ಮನೆ ಮನೆ ಮದ್ದು ಅಲರ್ಜಿ

ಅಲರ್ಜಿ

0

 ಇದೊಂದು ಜಠರದ ಕಾಯಿಲೆ. ಅಲ್ಲಿ ಉತ್ಪತ್ತಿಯಾಗಬೇಕಾಗಿದ್ದ ಪಾಚಕ ಪಿತ್ತವು  ಸಮರ್ಪಕವಾಗಿ ಉತ್ಪತಿಯಾಗಿ ಸ್ರವಿಸದೇ ಇರುವಾಗ ಈ ಅಜೀರ್ಣದೋಷ ಉಂಟಾಗುತ್ತದೆ. ಆಹಾರವು ಬಾಯಿಗೆ ಬಿದ್ದ ಮರುಕ್ಷಣದಲ್ಲಿಯೇ ಜೊಲ್ಲು ರಸವು ಸುರಿದು ಹಲ್ಲುಗಳಿಂದ ಗಟ್ಟಿ ಪದಾರ್ಥಗಳು ನುಣ್ಣಗೆ ಅರೆದು ಮುಂದೆ ಜಠರಕ್ಕೆ ಕಳಿಹಿಸುತ್ತದೆ. ಆಗ ಅಲ್ಲಿ ಉತ್ಪತ್ತಿಯಾಗುವ ಜಠರ ರಸದಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಉತ್ಪತ್ತಿಯಾಗಿ ಕಿವಿಚುವಿಕೆಯಿಂದ ಆಹಾರದಲ್ಲಿ ಚೆನ್ನಾಗಿ ಮಿಶ್ರ ವಾಗಿ ಜೀರ್ಣಿಸಲು ಸಹಕರಿಸುತ್ತದೆ. ಈ ಕಾರ್ಯ ಸರಿಯಾಗಿ ಜರುಗದೇ ಇದ್ದಾಗ ಅಜೀರ್ಣ ವೆಂದು ಹೇಳುತ್ತಾರೆ.ಇದನ್ನೇ ಅಗ್ನಿ ಮಾಂದ್ಯ ಎಂದು ಹೇಳುವುದುಂಟು

Join Our Whatsapp Group

 1.ಮನೆಯಲೇ ಸಿಕ್ಕುವ ಹಸಿ ಶುಂಠಿ ರಸವನ್ನು ತಯಾರಿಸಿ, ಜೇನು ಬೆರೆಸಿ ಸೇವಿಸಿದರೆ ಅಗ್ನಿ ಮಾಂದ್ಯ ನಿವಾರಣೆ ಆಗುತ್ತದೆ.

2. ಬೆಳಿಗ್ಗೆ ಎದ್ದ ತಕ್ಷಣ ಒಂದು ಲೀಟರ್ ಶುದ್ಧವಾದ ನೀರನ್ನು ಕುಡಿದರೆ ಅಜೀರ್ಣ ನಿವಾರಣೆ ಯಾಗುವುದು.

3. ಒಂದು ಲೋಟ ನೀರನ್ನು ಒಲೆಯ ಮೇಲಿಟ್ಟು ಬೆಲ್ಲ,ಸಣ್ಣ ಚಮಚ ಕಾಳು ಮೆಣಸಿನ ಪುಡಿ, ಹಾಕಿ ಕಾಯಿಸಿ  ಮರುಳುವಾಗ ಕೆಳಗಿಳಿಸಿ ಹಾಲು ಸೇರಿಸಿ ಕುಡಿಯುವುದರಿಂದ ಅಗ್ನಿ ಮಾಂದ್ಯ ನಿವಾರಣೆಯಾಗುತ್ತದೆ. ಇದೇ ಕಷಾಯ ಮಾಡುವಾಗ ಜೀರಿಗೆ ಪುಡಿ ಒಂದು ಚಮಚ ಸೇರಿಸಿದರೆ ಪಿತ್ತಶಮನ ವಾಗುತ್ತದೆ. ಇದೇ ಕಷಾಯಕ್ಕೆ ಶುಂಠಿ ರಸವನ್ನಾದರೂ ಅರಿಶಿನದ ಪುಡಿಯನ್ನಾದರೂ ಸೇರಿಸಿ ಕುಡಿಯುವುದರಿಂದ ಅಜೀರ್ಣ ವ್ಯಾಧಿ ನಿರ್ವಹಣೆಯಾಗುವುದು.

4. ಊಟ ಮಾಡುವಾಗ ಮೊದಲನೆಯ ಅನ್ನಕ್ಕೆ ಹಿಂಗ್ವಷ್ಟಕ  ಚೂರ್ಣವನ್ನು ತುಪ್ಪದೊಳನೆ ಸೇವಿಸಿ ಆನಂತರ ಊಟ ಮಾಡಿದರೆ ಅಜೀರ್ಣ ಪರಿಹಾರವಾಗುವುದು.

5. ಅರ್ಧ ಲೋಟ ನೀರಿಗೆ ನಿಂಬೆರಸವನ್ನು ಹಾಕಿ ಸಕ್ಕರೆ ಸೇರಿಸಿ ಕುಡಿಯುವುದರಿಂದ ಅಜೀರ್ಣ ಪರಿಹಾರವಾಗುವುದು.

6. ಸಬ್ಬಸಿಗೆ ಬೀಜ 10 ಗ್ರಾಂ ;ಲವಂಗ 5; ಗ್ರಾಂ ಅಜವಾನ 10 ಗ್ರಾಂ; ಬೀಡಾ ಲವಣ 10 ಗ್ರಾಂ; ಒಣಶುಂಠಿ 10 ಗ್ರಾಂ; ಕಾಲು ಮೆಣಸು 5 ಗ್ರಾಂ; ಜೀರಿಗೆ 10 ಗ್ರಾಂ; ಸೋಂಪುಕಾಳು 10ಗ್ರಾಂ ;ಇವುಗಳನ್ನು ಚೂರ್ಣ ಮಾಡಿ ನಿಂಬೇ ಹಣ್ಣಿನ ರಸದಲ್ಲಿ ಅರೆದು ಕಡಲೆಕಾಳಿನಷ್ಟು ಗುಳಿಗೆ ಮಾಡಿ ನೇರಳಲ್ಲಿ ಒಣಗಿಸಿ,ಊಟದ ನಂತರ ಎರಡು ಮಾತ್ರೆ ನೀರಿನಲ್ಲಿ ಸೇವಿಸಬೇಕು.7.  ಕರಿಬೇವಿನ ಸೊಪ್ಪಿನ ಚಟ್ನಿ ಮಾಡಿ ಸೇವಿಸಲು ಅಜೀರ್ಣಹರವಾಗುವುದು.

8. ದೊಡ್ಡಪತ್ರೆ ಸೊಪ್ಪಿನ ತಂಬುಳಿ ಮಾಡಿ ಸೇವಿಸಿದಲ್ಲಿ ಅಗ್ನಿಡಿ ಮಾಂದ್ಯ ನಿವಾರಣೆ ಆಗುವುದು.

9. ಪುದೀನ ಸೊಪ್ಪಿನ ಚಟ್ನಿ, ಕೊತ್ತಂಬರಿ ಸೊಪ್ಪಿನ ಚಟ್ನಿ ತಯಾರಿಸಿ ಸೇವಿಸಲು ಅಜೀರ್ಣ ದೋಷ ನಿವಾರಣೆ ಯಾಗುವುದು.

10. ನಿಂಬೆ ಹಣ್ಣಿನ ರಸವನ್ನು ನೀರಿನಲ್ಲಿ ಹಾಕಿ ಕುಡಿದು ನಾಲ್ಕು ಗಂಟೆ ಬಿಟ್ಟು ಊಟ ಮಾಡಿದರೆ ಅಜೀರ್ಣ ದೋಷ ನಿವಾರಣೆ ಆಗುವುದು.

11. ಶ್ರೀ ತುಳಸಿ ಎಲೆಗಳ ರಸವನ್ನು ಒಂದು ಚಮಚ ದಿನಕ್ಕೆ ಮೂರು ಬಾರಿ ಸೇವಿಸಲು ಅಜೀರ್ಣ ಗುಣವಾಗುವುದು.

12. ಜೀರ್ಣಶಕ್ತಿ ಕಡಿಮೆಯಾಗಿರುವಾಗ,ಊಟಕ್ಕೆ ಮುಂಚೆ ಅರ್ಧ ತೂಲ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ರಸ ನುಂಗುತ್ತಿದ್ದರೆ ಉಂಡ ಆಹಾರ ಚೆನ್ನಾಗಿ ಜೀರ್ಣವಾಗುವುದು.

13. ದ್ರಾಕ್ಷಿ, ಕಿತ್ತಲೆ, ಹುಳಿ ಸೇಬು, ಮಾಾಗಿದ ಬಾಳೆಹಣ್ಣು ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುವುದು.

14. ಹಸುವಿನ ಮಜ್ಜಿಗೆಯಲ್ಲಿ ಬೇಕಾದಷ್ಟು ಸೈಂದವ ಲವಣ ಅಥವಾ ಅದು ಸಿಕ್ಕಿದಾಗ ಉಪ್ಪು ಸೇರಿಸಿ ಪ್ರತಿದಿನವೂ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಜಠರದ ಹುಣ್ಣು  ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಜಠರದ ಹೂವು ಗುಣವಾಗುವುದು.

15. ಒಂದು ಊಟದ ಚಮಚ ಕೊತ್ತಂಬರಿ ಬೀಜ ಅವರೆಕಾಳಿನಷ್ಟು ಒಣ ಶುಂಠಿ ಜಜ್ಜಿ ಒಂದು ಬಟ್ಟಲು ನೀರಿಗೆ ಹಾಕಿ ಕುದಿಸಿ ಕಷಾಯಕ್ಕೆ ಜೇನುತುಪ್ಪ  ಸೇರಿಸಿ ಕುಡಿದರೆ ಅಜೀರ್ಣದ ಹೊಟ್ಟೆ ನೋವು ನಿರ್ವಹಣೆ ಆಗುವುದು.

16. ಲವಂಗದ ಕಷಾಯ ಸೇರಿಸುವುದರಿಂದ ಹೊಟ್ಟೆ ಉಬ್ಬರ ನಿರ್ವಹಣೆ ಆಗುತ್ತದೆ.

17. ಅರ್ಧ ತೂಲ ಕರಿಮೆಣಸಿನ ಚೂರ್ಣವನ್ನು ಪುಡಿ ಮಾಡಿ ಬೆಲ್ಲದೊಂದಿಗೆ ಸೇವಿಸಿದರೆ ಅಜೀರ್ಣದ ಹೊಟ್ಟೆ ನೋವು ನಿರ್ವಹಣೆಯಾಗುವುದು.

18. ಹಸಿ ಶುಂಠಿ ಮತ್ತು ಕರಿಮೆಣಸು ಅರ್ಧತೋಲ ಸೇರಿಸಿ ಸೇವಿಸುವುದರಿಂದ ಆರುಚಿ, ಅಗ್ನಿಮಾಂದ್ಸ  ತೊಲಗುವುದು.

19. ಅಜೀರ್ಣನದಿಂದ ಹೊಟ್ಟೆ ಹಸಿವಾಗದಿದ್ದರೆ ಪ್ರತಿದಿನ ಏಳೆಂಟು ನೇರಳೆಹಣ್ಣನ್ನು ಸೇವಿಸಿರಿ. ಜೀರಿಗೆ ಪುಡಿಯನ್ನು ಮಾಡಿ ಹಾಕಿ ನೀರಿನಲ್ಲಿ ಕುದಿಸಿ ಮಾಡಿದ ಕಷಾಯ ಸೇವಿಸಿದರೆ ಕಿಬ್ಬೊಟ್ಟೆನೋವು ನಿವಾರಣೆ ಯಾಗುತ್ತದೆ. ಅದಕ್ಕೆ ಸ್ವಲ್ಪ ಬೆಣ್ಣೆ ಕೂಡ ಸೇವಿಸಬಹುದು.

20. ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ ಚೀಪು ತ್ತಿದ್ದರೆ ಹೊಟ್ಟೆ ತಿರುಚಿದಂತೆ ಆಗುತ್ತಿದ್ದರೆ ಗುಣಮುಖವಾಗುವುದು ಒಂದು ಬಟ್ಟಲು ನೀರಿಗೆ 1 ಚಮಚ ಸೋಂಪುಕಾಳು ಹಾಕಿ ಚೆನ್ನಾಗಿ ಕುದಿಸಿ ಕಷಾಯವನ್ನು ಮಗುವಿಗೆ ಕುಡಿಸಿದರೆ ಹೊಟ್ಟೆ ಉಬ್ಬರ, ಮಗು ಅಳುವುದು, ಅಜೀರ್ಣ ನಿವಾರಣೆ ಆಗುವುದು.

21. ಈರುಳ್ಳಿಯನ್ನು ಉಪ್ಪು ಸಹಿತ ಸೇರಿ ಸೇವಿಸಿದರೆ ಹೊಟ್ಟೆ ನೋವು ನಿವಾರಣೆ ಆಗುತ್ತದೆ.

22. ರಸಬಾಳೆ ಹಣ್ಣನ್ನು ತಂದು ಚೆನ್ನಾಗಿ ಮಾಗಿದ ಬಳಿಕ ಅದಕ್ಕೆ ಹಾಲು ಬೆರೆಸಿ ನುಣ್ಣಗೆ ಆಗುವ ಹಾಗೆ ಮಿಕ್ಸಿಯಲ್ಲಿ ಹಾಕಿ ಸಕ್ಕರೆ ಬೆರೆಸಿ ಪ್ರತಿದಿನವೂ ಸೇವಿಸುತ್ತಾ ಬರಲು ಜಠರದ ಹುಣ್ಣು  ಮಾಯುತ್ತದೆ.

23. ನೇಂದ್ರ ಬಾಳೆಹಣ್ಣಿನ ಸಿಪ್ಪೆ ಕಷಾಯ ತಯಾರಿಸಿ ಸೇವಿಸಲು ಹೊಟ್ಟೆ ನೋವು ಹೋಗುವುದು.

24. ಓಮ ಕಾಳನ್ನು ಸಹಿತ ಆಗಿದು ತಿಂದರೆ ಹೊಟ್ಟೆ ನೋವು ಗುಣವಾಗುತ್ತದೆ.

25. ಮೆಂತ್ಯದ ಕಾಳನ್ನು ನೆನೆಸಿ ಅಕ್ಕಿ ಸೇರಿಸಿ ದೋಸೆ ಮಾಡಿ ಹಬೆಯಲ್ಲಿ ಬೇಯಿಸಿ ಸೇವಿಸುತ್ತಾ ಬರಲು ಅಜೀರ್ಣ ನೀಗುವುದು.

26. ಪ್ರತಿದಿನವೂ ಬೆಳಿಗ್ಗೆ ಎದ್ದ ಕೂಡಲೇ ಟೊಮೆಟೋ ಹಣ್ಣಿನ ರಸವನ್ನು ಸೇವಿಸುತ್ತಾ ಬರಲು ಅಜೀರ್ಣ ನಿವಾರಣೆಯಾಗುವುದು.

27. ಪ್ರತಿದಿನವೂ ಒಂದೊಂದು ಸೇಬಿನ ಹಣ್ಣನ್ನು ಸೇರಿಸುವ ಕ್ರಮವನ್ನು ಅಭ್ಯಾಸ ಮಾಡುತ್ತಾ ಬಂದರೆ ಅಗ್ನಿ ಮಾಂದ್ಯ ನಿವಾರಣೆಯಾಗುವುದು.

28. ಒಂದು ಚಿಟಿಕೆ ಉಪ್ಪನ್ನು ಈರುಳ್ಳಿ ಹೂವಿಗೆ ಸೇರಿಸಿ ಸಣ್ಣದಾಗಿ ಹೆಚ್ಚಿಕೊಂಡು ಕೋಸಂಬರಿ ಮಾಡಿ ಸೇವಿಸಿದರೆ ಅಜೀರ್ಣ ಗುಣವಾಗುತ್ತದೆ.

29. ಬೆಳಿಗ್ಗೆ ಕಾಫಿ, ಟೀಗಳನ್ನು ಸೇವಿಸದೆ ಬಿಸಿ ಹಾಲಿಗೆ ಒಂದು ಚಮಚ ಅರಿಶಿಣ ಪುಡಿ ಹಾಕಿ ಕುಡಿದರೆ ಅಗ್ನಿಮಾಂದ್ಯ   ನಿವಾರಣೆಯಾಗಿ ಬಾಯಿರುಚಿ ಹೆಚ್ಚುತ್ತದೆ.

30. ಒಂದು ಲೋಟ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ನಿಂಬೇರಸ ಸೇರಿಸಿ ಪಾನ ಮಾಡುವುದರಿಂದ ಆಜೀರ್ಣ ರೋಗ ನಿವಾರಣೆಯಾಗುತ್ತದೆ.ಅದಕ್ಕೆ ಜೀರಿಗೆ ಚೂರ್ಣವನ್ನೂ ಸೇರಿಸಬಹುದು.