ಮನೆ ರಾಜ್ಯ ಶೀಘ್ರವಾಗಿ 13 ಸಾವಿರ ಹುದ್ದೆಗಳ ನೇಮಕ: ಸಚಿವ ರಾಮಲಿಂಗಾರೆಡ್ಡಿ

ಶೀಘ್ರವಾಗಿ 13 ಸಾವಿರ ಹುದ್ದೆಗಳ ನೇಮಕ: ಸಚಿವ ರಾಮಲಿಂಗಾರೆಡ್ಡಿ

0

ದಾವಣಗೆರೆ: ಅತಿ ಶೀಘ್ರದಲ್ಲಿ 13 ಸಾವಿರ ದಷ್ಟು ಹುದ್ದೆಗಳ ನೇಮಕ ಮಾಡಿಕೊಳ್ಳ ಲಾಗುವುದು ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 13 ಸಾವಿರ ಹುದ್ದೆಗಳ ನೇಮಕಾತಿ ಜೊತೆಗೆ 5 ಸಾವಿರ ಹೊಸ ಬಸ್ ಖರೀದಿಸಲಾಗುವುದು. ಹುದ್ದೆಗಳ ನೇಮಕ, ಬಸ್ ಖರೀದಿ ನಂತರ ಕೊರೊನಾ ಕಾರಣಕ್ಕಾಗಿ ಗ್ರಾಮಾಂತರ ಭಾಗದಲ್ಲಿ ಸ್ಥಗಿತಗೊಳಿಸಲಾಗಿದ್ದ ಬಸ್ ಸಂಚಾರ ಪುನಾರಂಭಗೊಳಿಸಲಾಗುವುದು ಎಂದು ತಿಳಿಸಿದರು.

ಕೆಎಸ್ ಆರ್ ಟಿಸಿ, ಬಿಬಿಎಂಪಿ ಒಳಗೊಂಡಂತೆ ಎಲ್ಲ ವಿಭಾಗದಲ್ಲಿ ವಿದ್ಯುತ್ ಬಸ್ ಖರೀದಿ ಮಾಡಲಾಗುವುದು. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.‌ ಆದಷ್ಟು ಬೇಗ ವಿದ್ಯುತ್ ಬಸ್ ಖರೀದಿಸಿ ನಗರ ಸಾರಿಗೆ ವ್ಯವಸ್ಥೆಗೂ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಶಕ್ತಿ ಯೋಜನೆಯಿಂದ ಸಂಸ್ಥೆಗೆ ನಷ್ಟ ಆಗುವುದಿಲ್ಲ. ಯೋಜ‌ನೆ ಆರಂಭದ ನಂತರ 43 ಕೋಟಿಯಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಮಹಿಳೆಯರಿಂ ದಲೇ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ನಾಲ್ಕೂ ವಿಭಾಗದಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ದಿನಕ್ಕೆ 1.56 ಲಕ್ಷದಷ್ಡು ಷೆಡ್ಯೂಲ್ ಇದೆ. ಅದರಲ್ಲಿ ಒಂದರೆಡು ಮಾರ್ಗದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗಿರಬಹುದು. ನಮ್ಮ ವಿರೋಧ ಪಕ್ಷಗಳು ಅದನ್ನೇ ದೊಡ್ಡದ್ದಾಗಿ ಮಾಡುವ ಮೂಲಕ ಶಕ್ತಿ ಯೋಜನೆಯನ್ನೇ ಮುರಿಯುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ದೇವಾಲಯಗಳ ಅರ್ಚಕರಿಗೆ ನೇರವಾಗಿ ಹಣ ಸಂದಾಯ ಮಾಡಲು ಕಂದಾಯ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವರೂ ಆಗಿರುವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕಾಂಗ್ರೆಸ್ ನಲ್ಲಿ ಫ್ರೀಬರ್ಡ್ ನಂತಿದ್ದವರಿಗೆ ಬಿಜೆಪಿಯಲ್ಲಿ ಉಸಿರು ಗಟ್ಟುವ ವಾತಾವರಣ ಇರುವ ಕಾರಣಕ್ಕೆ ಮತ್ತೆ ಕಾಂಗ್ರೆಸ್ ಗೆ ಬರುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ನಮ್ಮ ಪಕ್ಷದಲ್ಲಿ ಫ್ರೀ ಬರ್ಡ್ ನಂತೆ ಓಡಾಡಿಕೊಂಡು ಇದ್ದವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇರುವ ಕಾರಣಕ್ಕೆ ಬಿಟ್ಟು ಬರುತ್ತಿದ್ದಾರೆ. ಅಲ್ಲಿ ಕೋಳಿಗಳನ್ನು ಕೆಜಿ ಗಟ್ಟಲೆ ತೂಕಕ್ಕೆ ಹಾಕುವಂತಹ ವಾತಾವರಣ ಇದೆ. ಹಾಗಾಗಿ ಮತ್ತೆ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿಯವರು ಹತಾಶರಾಗಿ ಏನಾದರೂ ಮಾಡಿ ಶಕ್ತಿ ಇತರೆ ಯೋಜನೆಗಳ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.