ಮನೆ ಉದ್ಯೋಗ ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

0

ಬೆಂ. ಗ್ರಾ ಜಿಲ್ಲೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಯೋಜನೆಯಾದ “ಯುವಸ್ಪಂದನ” ದಲ್ಲಿ ಯುವ ಪರಿವರ್ತಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

Join Our Whatsapp Group

ಪದವಿ ಹಾಗೂ ಮೇಲ್ಪಟ್ಟು ಶೈಕ್ಷಣಿಕ ಅರ್ಹತೆ, ವಯಸ್ಸು 21 ರಿಂದ 35 ವರ್ಷ ವಯಸ್ಸಾಗಿರಬೇಕು. ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ , ನೆಲಮಂಗಲ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು.

ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯಕ. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ಮತ್ತು ಕೌಶಲ್ಯ ಸಂಹವನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯ ಹೊಂದಿರಬೇಕು.

ಆಸಕ್ತಿಯುಳ್ಳವರು ಫೆಬ್ರವರಿ 28 ರೊಳಗೆ ಅರ್ಜಿಯನ್ನು ತಮ್ಮ ಸ್ವ- ವಿವರದೊಂದಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಠಡಿ ಸಂಖ್ಯೆ-112, ಬೀರಸಂದ್ರ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ 9353321355 / 6360005441 ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.