ಮನೆ ಮಕ್ಕಳ ಶಿಕ್ಷಣ ಮಕ್ಕಳ ಪ್ರವರ್ತನೆಗೆ ಕಾರಣ ಹೆತ್ತವರೆ ? ತರಬೇತಿಯೇ  ?

ಮಕ್ಕಳ ಪ್ರವರ್ತನೆಗೆ ಕಾರಣ ಹೆತ್ತವರೆ ? ತರಬೇತಿಯೇ  ?

0

*  ಮಕ್ಕಳು ತಂದೆ ತಾಯಿಯರ ಪಡಿಯಚ್ಚಿನಂತೆ ಇರುತ್ತಾರೆ.

* ನನ್ನ ಮಗಳು ನನ್ನ ತದ್ರೂಪು.

* ನನ್ನ ಮಗನಿಗೆ ಅವರ ಅಮ್ಮನ ಹಾಗೆ ಗುಂಗುರು ಕೂದಲು.

* ಆ ಹುಡುಗಿಯ ಕಣ್ಣುಗಳು ಅವರ ಅಮ್ಮನ ಹಾಗೆ ಬಟ್ಟಲ ಕಂಗಳು.

 ಇಂತಹ ಮಾತುಗಳು ನಾವು ಎಲ್ಲಾ ಮನೆಯಲ್ಲಿ ಕೇಳುತ್ತಿರುತ್ತೇವೆ. ನಮ್ಮ ದೇಶದ ಮಾತ್ರವಲ್ಲ, ಯಾವ ದೇಶದಲ್ಲಾದರೂ ಇದೇ ರೀತಿ ಮಾತನಾಡಿಕೊಳ್ಳುತ್ತಾರೆ. ಹಾಗಾದರೆ,

* ತಂದೆ ಜಿಲ್ಲಾಧಿಕಾರಿಯಾಗಿದ್ದಾರೆ, ಅವನ ಮಗ ಏಕ ಜಿಲ್ಲಾಧಿಕಾರಿಯಾಗಲಿಲ್ಲ ?

* ತಂದೆ ವಿದ್ಯಾಭ್ಯಾಸ ಮಾಡಿದವನಲ್ಲ. ಆದರೆ ಅವನ ಮಗ ಅಂತರಿಕ್ಷ ಸಂಶೋಧಕನಾಗಿದ್ದಾನೆ ಹೇಗೆ ಸಾಧ್ಯವಾಯಿತು?

* ತಾಯಿ ದೇವರ ಬಗ್ಗೆ ತುಂಬಾ ಭಕ್ತಿ ಇದ್ದರೆ, ಮಗಳು ಅದನೆಲ್ಲ ನಂಬುವುದಿಲ್ಲ ಏಕೆ ?

* ಒಂದು ಬೆಸ್ತರ ಮನೆಯಲ್ಲಿ ಹುಟ್ಟಿದ ಬೆಳೆದ ಹುಡುಗ ಮಹಾವಿಜ್ಞಾನಿಯಾದದ್ದು ಹೇಗೆ ?

* ಮಹಾ ಘನ ಪಂಡಿತರ ಮಗ ಅವಿದ್ಯಾವಂತ ನಾದುದು ಹೇಗೆ ?

* ತಂದೆ ದಾನ-ಧರ್ಮಗಳನ್ನ ಮಾಡುತ್ತಿದ್ದರೆ, ಮಗ ಬೇರೊಬ್ಬರ ಆಸ್ತಿಯನ್ನು ಕಬಳಿಸಲು ಹೊಂಚಾಗುತ್ತಿರುತ್ತಾನೆ ಏಕೆ ?

ಈ ರೀತಿಯಾಗಿ ಪ್ರಶ್ನಿಸಿ ಕೊಂಡು ಹೋಗುತ್ತಿದ್ದಾರೆ ಬಹಳಷ್ಟು ಅನುಮಾನಗಳು ಹುಟ್ಟುತ್ತದೆ. ಇಡೀ ವಿಷಯದ ಬಗ್ಗೆ ಅನಾದಿಯಿಂದಲೂ ವಿಜ್ಞಾನಿಗಳು ನೇಚರ್ ವರ್ಸಸ್ ನರ್ಚರ್ ಎಂಬ ಅಂಶದ ಮೇಲೆ ಚರ್ಚೆಗಳು ಮಾತುಕತೆಗಳು ನಡೆಸುತ್ತಿದ್ದಾರೆ. ಮನುಷ್ಯರ ಸ್ವಭಾವ ಹಾಗೂ ಪ್ರತಿಭೆಗಳಿಗೆ ತಾಯಿ, ತಂದೆಯರ ಜೀನ್ಸ್ ಕಾರಣವೇ ? ಅಥವಾ ಸುತ್ತಲೂ ಇರುವ ಪರಿಸರ ಕಾರಣವೆ ? ಎಂಬ ವಿಷಯದ ಬಗ್ಗೆ ಇಂದಿಗೂ ಚರ್ಚೆಗಳು ನಡೆಯುತ್ತಲೇ ಇದೆ.

ಕೆಲವು ಮಂದಿ ವಿಜ್ಞಾನಿಗಳು ಬೇಸರಕೊಳ್ಳಗಾಗಿ ಮಕ್ಕಳ ಕಾಯಿಲೆಗೆ ತಾಯಿ, ತಂದೆಯರು ಕಾರಣವೆಂದು ಪ್ರತಿಭೆಗಳು ಇತರ ಪ್ರವರ್ತನೆಗಳು ತರಬೇತಿಯಿಂದ ಸಂಕ್ರಮಿಸಿವೆತೆಂದು ಸ್ಪಷ್ಟಪಡಿಸಿದರು. ಆದರೆ ಇದು ಈಗಲ್ಲದಿದ್ದರೂ ನಂತರವಾದರೂ ನಿರ್ಧಾರ ವಾಗಬೇಕಾದ ವಿಷಯ.

ಎಡ್ವರ್ಡ್ ವಿಲ್ಸನ್ ಎಂಬ ಸೋಷಿಯೊ ಬಯಾಲಜಿಸ್ಟ್ ಈ ವಿಷಯದಲ್ಲಿ ಬಹಳಷ್ಟು ಸಂಶೋಧನೆಗಳನ್ನ ಮಾಡಿದ ಸಾಮಾಜಿಕ ಪ್ರವರ್ತನೆಗೆ ವಂಶಪಾರಂಪರ್ಯವಾಗಿ ಸಂಕ್ರಮಿಸುವ ಲಕ್ಷಣಗಳನ್ನು ಅಧ್ಯಯನ ಮಾಡುವ ಈ ಸೋಷಿಯೋ ಬಯಾಲಜಿಸ್ಟ್ ಗಳು ಬಹಳ ಆಸಕ್ತಿಕರವಾದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಶೀತ ಪ್ರದೇಶಗಳಲ್ಲಿ ವಾಸಿಸುವ ಎಸ್ಕಿಮೋಗಳನ್ನು ಭೇಟಿಯಾಗಿ ಅಲ್ಲೇ ಹುಟ್ಟಿ, ಅಲ್ಲೇ ತನ್ನವರಿಗೆ ಸೇವೆ ಸಲ್ಲಿಸುತ್ತಾ, ಅಲ್ಲೇ ಸುತ್ತು ಹೋಗಬೇಕೆಂದುಕೊಳ್ಳುವ ಭ್ರಮೆಯಿಂದ ಹೊರ ಬರಬೇಕೆಂದು ಅವರಲ್ಲಿ ತಿಳುವಳಿಕೆ ಮೂಡಿಸಿ ಅವರ ಮಕ್ಕಳನ್ನು ನಗರಕ್ಕೆ ಕರೆದೊಯ್ದರು. ಅಲ್ಲಿನ ವಾತಾವರಣದಲ್ಲಿ ಬೆಳೆದ ಯುವ ಎಸ್ಕೀಮೋಗಳಲ್ಲಿ ಆಲೋಚನೆಗಳು ಬದಲಾದವು. ಸೇವಾಸ್ಥಳದಲ್ಲಿ ಸ್ವಾರ್ಥ ಕೂಡ ಸೇರಿಕೊಂಡಿತು. ಈ ಮೊದಲು ತನ್ನ ಆಹಾರವನ್ನು ನಾಲ್ಕು ಮಂದಿಗೆ ಹಂಚಿಕೊಟ್ಟ ವ್ಯಕ್ತಿ ನಂತರ ತಾನೋಬ್ಬನೆ ಮುಚ್ಚಿಕೊಂಡು ತಿನ್ನದಲಾರಂಭಿಸಿದ.

ನೇಚರಾ ?  ನರ್ಚರಾ ? ಎಂಬ ವಿಷಯವನ್ನು ನಿರ್ಧರಿಸಲು ಸಂಘಟನೆಗಳನ್ನ ಉದಾಹರಿಸಿದರೆ ಸಾಕಾಗುವುದಿಲ್ಲ. ವಾಸ್ತವಿಕತೆ ಏನೆಂಬುದನ್ನ ತಿಳಿದುಕೊಳ್ಳಬೇಕು. ಆ ಮಾತಿಗೆ ಬಂದರೆ ವಾಸ್ತವಿಕತೆಯನ್ನಲ್ಲ, ಸತ್ಯವನ್ನು ತಿಳಿದುಕೊಳ್ಳಬೇಕು. ಎರಡು ಒಂದೇ ತಾನೇ ? ಎಂದುಕೊಳ್ಳಬೇಡಿ. ಎರಡರ ನಡುವೆ ಬಹಳಷ್ಟು ವ್ಯತ್ಯಾಸವಿದೆ !

 ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ. ಪಶ್ಚಿಮ ದಿಕ್ಕಿನಲ್ಲಿ  ಅಸ್ತಮಿಸುತ್ತಾನೆ ಎಂಬುದು ವಾಸ್ತವ ಒಪ್ಪಿಕೊಳ್ಳುತ್ತೀರ ತಾನೇ !

ಆದರೆ, ಇದು ಸತ್ಯವಲ್ಲ. ಸೂರ್ಯನು ಚಲಿಸುವುದಿಲ್ಲ. ಸೂರ್ಯನು ಉದಯಿಸುವುದು ಇಲ್ಲ. ಅಸ್ತಮಿಸುವುದು ಇಲ್ಲ. ಭೂಮಿ ಸುತ್ತುತ್ತಿರುತ್ತದೆ. ಆದ್ದರಿಂದ, ಇಲ್ಲಿ ಉದಯಿಸಿದ ಹಾಗೆ, ಬೇರೆ ದೇಶಗಳಲ್ಲಿ ಅಸ್ತಮಿಸೋ ಹಾಗೆ ನಮಗೆ ಗೋಚರಿಸುತ್ತದೆ.

ಮಾನವನ ಪ್ರವರ್ತನೆ ವಿಷಯದಲ್ಲಿ ಮಾನವನ ಅರಿವಿಗೆ ನಿಲುಕದ ವಿಷಯಗಳಲ್ಲಿ, ಆರ್ಥಿಕ, ನಾಸ್ತಿಕ ಸಂವಾದಗಳಲ್ಲಿ ಕೂಡ ಆಳವಾಗಿ ಚರ್ಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಮನುಷ್ಯರೇ ಅಲ್ಲ ಪ್ರಾಣಿಗಳ ವಿಷಯದಲ್ಲೂ ಕೂಡ ಇದೀಗ ಆಶ್ಚರ್ಯಗೊಳಿಸುವ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ.