ಮನೆ ದೇವರ ನಾಮ ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

0

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

ಖಡ್ಗ ಶೂಲದ ಅಭಯಹಸ್ತೆಗೆ ಶಂಕರನರಸಿ ದುರ್ಗೆಗೆ

ಅನ್ನವನಿಕ್ಕುತ ಆರ್ತರ ಕಾಯುವ ಅನ್ನಪೂರ್ಣೆಗೆ ಆನನ್ಯೆಗೆ

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

ಕುಂದಪುಷ್ಪ ಮಣಿ ಮುತ್ತಿನ ಹಾರ ಅಂದದಿ ಧರಿಸಿಹ ಶಾರದೆಗೆ

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ಚೆಂದದ ವೀಣೆಯ ಕರದಲಿ ಪಿಡಿದಿಹ

ಇಂದಿರಾಸನನ ಅರಸಿಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

ಶಂಖಚಕ್ರವರಪದ್ಮಪಾಣಿಗೆ ಚಾಮುಂಡಿ ಮೂಕಾಂಬಿಕೆಗೆ

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ಐಸಿರಿ ನೀಡುವ ಶ್ರೀ ಧನಲಕ್ಷ್ಮಿಗೆ

ಹರಿ ಅರಸಿ ನಾರಾಯಣಿಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ

ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ

ಹಿಂದಿನ ಲೇಖನಮೈಸೂರು: ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ
ಮುಂದಿನ ಲೇಖನನೆನಪಿನ ಶಕ್ತಿಯ ಸಮಸ್ಯೆ ಇದ್ದರೆ, ನಿತ್ಯ ಈ ಯೋಗಾಸನಗಳನ್ನು ಮಾಡಿ