ಮನೆ Uncategorized ಕೆಎಸ್‌ ಆರ್‌ ಟಿಸಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ

ಕೆಎಸ್‌ ಆರ್‌ ಟಿಸಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ

0

13000 ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇವೆ. ಇವುಗಳ ಭರ್ತಿ ಕುರಿತು ನೇರ ನೇಮಕಾತಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಇವುಗಳ ಭರ್ತಿ ಮಾಡಲಾಗುತ್ತದೆ ಎಂದು ಕಳೆದ ಒಂದು ವರ್ಷದಿಂದ ಸಾರಿಗೆ ಸಚಿವರು ಅದೇ ಹಳೇ ಕ್ಯಾಸೆಟ್‌ ಅನ್ನು ಓದಲ್ಲಿ ಬಂದಲೆಲ್ಲ, ಶೀಘ್ರವಾಗಿ ಭರ್ತಿ ಮಾಡಲಾಗುತ್ತದೆ, ಶೀಘ್ರವಾಗಿ ಭರ್ತಿ ಮಾಡಲಾಗುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ಆ ಶೀಘ್ರತೆ ಯಾವಾಗ ಎಂಬುದು ಮಾಧ್ಯಮದವರಿಗೂ ತಿಳಿಯದ ವಿಷಯ. ಆದ್ರೆ ಸದ್ಯಕ್ಕೆ ಈಗ ಖಾಲಿ ಇರುವ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರ ಹುದ್ದೆಗಳನ್ನು ಆಯಾ ಬಸ್‌ ಡಿಪೋಗಳು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಿವೆ. ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಬಹುದಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಚಾಲಕರ ಹುದ್ದೆ ಭರ್ತಿ ಮಾಡುತ್ತಿರುವ ಡಿಪೋಗಳು

ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ.ಸಂಪರ್ಕಿಸಲು ದೂರವಾಣಿ ಸಂಖ್ಯೆಗಳು: 8050980889, 8618876846.

ರಾಮನಗರ ಹಾಗೂ ಆನೇಕಲ್ ತಾಲ್ಲೂಕು ಕೆಎಸ್‌ಆರ್‌ಟಿಸಿ ಬಸ್‌ ಡಿಪೋ.ಸಂಪರ್ಕಿಸಲು ದೂರವಾಣಿ ಸಂಖ್ಯೆಗಳು: 8050980889, 8618876846.

ವೇತನ ಹಾಗೂ ಸೌಲಭ್ಯ ವಿವರಗಳು

ಮಾಸಿಕ ವೇತನ : ರೂ.23,000.

ಇತರೆ ಸೌಲಭ್ಯ: ಇಎಸ್‌ಐ, ಇಪಿಎಫ್‌ ಸೌಲಭ್ಯ ಇರುತ್ತದೆ.

ಅರ್ಹತೆಗಳು

ಹೆವಿ ಮೋಟಾರ್ ವಾಹನ ಚಾಲಕರಾಗಿ 2 ವರ್ಷಗಳ ಅನುಭವ ಹೊಂದಿರಬೇಕು.

ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್‌ ಹೊಂದಿರಬೇಕು.

ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು.

ಹುದ್ದೆಗಳ ಕುರಿತು ಇತರೆ ಹೆಚ್ಚಿನ ಷರತ್ತು ಮತ್ತು ನಿಯಮಗಳನ್ನು ತಿಳಿಯಲು ಮೇಲೆ ನೀಡಲಾದ ಸಂಪರ್ಕ ಸಂಖ್ಯೆಗಳಿಗೆ ಕರೆ ಮಾಡಿರಿ.

ಇವು ಹೊರಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು, ಹುದ್ದೆಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ನೇರ ನೇಮಕಾತಿ ಮಾಡಿಕೊಂಡ ನಂತರ ಈ ಹುದ್ದೆಯಿಂದ ಅಭ್ಯರ್ಥಿಗಳನ್ನು ತೆರವುಗೊಳಿಸಲಾಗುವುದು.

ಪ್ರಸ್ತುತ ಕೆಎಸ್‌ಆರ್‌ಟಿಸಿ ಮೇಲೆ ನಿಗದಿಪಡಿಸಿರುವ ಅರ್ಹತೆಗಳನ್ನು ಹೊಂದಿದ್ದರೆ ಸಾಕು, ಅಂತಹವರಿಗೆ ಬೇರೆ ಯಾವುದೇ ಪರೀಕ್ಷೆಗಳನ್ನು ಹೆಚ್ಚಿನದಾಗಿ ನಡೆಸದೇ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಹಿರಿಯ ಸಾಹಿತಿ ನಾಡೋಜ ಕಮಲಾ ಹಂಪನಾ ಇನ್ನಿಲ್ಲ