ಬೆಂಗಳೂರು: ಅಸ್ತಿತದಲ್ಲಿದ್ದ ರಾಜ್ಯ ಅಡಕೆ ಕಾರ್ಯಪಡೆ ರಚಿಸಿ, ಬೆಳೆ ಸಂಶೋಧನೆಗೆ, ರಾಜ್ಯ ಸರಕಾರ ತಕ್ಷಣ ಹತ್ತು ಕೋಟಿ ರೂಪಾಯಿಗಳಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕರೂ ಹಾಗೂ ಮಾಜಿ ಗೃಹ ಸಚಿವರಾದ, ಆರಗ ಜ್ಞಾನೇಂದ್ರ ರವರು ಇಂದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿನಂತಿಸಿದ್ದಾರೆ.
ಅವರು ಇಂದು, ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ, ಸಹಕಾರ ಮಹಾಮಂಡಳದ ವತಿಯಿಂದ, ಆಯೋಜಿಸಲಾದ, ಅಡಕೆ ಬೆಳೆ, ಬೆಳೆಯುವ ಪ್ರದೇಶದ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಸಭೆಯನ್ನುದ್ದೇಶಿಸಿ, ಮಾತನಾಡುತ್ತಿದ್ದರು.
ರಾಜ್ಯದ, ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಗಳಲ್ಲಿ, ಅಡಕೆ ಬೆಳೆ ಬೆಳೆಯಲಾಗುತ್ತಿದ್ದು, ರೈತರ ಆರ್ಥಿಕ ಶಕ್ತಿಯಾಗಿರುವ ಅಡಕೆ ಬೆಳೆ ಇಂದು ಹತ್ತು ಹಲವು ಸಂಕಷ್ಟ ಗಳನ್ನೂ ಎದುರಿಸುತ್ತಿದೆ, ರೈತರ ಹಾಗೂ ಅಡಕೆ ಬೆಳೆಯ ಹಿತಾಸಕ್ತಿ ಕಾಯುವ, ಒಂದು ಜವಾಬ್ದಾರಿ ಸಂಸ್ಥೆಯಾಗಿರುವ ಅಡಕೆ ಕಾರ್ಯಪಡೆ ಯನ್ನು ಪುನಃ ರಚಿಸಬೇಕೆಂದು, ಅವರು ಕೋರಿದರು.
ರಾಜ್ಯ ಸರಕಾರವು, ಅಡಕೆ ಮಾರಾಟ ಸಹಕಾರ ಸಂಘಗಳಿಗೆ, ಎಪಿಎಂಸಿ ಗೋಡೌನ್ ಗಳಲ್ಲಿ ಸಂರಕ್ಷಿಸಿಡಲು ವಿಧಿಸಲಾಗುವ ದರವನ್ನು ಕಡಿತ ಮಾಡಬೇಕು, ಸೆಸ್ ರಿಯಾಯಿತಿ ನೀಡಬೇಕು ಎಂದೂ, ಆರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ರಾಜ್ಯ ಎಪಿಎಂಸಿ ಇಲಾಖೆ ಸಚಿವರಾದ ಶಿವಾನಂದ ಪಾಟೀಲ್ ಅವರು, ಮಾತನಾಡಿ, ರಾಜ್ಯದಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುವ ರೈತರು ಸಂಕಷ್ಟದಲ್ಲಿದ್ದು, ಅವರೆಲ್ಲರೂ ಭೇಧಭಾವ ಮರೆತು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ, ಎಂದರು.
ಗೋಡೌನ್ ಬಾಡಿಗೆ ರಿಯಾಯಿತಿ ನೀಡಲು ಭರವಸೆ ನೀಡಿದ ಸಚಿವರು, ಅಡಕೆ ಬೆಳೆ ಸಂಶೋಧನೆಗೆ, ತಕ್ಷಣ ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆ ಗೊಳಿಸುವ ಬಗ್ಗೆ, ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರದ, ದೆಹಲಿ ಪ್ರತಿನಿಧಿಗಳಾದ ಟಿ ಬಿ ಜಯಚಂದ್ರ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರೂ ಸಭೆಯಲ್ಲಿ ಭಾಗವಹಿಸಿದ್ದರು.