂಟಾಗಿದೆ ಎಂದು ಏರ್‌ಟೆಲ್‌ ಸ್ಪಷ್ಟಪಡಿಸಿದೆ.

ಬಳಕೆದಾರರ ಕ್ಷಮೆಯಾಚಿಸಿರುವ ಕಂಪನಿಯು ಎಲ್ಲ ದೋಷಗಳನ್ನು ಸರಿ ಪಡಿಸಲಾಗಿದೆ ಎಂದು ತಿಳಿಸಿದೆ. ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ ಕಂಡುಬಂದ ಕಾರಣ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ದೂರುಗಳನ್ನು ಹಂಚಿಕೊಂಡಿದ್ದರು.

ಈ ಸಮಸ್ಯೆಯು ಟೆಲಿಕಾಮ್‌ ನೆಟ್‌ವರ್ಕ್‌ನಲ್ಲಿ ಕಾಣಿಸಿಕೊಂಡಿದ್ದು, ಬ್ರಾಡ್‌ಬ್ಯಾಂಡ್ ಮತ್ತು ಸೆಲ್ಯುಲಾರ್ ಬಳಕೆದಾರರ ಮೇಲೆ ಪರಿಣಾಮ ಬೀರಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ಏರ್‌ಟೆಲ್‌, ನಮ್ಮ ಇಂಟರ್‌ನೆಟ್‌ ಸೇವೆಗಳು ಅಲ್ಪಾವಧಿಯ ಅಡಚಣೆಯನ್ನು ಹೊಂದಿದ್ದವು. ಇದರಿಂದ ನಿಮಗೆ ಉಂಟಾದ ತೊಂದರೆಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಗ್ರಾಹಕರಿಗೆ ತಡೆರಹಿತ ಸೇವೆ ನೀಡಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಈಗ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದೆ.

ಹಿಂದಿನ ಲೇಖನಕೊರೋನಾ ಲಾಕ್‌ಡೌನ್‌: ಉದ್ಯೋಗ  ಕಳೆದುಕೊಂಡ 23 ಲಕ್ಷ ಮಂದಿ
ಮುಂದಿನ ಲೇಖನಕೋರ್ಟ್‌ಗೆ ಹಾಜರಾತಿ: ವಿಜಯ ಮಲ್ಯಗೆ ಸುಪ್ರೀಂ ಕೋರ್ಟ್ ನಿಂದ ಕೊನೆಯ ಅವಕಾಶ