ಮನೆ ಅಪರಾಧ ಮಗನನ್ನು ಕೊಂದಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

ಮಗನನ್ನು ಕೊಂದಿದ್ದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

0

ಮೈಸೂರು: ನಾಲ್ಕೈದು ದಿನಗಳ ಹಿಂದೆ ತನ್ನ ಮಗನನ್ನು ಕೊಚ್ಚಿ ಕೊಂದಿದ್ದ ಮಾನಸಿಕ ಅಸ್ವಸ್ಥ ತಾಯಿ ಘಟನೆಯಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ‌.
ಈಕೆಯ ಮೃತದೇಹ ಹೆಚ್ ಡಿ ಕೋಟೆ ತಾಲೂಕಿನ ಮೇಟಿಕುಪ್ಪೆ ಕೆರೆಯಲ್ಲಿ ಪತ್ತೆಯಾಗಿದೆ. ಯಡತೊರೆ ಗ್ರಾಮದ ನಿವಾಸಿ ಮಾನಸಿಕ ಅಸ್ವಸ್ಥೆ ಭವಾನಿ ಎಂಬುವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಈಕೆ ನಾಲ್ಕೈದು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾನು ಹೆತ್ತ 4 ವರ್ಷದ ಶ್ರೀನಿವಾಸ್ ಎಂಬ ಮಗನನ್ನ ಮನಬಂದಂತೆ ಮಚ್ಚಿನಿಂದ ಕೊಚ್ಚಿ ಸಾಯಿಸಿ ಪರಾರಿಯಾಗಿದ್ದಳು.
ಈ ಬಗ್ಗೆ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಆದರೆ, ಇದೀಗ ಮೇಟಿಕುಪ್ಪೆ ಕೆರೆಯಲ್ಲಿ ಈಕೆಯ ಮೃತದೇಹ ಪತ್ತೆಯಾಗಿದೆ. ತನ್ನ ಮಗನನ್ನು ಕೊಂದ ಘಟನೆಯಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ‌.

ಹಿಂದಿನ ಲೇಖನಮೈಸೂರಿನ ಹೆಸರಾಂತ ಸುತ್ತೂರು ಜಾತ್ರಾ ಮಹೋತ್ಸವ ರದ್ದು
ಮುಂದಿನ ಲೇಖನಸಿ.ಎಂ‌ ಹೊರತುಪಡಿಸಿ ಗುಜರಾತ್ ಮಾದರಿಯಲ್ಲಿ ಸಂಪುಟದಲ್ಲಿ ಭಾರೀ ಬದಲಾವಣೆ: ಎಂ ಪಿ ರೇಣುಕಾಚಾರ್ಯ