ಮನೆ ಪೌರಾಣಿಕ ಮಾರಿಶಷಳ ಪೂರ್ವ ಜನ್ಮ ವೃತ್ತಾಂತ

ಮಾರಿಶಷಳ ಪೂರ್ವ ಜನ್ಮ ವೃತ್ತಾಂತ

0

ಪ್ರಾಚೀನಬರ್ಹಿ  ಕುಮಾರರೇ! ನಿಮ್ಮ ಕಣ್ಣ ಮುಂದೆ ದೇದೀಪ್ಯ ಮಾನ ತೇಜೋ ವಿಲಾಸಗಳೊಂದಿಗೆ ಕಂಗೊಳಿಸುತ್ತಿದ್ದಂತಹ ಈ ಕೋಮಲೆಯು ನಿಮ್ಮನ್ನು ವಿವಾಹವಾಗಿ ಭವಿಷ್ಯದಲ್ಲಿ ಪ್ರಜಾಪತಿಗೆ ತಾಯಿಯಾಗುವ ಸೌಭಾಗ್ಯವತಿ ಅದಕ್ಕೆ ನಿದರ್ಶನವಾಗಿ ನೀವು ಈಕೆಯನ್ನು ಪೂರ್ವ ಜನ್ಮ ವೃತ್ತಾಂತವನ್ನು ಸಹ ಹೇಳುತ್ತೇನೆ ಸಂಕ್ಷಿಪ್ತವಾಗಿ ಕೇಳಿರಿ.

Join Our Whatsapp Group

ಪೂರ್ವಜನ್ಮದಲ್ಲಿ ಈಕೆ ಒಬ್ಬ ಮಹಾರಾಜನ ಹೆಂಡತಿಯಾಗಿದ್ದಳು.ಪ್ರೀತಿ ಅನುರಾಗಗಳಿಂದ, ಪಟ್ಟದ ರಾಣಿಯ ಭೋಗ ಭಾಗ್ಯಗಳನ್ನು ಅನುಭವಿಸಬೇಕಾದ ಈಕೆಗೆ ದೈವ ದುರ್ವಿಧಿಯಿಂದ ಅತಿ ಬಾಲ್ಯ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು  ವೈದವ್ಯವನ್ನು ಪಡೆದಳು. ಅಂದಿನಿಂದ ಈಕೆ ಐಹಿಕ ಸುಖಗಳನ್ನು ಪರಿತ್ಯಜಿಸಿ, ವೈರಾಗವನ್ನು ಸ್ವೀಕರಿಸಿ ಜನಾರ್ಧನನ್ನು ಕುರಿತು ಆತನ  ಪಾದಪದ್ಮಗಳನ್ನೇ ನಂಬಿಕೊಂಡು ನಿರಂತರವೂ ಶ್ರೀ ಹರಿಯನ್ನೇ ಆರಾಧಿಸುತ್ತಿದ್ದಳು. ಕೆಲ ದಿನಗಳಿಗೆ ಆಕೆಯ ಪೂಜೆಯು ಫಲಿಸಿತು. ಭಕ್ತಿ ಪರವಶನಾದ ಪುಂಡರೀಕಾಕ್ಷನ್ನು  ಸಾಕ್ಷಾತ್ಕರಿಸಿ ಆಕೆಯನ್ನು ಕರುಣೆಯಿಂದ “ಪ್ರತಿವ್ರತಾ ಶಿರೋಮಣಿ!ನಿನ್ನ ಪುಣ್ಯಪಲವು ಪರಿಪಕ್ಕತೆಯನ್ನು ಪಡೆದಿದೆ.ನಿನಗೇನು ಬೇಕೆಂಬುದನ್ನು ಕೇಳು. ನಿನ್ನ ವಾಂಛೆಯನ್ನು ನೆರವೇರಿಸುತ್ತೇನೆ” ಎಂದು ಅಭಯವನ್ನು ಕೊಟ್ಟನು. ಆಗ ಆಕೆ “ಲಕ್ಷ್ಮಿವಲ್ಲಭಾ! ಇಷ್ಟು ಕಾಲಕ್ಕೆ ಈ ದೀನಳನ್ನು ಕರುಣಿಸಿದೆಯಾ ತಂದೆ?ನನ್ನ ಜೀವನವೆಲ್ಲಾ ಕಷ್ಟಗಳೇನಾ. ಎತ್ತ ನೋಡಿದರೂ ದಾರಿ ಕಾಣದಾಗಿದೆ . ಬಾಲ್ಯದಲ್ಲಿಯೇ ಗಂಡನನ್ನು ಕಳೆದುಕೊಂಡು ಯಾವ ಇಹಪರ ಸುಖವನ್ನು ಅನುಭವಿಸದ ನನಗೆ ಕಾಮವಾಂಛೇಯು ದಹಿಸುತ್ತಿದೆ. ಈ ಜನ್ಮದಲ್ಲಿ ಅನುಭವಿಸಲಾಗದ ಸುಖವನ್ನು ಮರುಜನ್ಮದಲ್ಲಿ ಇದಕ್ಕೆ 10 ಪಟ್ಟು ಅಧಿಕ ಸುಖವನ್ನು ಅನುಭವಿಸುವ ವರವನ್ನು ಪ್ರಾಸಾದಿಸು. ಅಯೋನಿಗಳಾಗಿ ಹುಟ್ಟಿ 10 ಜನ ಗಂಡಂದಿರಿಗೆ ಪತ್ನಿಯಾಗಿ ಅಭೀಷ್ಟ ಭೋಗ ಸುಖವನ್ನು ಸಂತೃಪ್ತಿಯಾಗಿ ಅನುಭವಿಸಿ, ಪ್ರಜಾಪತಿ ಪದವಿಯನ್ನು ಸ್ವೀಕರಿಸುವಂತಹ ಮಹಾಪುರುಷನನ್ನು ಮಗನನ್ನಾಗಿ ಪಡೆಯುತ್ತೇನೆ ಎಂದು ಆಕೆ ಶ್ರೀಮನ್ನಾರಾಯಣನನ್ನು ಬೇಡಿಕೊಂಡಳು. ಶ್ರೀ ಹರಿಹಯ ಕರುಣೆಯಿಂದ ಆಕೆ ಈ ಜನ್ಮದಲ್ಲಿ ಆಯೋನಿಜಳಾಗಿ ವೃಕ್ಷಲತೆಗಳಿಗೆ ಜನಿಸಿದಳು. ಈಕೆಯನ್ನು ನೀವು ಪರಿಗ್ರಹಿಸಿ ವಿವಾಹವಾಗಿರಿ.ಈಕೆಯಿಂದ ನಿಮಗೆ ಅನಂತ ಮಹಿಮೆಯುಳ್ಳ ದಕ್ಷ ಪ್ರಜಾಪತಿಯು ಹುಟ್ಟಿ  ಮುಂಬರುವ ಅನೇಕ ವಂಶಗಳಿಗೆ ಕರ್ತನಾಗಿ ಸೃಷ್ಟಿಕರ್ತನಾಗಿ ಶಾಶ್ವತ ಯಶಸ್ಸನ್ನು ಪಡೆಯುತ್ತಾನೆ” ಎಂದನು.

ಆ ರೀತಿಯಾಗಿ ಕರ್ತವ್ಯವನ್ನು ಉಪಶದೇಶಿಸಿದ ಚಂದ್ರನು ಪ್ರಚೇತಸರಿಗೂ, ಮಾರಿಷಳಿಗೂ  ಶಾಸ್ತ್ರೋಕ್ತರಿತ್ಯಾ ಕಲ್ಯಾಣವನ್ನು ಮಾಡಿಸಿದನು.ಮಾರಿಷಳ ಗರ್ಭದಲ್ಲಿ ಪ್ರಚೇತಸರಿಗೆ ಬ್ರಹ್ಮತೇಜವನ್ನು ಸಂತರಿಸಿಕೊಂಡನು ಲೋಕಾರಾಧ್ಯಾನಾದ ದಕ್ಷ ಪ್ರಜಾಪತಿ ಜನಿಸಿದನು.ಆತನೇ ಸಮಸ್ತ ಚರಾಚರ ಸರ್ವಸ್ವಕ್ಕೂ,  ಸುರಾಸುರ ಜೀವರಾಶಿಗೂ ಸೃಷ್ಟಿಕರ್ತನು” ಎಂದು ಹೇಳುತ್ತಿದ್ದಂತಹ ಪರಾಶರ ಮಹರ್ಷಿಯನ್ನು ಮೈತ್ರೇಯನು “ಆಚಾರ್ಯವರ್ಯಾ ! ಬ್ರಹ್ಮದೇವರ ಬಲಗಾಲಿನ ಹೆಬ್ಬೆರಳಿನಿಂದ ಅವತರಿಸಿ, ನವಬ್ರಹ್ಮರಲ್ಲಿ ಒಬ್ಬನಾಗಿ ಪ್ರಸಿದ್ಧಿಯನ್ನು ಪಡೆದ ಮಹನೀಯನಾದ ದತ್ತ ಪ್ರಜಾಪತಿ ಪ್ರಜೆತಸರಿಗೆ ಸುತಲಾಗಿ ಹುಟ್ಟುವುದು ಯಾವ ರೀತಿಯಾಗಿ ಸಂಭವಿಸಿತು. ಅದನ್ನು ವಿವರವಾಗಿ ಹೇಳಿ ”ಎಂದು ಕೇಳಿದನು. ಶಿಷ್ಯನ ಪ್ರಶ್ನೆಗೆ ಉತ್ತರವಾಗಿ ಪರಾಶರ ಮುನಿಯು ಪ್ರೀತಿಯಿಂದ ಈ ರೀತಿ ಹೇಳಿದನು.“ ಮೈತ್ರೇಯಾ! ನವ ಬ್ರಹ್ಮರಲ್ಲಿ ಏಳನೆಯವನಾದ ದಕ್ಷ ಪ್ರಜಾಪತಿ ಒಳ್ಳೆಯ ತಪಸ್ಸಂಪನ್ನನು. ಆತನು ಪದ್ಕಕಲ್ಪ ವರಾಹಾದಿ ಕಲ್ಪಾದ್ಯವಸಾನಗಳಿಗೆ  ಅತೀತವಾದ ಆಯುಷ್ಮಂತನು. ಪ್ರತಿಯೊಂದು ಮಹಾಕಲ್ಪದ ಆರಂಭದ ಸಮಯದಲ್ಲಿ ಶೂನ್ಯವಾಗುವ ವಿಶ್ವವನ್ನು ಪುನರ್ನಿ ರ್ಮಿಸುವುದಕ್ಕಾಗಿ ಆಯಾ ಮನ್ವಂತರಗಳಲ್ಲಿ, ಯುಗಗಳಲ್ಲಿ ಒಬ್ಬೊಬ್ಬ ಪ್ರಜಾಪತಿಯು ದಕ್ಷ ಸಂಜ್ಞೆಯಿಂದ ಅವತರಿಸಿ ಸೃಷ್ಟಿ ವಿಲಾಸಕ್ಕೆ ಕರ್ತವನ್ನಾಗಿ ಪ್ರಖಾೄತಿ ಪಡೆದಿದ್ದಾನೆ.ಅವರಲ್ಲಿ ನೀನು ಕೇಳಿದ ಪ್ರಚೇತಸರ  ಸುತನು ಆದ ದಕ್ಷ ಪ್ರಜಾಪತಿಯ ಚರಿತ್ರೆಯನ್ನು ಶ್ರವಣಾನಂದಕರವಾಗಿ ನಿನಗೆ ಹೇಳುತ್ತಿದ್ದೇನೆ ಕೇಳು.

ಹಿಂದಿನ ಲೇಖನರಾಜ್ಯದ ಜನರ ಪಾಲಿನ‌ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದ್ದರೆ ನಮಗೆ ತೆರಿಗೆ ಹೆಚ್ವಿಸುವ ಅಗತ್ಯ ಬೀಳುತ್ತಿರಲಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದಿನ ಲೇಖನಚಿಕ್ಕಬಳ್ಳಾಪುರ: ಪೊಲೀಸ್ ಠಾಣೆ ಎದುರೇ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ