ಮನೆ ಅಂತಾರಾಷ್ಟ್ರೀಯ ಸಶಸ್ತ್ರ ಪಡೆಯ ಪೊಲೀಸ್​ ಕಾನ್​ಸ್ಟೇಬಲ್ ಆತ್ಮಹತ್ಯೆ

ಸಶಸ್ತ್ರ ಪಡೆಯ ಪೊಲೀಸ್​ ಕಾನ್​ಸ್ಟೇಬಲ್ ಆತ್ಮಹತ್ಯೆ

0

ಚೆನ್ನೈ(Chennai): ಸಶಸ್ತ್ರ ಪಡೆಯ ಪೊಲೀಸ್​ ಕಾನ್​ಸ್ಟೇಬಲ್​ವೊಬ್ಬರು ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್​​ ಫೈನಲ್​ಗೆ ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲಿ ತಮ್ಮ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಈ ಘಟನೆ ಸಂಭವಿಸಿದ್ದು, ಇವರು ನೆಹರೂ ಸ್ಟೇಡಿಯಂನ ವಿವಿಐಪಿ ಪ್ರವೇಶ ದ್ವಾರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.

ಸೆಂಥಿಲ್ ಕುಮಾರ್ ರವರು ಮಧುರೈನ ಸೆಲ್ಲೂರು ಮೂಲದವರಾಗಿದ್ದು, ಅವರ ಪತ್ನಿ ಉಮಾ ಹಾಗೂ ಒಂದು ವರ್ಷದ ಮಗು ಇದ್ದರು. ನಂತರ ಕೆಲ ತಿಂಗಳಿಂದ ದಂಪತಿಯ ನಡುವೆ ಕಲಹ ಉಂಟಾಗಿದ್ದು, ಕೌಟುಂಬಿಕ ಸಮಸ್ಯೆಯಿಂದ ಸೆಂಥಿಲ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ.

 ಪೆರಿಯಮೇಡು ಠಾಣೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಮಹಾನಗರ ಪಾಲಿಕೆ ಆಶ್ರಯ ಶಾಖೆಗೆ ಎಲ್.ನಾಗೇಂದ್ರ ಭೇಟಿ, ಪರಿಶೀಲನೆ
ಮುಂದಿನ ಲೇಖನಕರ್ತವ್ಯದ ವೇಳೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು, ಬ್ರೌಸ್ ಮಾಡುವುದು ಕಂಡು ಬಂದ ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದು: ಕೇರಳ ಹೈಕೋರ್ಟ್