ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಅತ್ತಿಗೆಯನ್ನೇ ಮೈದುನ ಹತ್ಯೆಗೈದಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೊಸೂರು ಗ್ರಾಮದ ಮುಖ್ಯರಸ್ತೆಯ ಸಿಂಗಸಂದ್ರದಲ್ಲಿ ನಡೆದಿದೆ.
ಬಿಹಾರ ಮೂಲದ ಗುಡಿಯಾ ಬೇಬಿ(42) ಯನ್ನು ರಾಜೇಶ್ ಕುಮಾರ್ ಹತ್ಯೆ ಮಾಡಿದ್ದಾರೆ. ಮೊಬೈಲ್ ಗಾಗಿ ಅಕ್ಕ ಗುಡಿಯಾ ಬೇಬಿ ಹಾಗೂ ತಂಗಿ ಗೀತಾ ಕುಮಾರಿ ಜಗಳ ಮಾಡಿದ್ದಾರೆ. ಜಗಳ ಬಿಡಿಸಲು ಬಂದಿದ್ದ ಗುಡಿಯಾ ತಂಗಿ ಗಂಡ ರಾಜೇಶ್ ಕುಮಾರ್ ನನ್ನ ಗುಡಿಯಾ ಬೇಬಿ ನಿಂದಿಸಿದ್ದಾಳೆ. ಹೀಗಾಗಿ ಸಿಟ್ಟಿನಿಂದ ಅತ್ತಿಗೆ ಮೇಲೆ ದೊಣ್ಣೆಯಿಂದ ಮೈದುನ ಥಳಿಸಿದ್ದಾರೆ.
ಹಲ್ಲೆಗೊಳಗಾಗಿದ್ದ ಗುಡಿಯಾ ಬೇಬಿ ಗಾಯಗೊಂಡಿದ್ದರು. ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜೇಶ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.














