ಮನೆ ಸುದ್ದಿ ಜಾಲ ವೇತನ ದ್ವಿಗುಣ; ಗ್ರಂಥಾಲಯ ಸಹಾಯಕರಿಂದ ರಾಕೇಶ್ ಸಿಂಗ್ ಗೆ ಅಭಿನಂದನೆ

ವೇತನ ದ್ವಿಗುಣ; ಗ್ರಂಥಾಲಯ ಸಹಾಯಕರಿಂದ ರಾಕೇಶ್ ಸಿಂಗ್ ಗೆ ಅಭಿನಂದನೆ

0

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಗರ ಕೇಂದ್ರ ಗ್ರಂಥಾಲಯಗಳ ಸಹಾಯಕರ ಬಹುದಿನಗಳ ವೇತನ ಸಮಸ್ಯೆಗೆ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್ ಅವರು ಪರಿಹಾರ ಸೂಚಿಸಿದ್ದು ಕಳೆದ ಗ್ರಂಥಾಲಯ ಸಮಿತಿ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಗ್ರಂಥಾಲಯ ಸಹಾಯಕರ ವೇತನವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದ್ದಾರೆ.

ಒಟ್ಟು ಬೆಂಗಳೂರು ನಗರದ 5 ವಲಯದ ವ್ಯಾಪ್ತಿಯಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಂಥಾಲಯ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದು ಅವರು ಪಡೆಯುತ್ತಿದ್ದ ₹6.500 ರೂ. ಮಾಸಿಕ ವೇತನ ಈಗ ದ್ವಿಗುಣಗೊಂಡಿದ್ದು ಪ್ರಸಕ್ತ ಸಾಲಿನಿಂದ ಮಾಸಿಕ ₹13,000 ರೂಪಾಯಿಗಳ ವೇತನ ಪಡೆಯಲಿದ್ದಾರೆ.

ಬಹುವರ್ಷಗಳ ಬೇಡಿಕೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಈಡೇರಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರಾದ ಶ್ರೀ ರಾಕೇಶ್ ಸಿಂಗ್ ಅವರನ್ನು ಗ್ರಂಥಾಲಯ ಸಹಾಯಕರ ಸಂಘದ ಪದಾಧಿಕಾರಿಗಳಾದ ಲಂಕೇಶ್ ಮತ್ತು ಮಮತಾ ಅವರು ಸನ್ಮಾನಿಸಿ ಅಭಿನಂದಿಸಿದರು..

ಹಿಂದಿನ ಲೇಖನಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಎಎಸ್ ಐ ಅಪರಾಧಿ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ
ಮುಂದಿನ ಲೇಖನಜ.31ರಿಂದ ನೈಟ್ ಕರ್ಫ್ಯೂ ರದ್ದು: ಸೋಮವಾರದಿಂದ ಬೆಂಗಳೂರಿನ ಶಾಲೆಗಳು ಓಪನ್