ಮನೆ ಸುದ್ದಿ ಜಾಲ ಗರ್ಭಿಣಿಯನ್ನು ಬೈಕ್​​ನಲ್ಲಿ ಕರೆತಂದ ಪತಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ

ಗರ್ಭಿಣಿಯನ್ನು ಬೈಕ್​​ನಲ್ಲಿ ಕರೆತಂದ ಪತಿ ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ

0

ಚಾಮರಾಜನಗರ:  ಹೆರಿಗೆ ನೋವಲ್ಲಿದ್ದ ಪತ್ನಿಯನ್ನು ಪತಿ ಬೈಕ್ ನಲ್ಲಿ ಆಸ್ಪತ್ರೆಗೆ ಕರೆತಂದಿದ್ದು, ಸಿಬ್ಬಂದಿ ಯಾರು ಇಲ್ಲದ ಕಾರಣದಿಂದಾಗಿ ಆಸ್ಪತ್ರೆಗೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕುಡ್ಲೂರು ಗ್ರಾಮದಲ್ಲಿ ನಡೆದಿದೆ.

ಸೂಳೆಕೋಬೆ ಗ್ರಾಮದ ಕುಮಾರ್ ಎಂಬುವವ ಪತ್ನಿ ಕವಿತಾ ತನ್ನ ತಾಯಿ ಮನೆ ಹೂಗ್ಯಂನಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು.  ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಬೈಕ್​​ನಲ್ಲಿಯೇ 4-5 ಕಿಮೀ ದೂರವಿರುವ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಯಾರೂ ಇಲ್ಲದೇ ಆಸ್ಪತ್ರೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಿಡಿದುಕೊಳ್ಳುವುದೋ, ಪತ್ನಿಯನ್ನು ಸಂತೈಸುವುದೋ ಎಂದು ತೋಚದೇ ಪತಿ ಕುಮಾರ್ ಆಸ್ಪತ್ರೆ ಮುಂಭಾಗವೇ ಪರದಾಡಿದ್ದಾರೆ.

ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯ ಹತ್ತಿರದಲ್ಲಿದ್ದ ಸ್ಥಳೀಯರು ಇವರಿಗೆ ನೆರವಾಗಿದ್ದಾರೆ.