ಮನೆ ಮನೆ ಮದ್ದು ಬಾದಾಮಿ

ಬಾದಾಮಿ

0

ಸಾಮಾನ್ಯವಾಗಿ ಇದು ತುಂಬಾ ದುಬಾರಿ ಸಾಂಬಾರ ಪದಾರ್ಥವಾಗಿದೆ. ಇದು ಶೇಂಗಾ ಬೀಜದ ರೂಪದಲ್ಲಿದ್ದು ಅಗೆಯಲು ಬಹಳ ಗಟ್ಟಿಯಾಗಿರುತ್ತದೆ. ಇದು ಒಂದು ಗಿಡ ಫಲವಾಗಿದ್ದು, ಆ ಫಲದ ಕವಚವು ಬಹಳ ಗಟ್ಟಿಯಾಗಿರುತ್ತದೆ. ಅದರೊಳಗಿನ ಬೀಜವೇ ತಿನ್ನಲು ಯೋಗ್ಯ. ಇದು ತುಂಬಾ ಉಪಯುಕ್ತವಾಗಿದ್ದು, ಔಷಧಿಯ ಮತ್ತು ಆಹಾರ ರೂಪದಲ್ಲಿಯೂ ಉಪಯೋಗಿಸಲಾಗುತ್ತದೆ.

ಇದು ಜ್ಞಾನೇಂದ್ರಿಯಗಳಿಗೆ ಪುಷ್ಠಿಕರ, ಶಾರೀರಿಕ ಮತ್ತು ಮಾನಸಿಕ ವೃದ್ಧಿಗೆ ಶಕ್ತಿ ವೃದ್ಧಿಸುತ್ತದೆ. ಸ್ವರಣ ಶಕ್ತಿ, ಮೆದುಳು ಮತ್ತು ಕಣ್ಣುಗಳಿಗೆ ಲಾಭಕಾರವಾಗಿದೆ. ಒಣಕೆಮ್ಮ ಮತ್ತು ಅಂಡಕೋಶ ರೋಗಗಳಿಗೆ ಉತ್ತಮ. ಇದರ ಸೇವನೆಯಿಂದ ಶರೀರದಲ್ಲಿ ರಕ್ತ ಮತ್ತು ಮಾಂಸ ಹೆಚ್ಚಾಗಿ ಶರೀರ ಸದೃಢವಾಗುತ್ತದೆ. ವೀರ್ಯಾ ಗಟ್ಟಿಯಾಗಿ ಪೌರುಷ ಶಕ್ತಿ ವೃದ್ಧಿಸುತ್ತದೆ.

ಔಷಧೀಯ ಗುಣಗಳು :-

*  ನೇತ್ರ ರೋಗ – ಯಾವುದೇ ತರಹದ ಕಣ್ಣು ರೋಗವಿರಲಿ, ರಾತ್ರಿ ಇದನ್ನು ನೆನೆಸಿಟ್ಟು ಮುಂಜಾನೆ ತಿಂದು ಮೇಲೆ ಹಾಲು ಕುಡಿದರೆ ಕಣ್ಣುಗಳಲ್ಲಿ ನೀರು ಸೋರುವುದು, ಕಣ್ಣು ಬರುವುದು, ದೃಷ್ಟಿ ದೋಷ ಮುಂತಾದ ವಿಕಾರಗಳು ನಿವಾರಣೆಯಾಗುತ್ತದೆ.

* ದೃಷ್ಟಿ ತೀವ್ರತೆಗೆ – ಬಾದಾಮಿ ಬೀಜ 7, ಸೋಪ 6 ಗ್ರಾಂ, ಸಕ್ಕರೆ 6 ಗ್ರಾಂ ಎಲ್ಲವೂ ಕುಟ್ಟಿ ಚೆನ್ನಾಗಿ ಪುಡಿ ಮಾಡಿ, ರಾತ್ರಿ ಮಲಗುವಾಗ ಬಿಸಿ ಹಾಲಿನೊಂದಿಗೆ 40 ದಿನಗಳವರೆಗೆ ಸೇವಿಸಿದರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ.

*  ಮಕ್ಕಳ ತೊದಲುವಿಕೆ – ಮಕ್ಕಳು ಮಾತನಾಡುವಾಗ ಉಚ್ಚಾರಣೆ ಸ್ಪಷ್ಟ ಬರದಿದ್ದರೆ ತೊದಲು ಮಾತನಾಡುತ್ತಿದ್ದರೆ, ಬಾದಾಮಿ ಚೂರ್ಣ 50 ಗ್ರಾಂ, ದಾಲ್ಚಿನ್ನಿ 10 ಗ್ರಾಂ, ಲವಂಗ 10 ಗ್ರಾಂ, ಪಿಸ್ತಾ 20 ಗ್ರಾಂ, ಕೇಸರ 5 ಗ್ರಾಂ, ಮತ್ತು ಜೇನು 100 ಗ್ರಾಂ ಚೆನ್ನಾಗಿ ಬೆರೆಸಿ ಹಾಲಿನೊಂದಿಗೆ ಮಕ್ಕಳಿಗೆ ಕುಡಿಯಲು ಕೊಟ್ಟರೆ, ಮಕ್ಕಳ ತೊದಲುತನ ದೂರವಾಗುತ್ತದೆ. ಅಶಕ್ತತೆ, ಅಧಿಕ ಮುತ್ರಗಳಿಗೆ ಬಾದಾಮಿ ಬಹಳ ಉಪಯುಕ್ತವಾಗಿದೆ.

ಹಿಂದಿನ ಲೇಖನಶ್ರೀ ರಾಘವೇಂದ್ರ
ಮುಂದಿನ ಲೇಖನಪಾದಾಂಗುಷ್ಟಾಸನ