ಮನೆ ಜ್ಯೋತಿಷ್ಯ ಕುಂಭ ರಾಶಿ

ಕುಂಭ ರಾಶಿ

0

ರಾಶಿ ಚಕ್ರದಲ್ಲಿ 300 ಅಂಶಗಳಿಂದ 330 ಅಂಶಗಳವರೆಗೆ ಭೂಮಧ್ಯ ರೇಖೆಯಿಂದ  20ರಿಂದ 12 ಅಂಶಗಳವರೆಗೆ ಕುಂಭ ರಾಶಿಯ ಸ್ಥಾನವಿರುವುದು. ಇಂಗ್ಲೀಷಿನಲ್ಲಿ ಎಕ್ಟಾಇರಿಯಸ್ ಎಂದು ಈರಾಶಿಯನ್ನು ಕರೆಯುವರು. ಈ ರಾಶಿಯಲ್ಲಿ ಧನಿಷ್ಠ ಶತಭಿಷಾ ಪೂರ್ವಭಾದ್ರ ಪದ   ನಕ್ಷತ್ರಗಳು ಸೇರುತ್ತವೆ. ಕ್ರಮವಾಗಿ ಮಂಗಳ, ರಾಹು ಮತ್ತು ಗುರು ನಕ್ಷತ್ರ ಸ್ವಾಮಿಗಳಾಗಿದ್ದಾರೆ. ಕುಂಭ ರಾಶಿಯ ಸ್ವಾಮಿ ಶನಿಯಾಗಿರುವನು.

        ಜಲವಾಹಕ ರೂಪವಿದ್ದು, ವಸಂತಾಗಮನದ ಪೂರ್ವದಲ್ಲಿ ಸ್ವಲ್ಪಕಾಲದ ಮಳೆ ಮತ್ತು ಮಧುರ ರಸಗಳ ಪ್ರತೀಕವಾಗಿರುವುದು.ಸ್ವಾಮಿಭಕ್ತಿ ಧರ್ಮಪ್ರಿಯತೆ, ವಿಚಾರಶೀಲತೆ ಮತ್ತು ರಾಜಭಕ್ತಿಗಳ ಪ್ರತೀಕವೆನಿಸುವದು.ಪುರುಷನು ಹಗಲಿನಲ್ಲಿ ಕಳಶವನ್ನು ಹಿಡಿದಂತೆ ಆಕಾರ ಹೊಂದಿರುವುದು. ಪಶ್ಚಿಮ ದಿಕ್ಕಿನಲ್ಲಿ ಜನ ಕ್ರೀಡಾ ಸ್ಥಳ,ಈಜುಕೊಳ ಸಮುದ್ರ ತೀರ ಝರಿ,ಅಣೆಕಟ್ಟು ನಿರ್ಮಾಣ ಮದಿರೆ ಖನಿಜ ದ್ರವ್ಯಗಳೊಂದಿಗೆ ಸಂಬಂಧ ಹೊಂದುವುದು.

     ಶಾಂತ ಸ್ವಭಾವದ,ಮೃದ್ಧಾ ವಸ್ಥೆಯ, ಕೃಷ್ಣವರ್ಣದ, ತಮೋಗುಣದ ಸ್ವಲ್ಪ ಸಂತಾನವಿರುವ ಭ್ರಮಣಶೀಲ ಜಲಚರ ಅಥವಾ ಪರಿವಾರದಲ್ಲಿರುವ ತತ್ವಗಳನ್ನು ಒಳಗೊಂಡಿರುವುದು. ಈ ರಾಶಿಯು ಶಿರ್ಷೊದಯವನ್ನು ಹೊಂದಿದೆ ಲಂಪಟ ಜೂಜಾಟ ವೇಶ್ಯಾಗಾಮಿ ಮಂದಿರಾ ಪ್ರಿಯ ರಾಶಿ ಯಾಗಿರುವುದು.

     ಮ್ಲೇಚ್ಛದೇಶ ಈ ರಾಶಿಯ ಸ್ಥಾನವಾಗಿದೆ. ಕಾಲ ಪುರುಷನ ಶರೀರದಲ್ಲಿ ಕಣ್ಣು ಶ್ವಾಸ, ರಕ್ತ ಸಂಚಾಲನ, ಮೀನ ಖಂಡಗಳೊಡನೆ ಸಂಬಂಧ ಹೊಂದಿರುವವರು ರಾಷ್ಟ್ರದ ಪ್ರಗತಿ,ವಿಮಾನಯಾನ ಸಾಮಾಜಿಕ ಕಾರ್ಯಕ್ರಮಗಳು, ವಿದೇಶಿಯಾತ್ರೆಗಳ ಅಧ್ಯಯನ ವಿಷಯವನ್ನು ಹೊಂದಿದೆ. ನೀರಿನಿಂದ ಹುಟ್ಟುವ ಶಂಖ, ಹಣ್ಣು, ಹೂವು ಮತ್ತು ಚಿಪ್ಪು ಲೋಹ ಎಣ್ಣೆ, ಎಳ್ಳು, ಸಿಲ್ಕಾ, ವಿದ್ಯುತ್ ಮನೆ ಬಳಕೆಯ  ಎಲ್ಲ ಉಪಕರಣಗಳು   ಯಂತ್ರಗಳನ್ನು ಸಂಬಂಧಿಸಿರುವದು.

     ಸ್ವೀಡನ್, ಅಬಿಸೀನಿಯಾ,  ಜಪಾನ್, ಹ್ಯಾಂಬರ್ಗ, ಪಾಕಿಸ್ತಾನ ಅರಬ್ ರಾಷ್ಟ್ರಗಳು ದೇಶಗಳ ಪ್ರತಿನಿಧಿತ್ವ ರೂಪಿಸುವದು. ಪೂರ್ವದಲ್ಲಿ ಉದಯಿಸುವಾಗ,ಜನಿಸಿದವರು ಸಾಧಾರಣ ಶರೀರದ ಪರೋಪಕಾರ, ದಯಾಳು,ದಾರ್ಶನಿಕ, ಬುದ್ಧಿವಂತ,ಪ್ರಭಾವಶಾಲಿ  ಮಿತ್ರ ಸಮುದಾಯವನ್ನು ಹೊಂದಿದ ಬಾಷ್ಪಪಂಡಿತ,ಪ್ರಗತಿಶೀಲ,ಅಹಂಕಾರಿ, ಕಾಮುಕ, ಉದಾರ, ಸಾಹಿತ್ಯ ಪ್ರಿಯರ  ಜನ್ಮಕ್ಕೆ ಕಾರಣವೆನಿಸಿರುವದು.

 ಕುಂಭ ಲಗ್ನದಲ್ಲಿ ಜನಿಸಿದವರು ಶನಿ ಶುಭ ಸ್ಥಾನದಲ್ಲಿದ್ದರೆ ಭಾಗ್ಯಶಾಲಿಗಳಾಗುವರು. ಶ್ರೀಮಂತ ಕ್ರಾಂತಿಕಾರಿ ಲೇಖಕರು ವೈಜ್ಞಾನಿಕರು, ಸಮಾಜ ಸುಧಾರಕರು ವ್ಯವಸಾಯಿಗಳೂ ಕೂಡಾ ಆಗಬಹುದಾಗಿದೆ.ಸಂಶೋಧಕರು, ಪ್ರಾಧ್ಯಾಪಕರು, ಇಂಜಿನೀಯರು, ಕಠಿಣ  ಪರಿಶ್ರಮಿಗಳು ಲಾಭ ಪಡೆಯುವವರೂ ಆಗುವರು ಇವರಿಗೆ 25,28, 36, ಮತ್ತು 43ನೇ ವರ್ಷಗಳಲ್ಲಿ ಬಾಗ್ಯ ಉದವಾಗುವುದು.

     ವಾಯು ಪ್ರಕೋಪ, ಹೊಟ್ಟೆ ನೋವು ನಿರಂತರವಾದ ತೊಂದರೆಗಳು, ದಾಂಪತ್ಯ ಸುಖದಲ್ಲಿ ಸಾಧಾರಣ ಸಮಸ್ಯೆಗಳನ್ನು ಎದುರಿಸುವದು ಇವರಿಗೆ ಅನಿವಾರ್ಯವಾಗುವುದು.

        ಸೂರ್ಯನು ಈ ರಾಶಿಯಲ್ಲಿ ಫೆಬ್ರವರಿ 15ರಿಂದ ಮಾರ್ಚ 14 ರವರೆಗೆ  ಭಾರತೀಯ ರೀತಿಯಂತೆ ಪಾಲ್ಗುಣ ಮಾಸದಲ್ಲಿರುವನು. ಈ ಸಮಯದಲ್ಲಿ ಧನಾಭಾವ, ಹೃದಯ ರೋಗಗಳು ಬರಬಹುದು.ಸ್ವಾರ್ಥಿ, ಮಂತ್ರ ತಂತ್ರ ಕಲಿಯುವವ, ಗೂಢ ವಿದ್ಯಾಭಿಲಾಷಿ ಆಗಬಹುದಾಗಿದೆ.

     ಈ ರಾಶಿಯಲ್ಲಿ ಚಂದ್ರನಿರುವಾಗ ಜನಿಸಿದವರಿಗೆ ಮಧ್ಯಮ ಗಾತ್ರದ ಶರೀರ, ಅಧಿಕ ಕೂದಲುಗಳು,ಸೌಂದರ್ಯ ಪ್ರಸಾದನಗಳಲ್ಲಿ ಆಸಕ್ತಿ, ಸ್ತ್ರೀಪುರುಷರಲ್ಲಿ ಪರಸ್ಪರ ಆಕರ್ಷಣೆಗಳು ಉಂಟಾಗುವವು.ಪರಿಶ್ರಮಿಗಳು,  ಹೆಚ್ಚು ಖರ್ಚು ಮಾಡುವವರು,ಆಲಸಿಗಳು,ಮಾನವ ಸೇವೆಯಲ್ಲಿ ನಿರತರು ಮಿತ್ರರ ಕಾರ್ಯದಲ್ಲಿ ನೆರವಾಗಿ ದುಃಖಿಸುವವರೂ ಆಗುವರು.

     ಸಾಧಾರಣವಾಗಿ ಕುಂಭ ರಾಶಿಯವರು ಎತ್ತರದ ಶರೀರ,ವಿಕೃತ ದಂತಗಳುಳ್ಳವರು, ವ್ಯವಹಾರ ಕುಶಲರು, ವ್ಯಾಪಾರಿಗಳು ಹಸ್ತಕಲಾ ಪರಿಣಿತರು ಭಾವ ಜೀವಿಗಳೂ ಆಗುವರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ