ಮನೆ ಶಿಕ್ಷಣ ಜೆಇಇ ಮುಖ್ಯ ಪರೀಕ್ಷೆ ಸೆಷನ್ ೧ರ ಫಲಿತಾಂಶ ಪ್ರಕಟ: ಸೆಷನ್ ೨ಕ್ಕೆ ನೋಂದಣಿ ಆರಂಭ

ಜೆಇಇ ಮುಖ್ಯ ಪರೀಕ್ಷೆ ಸೆಷನ್ ೧ರ ಫಲಿತಾಂಶ ಪ್ರಕಟ: ಸೆಷನ್ ೨ಕ್ಕೆ ನೋಂದಣಿ ಆರಂಭ

0

ನವದೆಹಲಿ(New Delhi): ೨೦೨೨ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯ ಸೆಷನ್ ೧ರ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ನೋಡಬಹುದಾಗಿದೆ.
ಜೂನ್ ೨೦ರಿಂದ ಜೂನ್ ೨೯ರ ವರೆಗೆ ಪರೀಕ್ಷೆ ನಡೆಸಲಾಗಿತ್ತು. ಅಂತಿಮ ಕೀ ಉತ್ತರವನ್ನು ಜುಲೈ ೬ರಂದು ಬಿಡುಗಡೆ ಮಾಡಲಾಗಿದೆ. ಸೆಷನ್ ೧ರಲ್ಲಿ ಅಗತ್ಯವಿರುವ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಸೆಷನ್ ೨ಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಸೆಷನ್ ೨ ರ ಮುಕ್ತಾಯದ ನಂತರ ಅಂತಿಮ ಕಟ್ ಆಫ್ ಅನ್ನು NTA ಘೋಷಿಸುತ್ತದೆ.
ಈ ನಡುವೆ ಜೆಇಇ ಮುಖ್ಯ ಸೆಷನ್ ೨ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು.

ಹಿಂದಿನ ಲೇಖನ೧೧೫೧ ಅಪ್ರೆಂಟಿಸ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮಡಿಕೇರಿಯಲ್ಲಿ ಮುಂದುವರೆದ ಮಳೆ: ಹಾರಂಗಿ ಜಲಾಶಯದಿಂದ ೨೧,೧೬೬ ಕ್ಯುಸೆಕ್ ನೀರು ನದಿಗೆ