ತಮಿಳುನಾಡು(Tamilnadu): ತಮಿಳುನಾಡಿನ ಅಯ್ಯಂಪಟ್ಟಿ ಗ್ರಾಮದಲ್ಲಿ 12ನೇ ತರಗತಿಯ ಮತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಎರಡು ವಾರಗಳ ಅವಧಿಯಲ್ಲಿ ನಾಲ್ಕನೇ ಪ್ರಕರಣವಾಗಿದೆ.
ಮನೆಯಲ್ಲಿ ವಿದ್ಯಾರ್ಥಿನಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ದೂರು ದಾಖಲಾಗಿದೆ ಹಾಗೂ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಿರುಧ್ ನಗರ್ ನ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
13 ಜುಲೈನಿಂದ ಈವರೆಗೆ 12ನೇ ತರಗತಿಯ ಇತರ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಮಿಳುನಾಡಿಲ್ಲಿ ಆತಂಕಕ್ಕೆ ಕಾರಣವಾಗಿದೆ.