ಮನೆ ಸುದ್ದಿ ಜಾಲ ಅಮೇಜಾನ್ ನಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ: ನೆಟ್ಟಿಗರ ಆಕ್ರೋಶ

ಅಮೇಜಾನ್ ನಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ: ನೆಟ್ಟಿಗರ ಆಕ್ರೋಶ

0

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೇಜಾನ್ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಎಂದು ನೆಟ್ಟಿಗರು ಆಕ್ರೋಶ ಹೊರಹಾಗಿದ್ದಾರೆ. 

ಉಡುಪುಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮುದ್ರಿಸಲಾಗಿದೆ ಕಂಡ ಕಂಡಲ್ಲಿ ಈ ರೀತಿ ತ್ರಿವರ್ಣ ಧ್ವಜದ ಚಿತ್ರವನ್ನು ಮುದ್ರಿಸುವುದು ಅದಕ್ಕೆ ಮಾಡುವ ಅವಮಾನವಷ್ಟೇ ಅಲ್ಲ. ಧ್ವಜ ಸಂಹಿತೆಯ ಉಲ್ಲಂಘನೆಯೂ ಹೌದು ಎಂದು ನೆಟ್ಟಿಗರು ಅಮೇಜಾನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕೀ ಚೈನ್, ಕಪ್, ಬಟ್ಟೆಗಳು, ಚಾಕೊಲೇಟ್ ಗಳು ಮುಂತಾದವುಗಳ ಮೇಲೆ ತ್ರಿವರ್ಣ ಧ್ವಜದ ಚಿತ್ರವನ್ನು ಮುದ್ರಿಸಲಾಗಿದ್ದ ಫೋಟೋಗಳನ್ನು ನೆಟ್ಟಿಗರು ಹಂಚಿಕೊಂಡಿದ್ದು ಆ ಉತ್ಪನ್ನಗಳನ್ನು ನಿಷೇಧಿಸುವಂತೆ ಕೋರಿದ್ದಾರೆ.

ಈ ಬಗ್ಗೆ ತಕ್ಷಣವೇ ಎಚ್ಚೆತ್ತು ಹೇಳಿಕೆ ಬಿಡುಗಡೆ ಮಾಡಿರುವ ಅಮೇಜಾನ್, ಅನುವರ್ತನೆಯಿಲ್ಲದ ಉತ್ಪನ್ನಗಳನ್ನು ಮಾರಾಟದ ಸರಕುಗಳ ಪಟ್ಟಿಯಲ್ಲಿ ಸೇರಿಸಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. 

#AmazonInsultsNationalFlag ಎಂಬ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದು, ” ಅಮೇಜಾನ್.ಇನ್ ಆನ್ ಲೈನ್ ಮಾರುಕಟ್ಟೆಯಾಗಿದ್ದು, ಮೂರನೇ ವ್ಯಕ್ತಿ ಮಾರಾಟಗಾರರು ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಅಂತಹ ಉತ್ಪನ್ನಗಳ ಸಂಬಂಧ ಅನುಸರಣೆಯನ್ನು ಖಾತ್ರಿಪಡಿಸುವುದು ಅವರದ್ದೇ ಜವಾಬ್ದಾರಿಯಾಗಿರುತ್ತದೆ ಎಂದು ಅಮೇಜಾನ್ ತಿಳಿಸಿದೆ.

ಅಮೇಜಾನ್ ಗೆ ಅನ್ವಯಿಸುವ ಕಾನೂನುಗಳನ್ನು ಎಲ್ಲಾ ಉತ್ಪನ್ನಗಳಲ್ಲಿಯೂ ಅನುಸರಿಸಬೇಕಾಗುತ್ತದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಮೇಜಾನ್ ಬದ್ಧವಾಗಿದೆ ಎಂದು ಸಂಸ್ಥೆ ತಿಳಿಸಿದೆ..

ಹಿಂದಿನ ಲೇಖನಲೈಂಗಿಕ ಆಸಕ್ತಿ ಕಡಿಮೆಯಾಗಿದೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ…
ಮುಂದಿನ ಲೇಖನ40ರ ನಂತರ ಲೈಂಗಿಕ ಸಾಮರ್ಥ್ಯ ಕುಗ್ಗದಂತೆ ಕಾಪಾಡುವ ಡಯಟ್