ಕೇಂದ್ರ ಸರ್ಕಾರ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ೧೧೫೧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಒಂದು ವರ್ಷ ಅವಧಿಯ ಹುದ್ದೆ ನಿರ್ವಹಿಸಲು ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ ೩೧ ಆಗಿದೆ.
೧೧೫೧ ಹುದ್ದೆಗಳಲ್ಲಿ ಕರ್ನಾಟಕ ವೃಂದಕ್ಕೆ ೨೮ ಹುದ್ದೆಗಳನ್ನು ನಿಗದಿ ಪಡಿಸಲಾಗಿದೆ. ಡಿಪ್ಲೊಮೊ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರ ಈ ಕೆಳಗಿನಂತಿದೆ.
ಹುದ್ದೆಯ ಹೆಸರು: ಟ್ರೇಡ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ: ೧೧೫೧
ಉದ್ಯೋಗ ಸ್ಥಳ: ಅಖಿಲ ಭಾರತ
ವೇತನ: ೧೧೦೦೦-೧೫೦೦೦ ರೂ. ಪ್ರತಿ ತಿಂಗಳು
ಎಲೆಕ್ಟ್ರಿಷಿಯನ್ ಟ್ರೇಡ್ ಹುದ್ದೆಗೆ ಐಟಿಐ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೧೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಡಿಪ್ಲೊಮಾ(ಎಲೆಕ್ಟ್ರಿಕಲ್) ಗೆ ೬ ಹುದ್ದೆಗಳು ಖಾಲಿ ಇದ್ದು, ಡಿಪ್ಲೊಮಾ ಇನ್‌ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೨೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಡಿಪ್ಲೊಮಾ(ಸಿವಿಲ್)ಗೆ ೨ ಹುದ್ದೆಗಳು ಖಾಲಿ ಇದ್ದು, ಡಿಪ್ಲೊಮಾ ಇನ್ಸಿವಿಲ್ ಇಂಜಿನಿಯರಿಂಗ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೨೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಪದವೀಧರ (ಎಲೆಕ್ಟ್ರಿಕಲ್)ಗೆ ೧೬ ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್ ಪದವಿ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೫೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಪದವೀಧರ (ಸಿವಿಲ್)ಹುದ್ದೆಗೆ ಬಿಇ, ಬಿಟೆಕ್ ಪದವಿ (ಸಿವಿಲ್ ಇಂಜಿನಿಯರಿಂಗ್) ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೫೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಕಾರ್ಯದರ್ಶಿ ಸಹಾಯಕರು ಹುದ್ದೆಗೆ ೧೦ನೇ ತರಗತಿ ಪಾಸ್ ಜೊತೆಗೆ ಸೆಕ್ರೆಟರಿಯಲ್ / ಕಮರ್ಷಿಯಲ್‌ಅಭ್ಯಾಸ ಮಾಡಿಮತ್ತು/ಅಥವಾ ಮೂಲಭೂತ ಕಂಪ್ಯೂಟರ್ ಅಪ್ಲಿಕೇಶನ್‌ಗಳು ತಿಳಿದರಬೇಕು ೧೧೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಸಿಎಸ್‌ಆರ್ ಎಕ್ಸಿಕ್ಯೂಟಿವ್‌ಹುದ್ದೆಗೆ ಎಂಎಸ್‌ಡಬ್ಲ್ಯೂ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ೧೫೦೦೦ ರೂ ಮಾಸಿಕ ವೇತನ ನೀಡಲಾಗುವುದು.
ಕಾರ್ಯನಿರ್ವಾಹಕ (ಕಾನೂನು) ಕಾನೂನು ಹುದ್ದೆಗೆ ಪದವಿಮಾಡಿರುವ ಅಭ್ಯರ್ಥಿಗಳು ೧೫೦೦೦ ರೂ ಮಾಸಿಕ ವೇತನ ನೀಡಲಾಗುವುದು.
ವಯೋಮಿತಿ ಸಡಿಲಿಕೆ: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ನಿಯಮಗಳ ಪ್ರಕಾರ
ಅರ್ಜಿ ಶುಲ್ಕವಿಲ್ಲವಿರುವುದಿಲ್ಲ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ:ಮೆರಿಟ್ ಪಟ್ಟಿ, ದಾಖಲೆಗಳ ಪರಿಶೀಲನೆ
ವಿಶೇಷ ಸೂಚನೆ: ಪದವಿ ಅಂತಿಮ ವರ್ಷದ ಫಲಿತಾಂಶ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ.
ಒಂದು ವರ್ಷಕ್ಕಿಂತ ಹೆಚ್ಚಿನ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಟ್ರೆಂಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಅನರ್ಹರು.
ಯಾವುದೇ ಅವಧಿಯಲ್ಲಿ ಯಾವುದೇ ಸಂಸ್ಥೆಯಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಪಡೆದವರು ಕೂಡ ಅರ್ಜಿ ಸಲ್ಲಿಸುವಂತಿಲ್ಲ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ೦೭ ಜುಲೈ ೨೦೨೨
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೩೧-ಜುಲೈ-೨೦೨೨
ಅಧಿಕೃತ ವೆಬ್‌ಸೈಟ್: powergridindia.com
ಅರ್ಜಿ ಸಲ್ಲಿಕೆ ವಿಧಾನ: ನೇಮಕಾತಿ ಅಧಿಸೂಚನೆ ೨೦೨೨ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಅಧಿಕೃತ ವೆಬ್‌ಸೈಟ್ ಲಕ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.