ಮೈಸೂರು: 2024-25ನೇ ಶೈಕ್ಷಣಿಕ ಸಾಲಿಗೆ ತಿಲಕ್ ನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ ಸಂಸ್ಥೆಯಲ್ಲಿ ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯಾ ವಿದ್ಯಾರ್ಥಿನಿಯಾಗಿ ಉಚಿತವಾಗಿ 1ನೇ ತರಗತಿಯಿಂದ 10ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಒಂದನೇ ತರಗತಿಗೆ 06 ವರ್ಷದಿಂದ 09 ವರ್ಷದೊಳಗಿನ ಕಿವುಡ ಬಾಲಕ/ಬಾಲಕಿಯರು, ವಿಕಲಚೇತನ ಕಾರಣದಿಂದಾಗಿ ಇದುವರೆವಿಗೂ ಶಾಲೆಗೆ ದಾಖಲಾಗದವರನ್ನು ಹಾಗೂ ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಗಂಡು ಮಕ್ಕಳು ಬಯಸಿದಲ್ಲಿ ಅವರನ್ನೂ ಸಹ ದಾಖಲು ಮಾಡಿಕೊಳ್ಳಲಾಗುತ್ತದೆ.
ಸದರಿ ಶಾಲೆಗೆ ಶ್ರವಣದೋಷವುಳ್ಳ ಮಕ್ಕಳನ್ನು ಸೇರಿಸಲು ಇಚ್ಚಿಸುವ ತಂದೆ-ತಾಯಿ ಅಥವಾ ಪೋಷಕರು ಪ್ರವೇಶದ ಅರ್ಜಿಯನ್ನು ಶಾಲಾ ಕಛೇರಿಯಲ್ಲಿ ಉಚಿತವಾಗಿ ಪಡೆದು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಶಾಲೆಗೆ ದಾಖಲಾಗಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಿಲಕ್ ನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕ ಕಚೇರಿಯ ದೂ.ಸಂ:0821-2494104 ಹಾಗೂ ಅಧೀಕ್ಷಕರ ದೂ.ಸಂ: 9449010499 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಲಕ ನಗರದ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.