ಮನೆ ಕೃಷಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಎಸ್.ಟಿ.ಸೋಮಶೇಖರ್ ಗೆ ಮನವಿ ಸಲ್ಲಿಕೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಎಸ್.ಟಿ.ಸೋಮಶೇಖರ್ ಗೆ ಮನವಿ ಸಲ್ಲಿಕೆ

0

ಮೈಸೂರು(Mysuru): ಮೈಸೂರು ಮುಡಾ ಕಡತ ನಾಪತ್ತೆ ಪ್ರಕರಣ ಸಿಐಡಿ ತನಿಖೆಗೆ ಒತ್ತಾಯಿಸಿ ಇಂದು ನಗರದ ಹೊಸ ಹಾಲಿನ ಡೈರಿ ಬಳಿ  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಡತಗಳಲ್ಲಿ ನಾಪತ್ತೆಯಾಗಿರುವ ಪ್ರಕರಣ ಅಕ್ರಮ ಚಟುವಟಿಕೆ, ಸರ್ಕಾರಿ ಭೂಮಿ ಕಬಳಿಕೆ, ಒತ್ತುವರಿ, ರೈತರ ಜಮೀನುಗಳಿಗೆ ಕಡಿಮೆ ಹಣ ನೀಡಿ ಖಾಸಗಿ ರಿಯಲ್ ಎಸ್ಟೇಟ್ ನವರಿಗೆ ವರ್ಗಾವಣೆ ಮಾಡಿರುವ ಕುರಿತು ಹಾಗೂ ಮುಡಾದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರಗಳ ಕಳೆದ ಹತ್ತು ವರ್ಷಗಳಿಂದ ಸಂಪೂರ್ಣ ವಿವರಗಳ ಬಗ್ಗೆ ಸಿಓಡಿ ತನಿಖೆ ನಡೆಯಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರೇ ಆಗಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ರೈತರು ಬೆಳೆದ ಅಪಾರ ಬೆಳೆ ಹಾನಿಯಾಗಿ ನಷ್ಟವಾಗಿದೆ. ಕೂಡಲೇ ತೋಟಗಾರಿಕೆ, ಕೃಷಿ ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ, ನಷ್ಟ ಪರಿಹಾರ ಕೊಡಿಸಬೇಕು., ಬಲವಂತದಿಂದ ರೈತರ ಸಾಲ ವಸೂಲಿ ಮಾಡುತ್ತಿರುವ ಬ್ಯಾಂಕ್ ಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಹತ್ತು ದಿನಗಳೊಳಗಾಗಿ ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ ಮುಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದವರು  ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಿರಗಸೂರು ಶಂಕರ್, ಅತ್ತಹಳ್ಳಿ ದೇವರಾಜ್, ಪ್ರದೀಪ, ರಾಜೇಂದ್ರ, ಮಹದೇವ, ಮಹಲಿಂಗ, ಬರಡನಪುರ ನಾಗರಾಜ್, ಬಿ.ಜಯರಾಮ ವರಕೋಡು ಸೇರಿದಂತೆ ಇತರರು ಉಪಸ್ಥಿತರಿದ್ದರು.