ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಬಯಲು ಸೀಮೆಯ, ಘಟ್ಟ ಸಾಲಿನಲ್ಲಿ ಸಹ ಬೆಳೆಯುವ ಪೊದರು ಬಳ್ಳಿ. ಕಿರಿಬೆರಳು ಗಾತ್ರದ ಕಾಂಡಕ್ಕೆ ವಿಶಿಷ್ಟ ಕರ್ಪೂರಸದೃಶ ಸುವಾಸನೆ. ಆಯತಾಕಾರದ ಸಮಾನಾಂತರ ಐದು ಸೀರೆಗಳ ಎಲೆ. ಕಂಕುಳಲ್ಲಿ ಹಾವಿನ ಹೆಡೆಯಕಾರದ ಚಿತ್ರ ವಿಚಿತ್ರ ಹಣ್ಣು ತೊಟ್ಟಿನ ಬಿಳಿ ಹಸಿರು ಹೆಡೆಯಾಕಾರದಲ್ಲಿ ತಿಳಿ ಹಸಿರು ತಲೆಕೆಳಗಾದ ಪ್ಯಾರಾಚೂಟ್ ಆಕಾರದ ಜೋತಾಡುವ ಬುಟ್ಟಿ ಅಂತ ಕಾಯಿಗಳು.
ಹಾವಿನ ಹೆಡೆಯಂತೆಯೇ ಮಚ್ಚೆಗಳುಳ್ಳ ಗಾಳಿಗೆ ಹಾರಿ ಹೋಗುವ ಚಪ್ಪಟೆ ತೆಳುಬೀಜಗಳು. ಬೇರು, ಕಾಂಡ, ಎಲೆ, ಕಾಯಿ, ಹೂವುಗಳನ್ನು ಮದ್ದಿಗಾಗಿ ಶಿಷ್ಟ ಮತ್ತು ಘಾಟಿ ವೈದ್ಯರು ಬಳಸುತ್ತಾರೆ. ಟ್ಯಾನಿನ್, ಬೋರ್ನಿ ಯೋಲ್, ಅರಿಸ್ಟಿನಿಕಂ, ಅರಿಸ್ಟಿಲಿಕ್ ಆಮ್ಲ ಅರಿಸ್ಟೋ ಲೋಬಿನ್ ಎಂಬ ರಾಸಾಯನಿಕ ತತ್ವಗಳು ಸಸ್ಯದಲ್ಲಿದೆ
ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಜ್ವರ ಮತ್ತು ಹೊಟ್ಟೆ ನೋವು ನೋವನ್ನು ಪರಿಹರಿಸುತ್ತದೆ. ವಿಷ ನಿವಾರಕವಾಗಿದೆ. ಅಲ್ಪ ಪ್ರಮಾಣದಲ್ಲಿ ಆಮಶಾಯಕ್ಕೆ ಉತ್ತೇಜಕವಾಗಿದೆ .
ಔಷಧೀಯ ಗುಣಗಳು :-
* ಹೊಟ್ಟೆ ನೋವಿನಿಂದ ಅರೆದು ಎಲೆಯನ್ನು ಹೊಟ್ಟೆಗೆ ಲೇಪಿಸುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
* ತೊನ್ನು ಕಲೆಯ ನಿವಾರಣೆಗೆ ಜೇನು ಜೊತೆಗೆ ಬೇರೆಸಿ ಲೆಪಿಸುವುದರಿಂದ ತೊನ್ನು ಕಲೆಯುವ ನಿವಾರಣೆಯಾಗುತ್ತದೆ.
* ವಿಷಜಂತು ಕಡೆದ ಸ್ಥಳಕ್ಕೆ ಲೇಪಿಸುವುದರಿಂದ ವಿಷ ಉಳಿಯುತ್ತದೆ ಮತ್ತು ಹೊಟ್ಟೆಯಲ್ಲಿ ಕಷಾಯ ಕುಡಿದರೆ ಲಾಭ.
* ಇದರ ಚೂರ್ಣ ಸೇವನೆಯಿಂದ ಹೆರಿಗೆ ಸುಲಭವಾಗಿದೆ. ಮುಟ್ಟಿನ ರಥೋತ್ಸವ ಕಡಿಮೆ ಇದ್ದರೆ ಮುಟ್ಟಿನ ನೋವಿಗೆ ಹೆರಿಗೆ ಅನಂತರದ ಸ್ರಾವ ಹೆಚ್ಚಿಸಲು ಇದು ಉಪಯುಕ್ತವಾಗಿದೆ.
* ಬೇರು ಇಡಿ ಗಿಡದ ಪುಡಿ ಸೇವಿಸಿದರೆ ಜ್ವರ, ಆಮವಾತ, ಸಂಧಿವಾತ, ಹೊಟ್ಟೆ ಭಾಗದಲ್ಲಿ ನೀರು ಸೇರಿರುವ ಕಾಯಿಲೆಗೆ ಇದು ತುಂಬಾ ಉಪಯೋಗಕಾರಿಯಾಗಿದೆ.