ಮನೆ ಯೋಗಾಸನ ಅರ್ಧನಾವಾಸನ

ಅರ್ಧನಾವಾಸನ

0

 ‘ಅರ್ಥವೆಂದರೆ  ಅರ್ಧ ಭಾಗ ಅಥವಾ ಸಮಭಾಗ. ‘ನಾವೆ’ ಎದಂರೆ ಹುಡಗು, ಓಡ, ದೋಣಿ. ಈ ಭಂಗಿಯು ದೋಣಿಯ ಆಕಾರವನ್ನು ಹೋಲುವುದರಿಂದ ಈ ಹೆಸರು.

 ಅಭ್ಯಾಸ ಕ್ರಮ

1.ಮೊದಲು ನೆಲದಮೇಲೆ ಕುಳಿತು, ಕಾಲುಗಳನ್ನು. ಮುಂಭಾಗಕ್ಕೆ ನೀಲವಾಗಿ  ಚಾಚಿಡಬೇಕು.

2..ಬಳಿಕ  ಕೈ ಬೆರಳುಗಳನ್ನು ಪರಸ್ಪರ ತೊಡರಿಸಿ, ಕತ್ತಿನಮೇಲೆ ತಲೆಯ ಹಿಂಭಾಗಕ್ಕೆ ಅದನ್ನು ಒತ್ತಿಡಬೇಕು

3.ಈಗ ಉಸಿರನ್ನು ಹೊರಕ್ಕೆ ಬಿಟ್ಟು  ಮುಂಡವನ್ನು ಹಿಂಬಾಗಕ್ಕೆ ಒರಗಿಸುತ್ತಿರುವಂತೆಯೇ ಕಾಲುಗಳನ್ನು ನೆಲದಿಂದ ಮೇಲೆತ್ತಿ, ಮಂಡಿಗಳನ್ನು ಬಿಗಿಮಾಡುತ್ತಾ ಅವನ್ನು ನೀಳವಾಗಿ ಚಾಚಿ,ಕಾಲ್ಬೆರಣಳುಗಳನ್ನು ಮೇಲ್ದಿಕಿಗಿರಿಸಬೇಕು. ‘ಪೂರ್ಣನಾವಾಸನ’ ದಲ್ಲಿದ್ದಂತೆಯೇ ದೇಹವೆಲ್ಲವನ್ನೂ ಪೃಷ್ಠಗಳ ಆಧಾರದ  ಮೇಲೆ ಸಮತೋಲನಮಾಡಬೇಕು. ಆದರೆ ಬೆನ್ನೆಲುಬಿನ ಯಾವ ಭಾಗವೂ ನೆಲ ಸೋಂಕಬಾರದು ಆಗ ಕಿಬ್ಬೊಟ್ಟೆಯೊಳಗಿನ ಮಾಂಸ ಖಂಡಗಳ ಮೇಲೆ ಮತ್ತು ಬೆನ್ನಿನ ಕೆಳಭಾಗದ ಮೇಲೆ ಮತ್ತು ಬೆನ್ನಿನ ಕೆಳಭಾಗದ ಮೇಲೆ  ಬಿಗಿಹಿಡಿತವಾದಂತೆ ಅನುಭವವಾಗುವುದು.

4. ಕಾಲುಗಳು ಭೂಮಿಯ ಮಟ್ಟಕ್ಕೆ 30 35° ಗಳಷ್ಟು ಕೋನವಾಗುವಂತೆ ಅವನು ಮೇಲೆತ್ತಿ ಕಾಲ್ಬೆರಳುಗಳು ನಡು ತಲೆಯ ಮಟ್ಟಕ್ಕೆ ಬರುವಂತೆ ನಿಲ್ಲಿಸಬೇಕು.

5. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟ ನಡೆಸುತ್ತ ಸುಮಾರು 23 ಸೆಕೆಂಡುಗಳ ಕಾಲ ನೆಲೆಸಬೇಕು. ಈ ಭಂಗಿಯಲ್ಲಿ ಒಂದು ನಿಮಿಷ ಕಾಲ ನಿಲ್ಲಲು ಸಾಧ್ಯವಾದರೆ, ಇದು ಕಿಬ್ಬೊಟ್ಟೆಯೊಳಗಿನ ಮಾಂಸಖಂಡಗಳು ಬಲಗೊಂಡಿರುವುದರಿಂದ ಸೂಚನೆ.

6. ಈ ಆಸನವನ್ನು ಅಭ್ಯಸಿಸುವಾಗ ಉಸಿರನ್ನು ಒಳಕ್ಕೆಳೆದು ಅಲ್ಲಿಯೇ ನಿಲ್ಲಿಸುವುದು ಸ್ವಾಭಾವಿಕವಾದರೂ, ಇಲ್ಲಿ ಹಾಗೆ ಮಾಡಬಾರದು. ಉಸಿರನ್ನು ಒಳಗೆ ಬಿಗಿಹಿ ಡಿದು ನಿಲ್ಲಿಸಿದಲ್ಲಿ ಅದರ ಪರಿಣಾಮ ಹೊಟ್ಟೆಯಲ್ಲಿರುವ ಮಾಂಸಖಂಡಗಳ ಮೇಲೆ ಆಗುವುದೇ ವಿನಾ ಕಿಬ್ಬೊಟ್ಟೆಯೊಳಗಿನ ಮಾಂಸ ಖಂಡಗಳ ಮೇಲಾಗುವುದಿಲ್ಲ ಈ ಆಸನದ ಭಂಗಿಯಲ್ಲಿ ನೀಳವಾಗಿ ಉಸಿರನ್ನು ಒಳಕ್ಕೆ,  ಮುಂದೆ  ಉಸಿರನ್ನು ಒಳಕ್ಕೆಳೆದುದೇ ಆದರೆ, ಕಿಬ್ಬೊಟ್ಟೆಯೊಳಗಿನ ಮಾಂಸ ಖಂಡಗಳ ಮೇಲಿನ ಬಿಗಿತವು ಸಡಿಲಗೊಳ್ಳುವುದು. ಈ ಬಿಗಿತವನ್ನು ನೆಲೆಗೊಳಿಸಲು,ಉಸಿರನ್ನು ಒಳಕ್ಕೆಳೆಯುವ ಹೂರಕ್ಕೆ ಬಿಡುವ ಮತ್ತು ಆ ಉಸಿರನ್ನು ಒಳಗೇ ತಡೆದಿಡುವ ಅಭ್ಯಾಸವನ್ನು ಪದೇ ಪದೇ ನಡೆಸಬೇಕು. ಆಗ ನೀಳವಾದ ಉಸಿರಾಟಕ್ಕೆ ಎಡೆ ಕೊಡಬಾರದು. ಹೀಗೆ ಮಾಡುವುದರಿಂದ ಕಿಬ್ಬೊಟ್ಟೆಯಲ್ಲಿಯ ಮಾಂಸ ಖಂಡಗಳಿಗೂ ಮತ್ತು ಒಳಗಿನ ಅಂಗಗಳಿಗೂ ವ್ಯಾಯಾಮ ದೊರಕುತ್ತದೆ.

7. ‘ಅರ್ಥನಾವಾಸನ’ ಕ್ಕೂ  ಮತ್ತು ‘ಪರಿಪೂರ್ಣ ನಾವಾಸನ’ ಕ್ಕೂ ಇರುವ ಬೆಧವನ್ನು ಚೆನ್ನಾಗಿ ಗಮನಿಸಬೇಕು. ಎರಡನೆಯದರಲ್ಲಿ ಮೊದಲನೆಯದಕ್ಕಿಂತ ಹೆಚ್ಚು ಎತ್ತರಕ್ಕೆ ಕಾಲುಗಳನ್ನು ನೀಡಿ,ಅವುಗಳಿಗೂ ಮತ್ತು ಹೊಟ್ಟೆಗೂ ಮಧ್ಯೆ ಇರುವ ಅಂತರವನ್ನು ಮೊದಲನೆಯದಕ್ಕಿಂತ ಕಡಿಮೆ ಮಾಡಬೇಕು.

 ಪರಿಣಾಮಗಳು 

 ‘ಪರಿಪೂರ್ಣನಾವಾಸನ’ ಕ್ಕೂ ಈ ಆಸನಕ್ಕೂಈ ಕಾಲುಗಳ ಸ್ಥಾನಗಳು ಬೇರೆ ಬೇರೆಯಾಗಿರುವುದರಿಂದ ಅವುಗಳ ಪರಿಣಾಮಗಳಲ್ಲಿಯೂ ವ್ಯತ್ಯಾಸವುಂಟು. ‘ಪರಿಪೂರ್ಣವಾಸನ’ ದಲ್ಲಿ ವ್ಯಾಯಾಮವು ಕರುಳುಗಳಿಗಾದರೆ,  ‘ಅರ್ಧನಾವಾಸನ’ ದಲ್ಲಿ ಪಿತ್ತ ಜನಾಂಗ (Livet)ಪಿತ್ತಕೋಶ ಮತ್ತು ಗುಲ್ಮ(Spleen)— ಇವುಗಳ ಮೇಲೆ ಪರಿಣಾಮವುಂಟುಗುತ್ತದೆ.

    ಮೊದಮೊದಲು ಈಆಸನದಿಂದಾಗುವ ಬಳಲಿಕೆಯನ್ನು ಬಲಹೀನವಾದ ಬೆನ್ನು ತಡೆದುಕೊಳ್ಳುವುದು ಕಷ್ಟ. ಆದರೆ ಬರುಬರುತ್ತ ಈ ಭಂಗಿಯನ್ನು ಸಾಧಿಸಿದಲ್ಲಿ ಬೆನ್ನಿಗೆ ಹೆಚ್ಚು ಬಲ ವುಂಟಾಗುವ ಸೂಚನೆ ಕಂಡುಬರುತ್ತದೆ. ಬಲಹೀನವಾದ ಬೆನ್ನು ಇಂಥ ಆಸನಗಳಿಂದ ಆತಂಕ ತರುತ್ತದೆ.ಅದರಲ್ಲೂ ಮಕ್ಕಳನ್ನು ಹೆರುವ ಹೆಂಗಸರಿಗೆ ಬೆನ್ನು ಭದ್ರವಾಗಿರಬೇಕಾದುದು ಅತ್ಯಾವಶ್ಯಕ ಈ ಮೇಲಿನ ಎರಡು ಆಸನಗಳೂ ಮತ್ತು ಬೆನ್ನನ್ನು ಪಕ್ಕಕ್ಕೆ ತಿರುಗಿಸುವ ಆಸನಗಳಿಗೂ ಬೆನ್ನಿಗೆ ಶಕ್ತಿ ಕೊಡಲು ತುಂಬಾ ಸಹಕಾರಿ.ಕೆಲವರು ಕೊಡುವಾಗ,ನಿಲ್ಲುವಾಗ ಮತ್ತು ನಡೆಯುವಾಗ ತಮ್ಮ ಬೆನ್ನನ್ನು ತಿಳಿದೋ ತಿಳೀಯದೆಯೋ ಹಿಡಿದುಕೊಳ್ಳುತ್ತಾರೆ. ಇದು ಬೆನ್ನಿನ ಅಶಕ್ತತೆಯನ್ನು ತೋರಿಸುವುದರಿಂದ ಬೆನ್ನಿನ ಕೆಳಭಾಗವನ್ನು ಶಕ್ತಿಯುತವನ್ನಾಗಿ ಮಾಡುವುದು ಅತ್ಯಾವಶ್ಯಕವೆಂದು ತಿಳಿಯಬಹುದು ಎಂದಿನವರೆಗೆ ಬೆನ್ನಿನ ಶಕ್ತಿ ತುಂಬಿರುತ್ತದೆಯೋ ಆಂದಿನವರೆಗೆ ಮನುಷ್ಯನು ತಾನು ವಯಸ್ಕನಾದರೂ ಮುದಿತನದ ಪರಿಣಾಮವನ್ನರಿಯದೆ ತಾರುಣ್ಯಭಾವವನ್ನೇ ಪಡೆದಿರುತ್ತಾನೆ. ಈ ಮೇಲಿನ ಆಸನಗಳೆರಡೂ ಬೆನ್ನಭಾಗಕ್ಕೆ ಹುರುಪು.ಶಕ್ತಿಗಳನ್ನು ಒದಗಿಸುವುದರಿಂದ, ಈ ಆಸನಗಳ ಅಭ್ಯಾಸದ ಮೂಲಕ, ವಯಸ್ಸಾದರೂ ಮುದಿತನದ ದುಷ್ಪರಿಣಾಮಗಳ ಅನುಭವ ತೋರದೆ, ಜೀವನವನ್ನು ಸುಗಮಗೊಳಿಸಿಕೊಳ್ಳಬಹುದು.

ಹಿಂದಿನ ಲೇಖನಅಮಶಂಕೆ— ರಕ್ತಬೇದಿ
ಮುಂದಿನ ಲೇಖನಹಾಸ್ಯ