ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಆಮೆಯೊಂದನ್ನು ಹಿಡಿದು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಹರಳೆ ಗ್ರಾಮದ ಉಮೇಶ್ (32) ಬಂಧಿತ ಆರೋಪಿ.
ಈತ ಇಂಡಿಯನ್ ಬ್ಲಾಕ್ ಟರ್ಟಲ್ ಎಂಬ ಜಾತಿಗೆ ಸೇರಿದ ಆಮೆಯನ್ನು ಅಕ್ರಮವಾಗಿ ಹಿಡಿದು ಹರಳೆ ಗ್ರಾಮದಲ್ಲಿರುವ ಕಾವೇರಿ ನದಿ ತಟದಲ್ಲಿ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ವಿಜಯರಾಜ್ ಮತ್ತು ತಂಡ ದಾಳಿ ನಡೆಸಿ ಆಮೆ ಸಮೇತ ಆರೋಪಿಯನ್ನು ಬಂಧಿಸಿದೆ.
ಆಮೆಯನ್ನು ಮಾಂಸ ತಯಾರಿಸುವ ಉದ್ದೇಶದಿಂದ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಉಮೇಶ್ ವಿರುದ್ಧ ಅರಣ್ಯ ಸಂಚಾರಿ ದಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅರಣ್ಯ ಸಂಚಾರ ದಳದ ಹೆಡ್ ಕಾನ್ಸ್ಟೇಬಲ್ ಬಸವರಾಜು, ಸ್ವಾಮಿ, ಶಂಕರ್, ರಾಮಚಂದ್ರ, ಲತಾ, ಚಾಲಕ ಪ್ರಭಾಕರ್, ಪೇದೆ ಬಸವರಾಜು ಹಾಜರಿದ್ದರು.