ಮನೆ ಅಪರಾಧ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಾಧಿಕಾರಿ

ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಾಧಿಕಾರಿ

0

ರಾಮನಗರ: ಪೌತಿ ಖಾತೆ ಮಾಡಲು ಗ್ರಾಮ ಲೆಕ್ಕಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ ಮಾಗಡಿ ತಾಲೂಕು ಕಚೇರಿಯಲ್ಲಿ ನಡೆದಿದೆ.

Join Our Whatsapp Group

ಲಂಚ ಪಡೆಯುತ್ತಿರುವ ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಿಗ ರಮೇಶ್ ನ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೌತಿ ಖಾತೆ ಮಾಡಲು 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ವಿಎ ರಮೇಶ್ ರೈತನ ಬಳಿ ಹಣಕ್ಕಾಗಿ ಧಮಕಿ ಹಾಕಿದ್ದಾನೆ.

ಕನಕಪುರದಲ್ಲಿ ಅಮಾನತುಗೊಂಡು ಮಾಗಡಿಗೆ ಬಂದು ಸೇರಿರುವ ರಮೇಶ್, ಕಳೆದ 6 ವರ್ಷಗಳಿಂದ ಮಾಗಡಿ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದಾನೆ. ರೈತನ ಬಳಿ ಈಗಾಗಲೇ 10 ಸಾವಿರ ಹಣ ಪಡೆದಿದ್ದಾನೆ. ಈತನ ಲಂಚ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಹಿಂದಿನ ಲೇಖನರಾಜ್ಯ ಅಡಕೆ ಬೆಳೆಗಾರರ ಹಿತರಕ್ಷಣೆ ಕಾಯುವ, ಅಡಕೆ ಕಾರ್ಯಪಡೆ ರಚನೆಗೆ  ಆರಗ ಜ್ಞಾನೇಂದ್ರ ಒತ್ತಾಯ
ಮುಂದಿನ ಲೇಖನಮನೆ ಬಾಗಿಲ ಲಾಕ್ ಮುರಿದು 7 ಲಕ್ಷ ಮೌಲ್ಯದ  ನಗದು, ಚಿನ್ನಾಭರಣ ಕಳವು