ಮನೆ ಉದ್ಯೋಗ ಬಿಎಂಟಿಸಿಯಲ್ಲಿ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಿಎಂಟಿಸಿಯಲ್ಲಿ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಖಾಲಿ ಇರುವ 2,500 ನಿರ್ವಾಹಕರ ಹುದ್ದೆ ಭರ್ತಿಗೆ (BMTC Conductors Recruitment) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ.

ಮಿಕ್ಕುಳಿದ ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಮಾ.10ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆಯಾಗಿ ದ್ವಿತೀಯ ಪಿಯು ಅಥವಾ ತತ್ಸಮಾನ ತರಗತಿ ಪೂರ್ಣಗೊಳಿಸಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿಗೆ 38, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ ವಯೋಮಿತಿ. ಮಾಹಿತಿಗೆ cetonline.karnataka.gov.in ಗೆ ಭೇಟಿ ನೀಡಿ (Bangalore BMTC)

ದೇಹದಾರ್ಢ್ಯತೆ: ಪುರುಷರು 160 ಸೆ.ಮೀ, ಮಹಿಳೆಯರು 150 ಸೆಂ. ಮೀ ಎತ್ತರ

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ. ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಹಾಗೂ ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ವೇತನ: ಅಭ್ಯರ್ಥಿಗಳ ಒಂದು ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ 9,100 ರೂ ಮತ್ತು ವರ್ಷದ ಬಳಿಕ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕವಾದಲ್ಲಿ ಮಾಸಿಕ 18,660- 25,300 ರೂ ವೇತನ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆ ತೃಪ್ತಿಕರವಾಗಿ ಪೂರೈಸಿದ ಬಳಿಕ ಅಭ್ಯರ್ಥಿಗಳ ನೇಮಕಾತಿಯನ್ನು ಪ್ರಾಧಿಕಾರದಿಂದ ಖಾಯಂಗೊಳಿಸಲಾಗುವುದು.

ಆಯ್ಕೆ: ಸ್ಪರ್ಧಾತ್ಮಕ ಪರೀಕ್ಷೆ

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 750 ರೂ ಮತ್ತು ಪ.ಜಾ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ನಿಗದಿಸಲಾಗಿದೆ.

ಮಾ. 6ಕ್ಕೆ ಕೆಎಸ್ ಆರ್ ಟಿಸಿ ಚಾಲಕ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ

ಕೆಎಸ್ ಆರ್ ಟಿಸಿ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಿ ಕೊಳ್ಳಲಾಗುತ್ತಿರುವ ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಾ. 6ರಂದು ದಾಖಲಾತಿ, ದೇಹದಾರ್ಢತೆ ಪರಿಶೀಲನೆ ನಡೆಸಲಾಗುತ್ತಿದೆ. ಕೆಎಸ್ ಆರ್ ಟಿಸಿ ಯು 2 ಸಾವಿರ ಚಾಲಕ ಕಂ ನಿರ್ವಾಹಕರ ನೇಮಕಾತಿಗೆ ಸಂಬಂಧಿಸಿ 2020ರ ಫೆ. 14ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಇದೀಗ ಮಾ. 6ರಂದು ದಾಖಲಾತಿ ಮತ್ತು ದೇಹದಾರ್ಢತೆ ಪರಿಶೀಲನೆ ನಡೆಸಲಾಗುತ್ತಿದೆ. ಮಾ. 3ರಂದು ಕೆಎಸ್ ಆರ್ ಟಿಸಿ ವೆಬ್‌ ಸೈಟ್ https://ksrtc.in/pages/recruitment.html ನಲ್ಲಿ ಅರ್ಹ ಅಭ್ಯರ್ಥಿಗಳ ಕರೆಪತ್ರ ದೊರೆಯಲಿದ್ದು, ಅದನ್ನು ಡೌನ್‌ ಲೋಡ್ ಮಾಡಿ ಕೊಂಡು, ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯದಲ್ಲಿ ಪರಿಶೀಲನೆಗೆ ಹಾಜರಾ ಗುವಂತೆ ಕೆಎಸ್ ಆರ್ ಟಿಸಿ ತಿಳಿಸಿದೆ.

ಹಿಂದಿನ ಲೇಖನಸೇವಾಲಾಲ್ ಅವರು ಸಮಾಜವನ್ನು ಬೆಳೆಸಲು ಹೋರಾಡಿದ ವೀರ ಯೋಧ: ಡಾ. ಎ.ಆರ್ ಗೋವಿಂದ ಸ್ವಾಮಿ
ಮುಂದಿನ ಲೇಖನಬೆಂಗಳೂರು: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ