ಮನೆ ಅಂತಾರಾಷ್ಟ್ರೀಯ ಕುಂಭಕೋಣಂನಿಂದ ಕಳುವಾಗಿದ್ದ ಪುರಾತನ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ

ಕುಂಭಕೋಣಂನಿಂದ ಕಳುವಾಗಿದ್ದ ಪುರಾತನ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ

0

ಚೆನ್ನೈ(Chennai): ತಮಿಳುನಾಡಿನ ಕುಂಭಕೋಣಂನ ದೇವಸ್ಥಾನದಿಂದ ಕಳವು ಮಾಡಲಾಗಿದ್ದ ಕಾಳಿಂಗನರ್ತನ ಕೃಷ್ಣನ ವಿಗ್ರಹ ಸೇರಿದಂತೆ ಮೂರು ಪುರಾತನ ವಿಗ್ರಹಗಳು ಯುಎಸ್‌ಎಯ ವಸ್ತುಸಂಗ್ರಹಾಲಯ( ಹರಾಜು ಮನೆ)ದಲ್ಲಿ ಪತ್ತೆಯಾಗಿವೆ.

ಐಡಲ್ ವಿಂಗ್ ಸಿಐಡಿ ಗುರುವಾರ ಈ ಕುರಿತು ಮಾಹಿತಿ ನೀಡಿದ್ದು, ಕುಂಭಕೋಣಂನ ಸುಂದರ ಪೆರುಮಾಳ್ಕೋವಿಲ್ ಗ್ರಾಮದ ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದಿಂದ ಕಾಳಿಂಗನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ಕಂಚಿನ ವಿಗ್ರಹಗಳನ್ನು ಕಳವು ಮಾಡಲಾಗಿತ್ತು ಎಂದು ಹೇಳಿದೆ.

ಸುಮಾರು 60 ವರ್ಷಗಳ ಹಿಂದೆ ದೇವಾಲಯದಲ್ಲಿ ಕಾಳಿಂಗನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ವಿಗ್ರಹಗಳನ್ನು ನಕಲಿ ವಿಗ್ರಹಗಳೊಂದಿಗೆ ಬದಲಾಯಿಸಲಾಗಿತ್ತು ಮತ್ತು ಅದು ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಗ್ರಹಗಳು ಯುಎಸ್‌ನ ವಸ್ತುಸಂಗ್ರಹಾಲಯ, ಹರಾಜು ಕೇಂದ್ರಗಳಲ್ಲಿದ್ದು, ತನಿಖೆಯ ನಂತರ, ವಿಗ್ರಹಗಳನ್ನು ಸೌಂದರರಾಜ ಪೆರುಮಾಳ್ ದೇವಸ್ಥಾನಕ್ಕೆ ಮರುಸ್ಥಾಪಿಸಲು ತಮಿಳುನಾಡಿಗೆ ಮರಳಿಸಲು ಕೋರಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಐಡಲ್ ವಿಂಗ್ ಡಿಜಿಪಿ ಕೆ ಜಯಂತ್ ಹೇಳಿದ್ದಾರೆ.

ಹಿಂದಿನ ಲೇಖನಭಾರತ್ ಜೋಡೋ ಯಾತ್ರೆ ಕಾಂಗ್ರೆಸ್’ಗೆ ಜೀವ ರಕ್ಷಕವಾಗಲಿದೆ: ಜೈರಾಮ್‌ ರಮೇಶ್‌
ಮುಂದಿನ ಲೇಖನಹಿಜಾಬ್ ವಿವಾದ: ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ