ಮನೆ ಸುದ್ದಿ ಜಾಲ ಸರಳವಾಗಿ ನಡೆದ ಗೋಣಹಳ್ಳಿ ಶ್ರೀ ಮಾರಮ್ಮ ರಥೋತ್ಸವ

ಸರಳವಾಗಿ ನಡೆದ ಗೋಣಹಳ್ಳಿ ಶ್ರೀ ಮಾರಮ್ಮ ರಥೋತ್ಸವ

0

ನಂಜನಗೂಡು: ತಾಲ್ಲೂಕು ಗೋಣಹಳ್ಳಿ ಗ್ರಾಮದಲ್ಲಿ ಶ್ರೀ ಮಾರಮ್ಮನವರ ರಥೋತ್ಸವ ಸರಳವಾಗಿ ನೆರವೇರಿತು. 

ಬೆಳಿಗ್ಗೆ 10 ಘಂಟೆಗೆ ಆರಂಭವಾದ ಈ ರಥೋತ್ಸವಕ್ಕೆ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜುರವರು ರಥ ಎಳೆಯುವ ಮೂಲಕ ಚಾಲನೆ ನೀಡಿದರು. ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥಕ್ಕೆ ನೆರೆದಿದ್ದ ಭಕ್ತರು ಪೂಜೆ ಸಲ್ಲಿಸಿ ಹಣ್ಣು-ಧವನ ಎಸೆದು ಪುನೀತರಾದರು. ಈ ರಥೋತ್ಸವವು ಸುಗಮವಾಗಿ ಸಾಗಿ 11 ಘಂಟೆಗೆ ಸ್ವಸ್ಥಾನ ತಲುಪಿತು. 

ಬಿಳಿಗೆರೆ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆರತಿ ಹಾಗೂ ಸಿಬ್ಬಂದಿವರ್ಗದವರ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಇದೇ ವೇಳೆ ರಥೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ ನಗರ್ಲೆ ಗ್ರಾಮದ ಶ್ರೀ ಗೋಣಹಳ್ಳಿ ಮಾರಮ್ಮ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 

ಹಿಂದಿನ ಲೇಖನದ್ವಿತೀಯ ಪಿಯುಸಿ ಆಂಗ್ಲಭಾಷೆ ಕೈಪಿಡಿ ಬಿಡುಗಡೆ
ಮುಂದಿನ ಲೇಖನಹೃದಯಾಘಾತದಿಂದ ಖ್ಯಾತ ‘ಆರ್ ಜೆ ರಚನಾ’ನಿಧನ