ಮನೆ ಅಪರಾಧ ಸಾಲ ಹಿಂತಿರುಗಿಸದ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾದ ವ್ಯಕ್ತಿಯ ಬಂಧನ

ಸಾಲ ಹಿಂತಿರುಗಿಸದ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾದ ವ್ಯಕ್ತಿಯ ಬಂಧನ

0

ಪಾಟ್ನಾ: ಸಾಲ ಹಿಂತಿರುಗಿಸಲು ಸಾಧ್ಯವಾಗದ ಮಹಿಳೆಯ 11 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ  ವ್ಯಕ್ತಿಯೊಬ್ಬನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿರುವ ಘಟನೆ ಬಿಹಾರದ ಸಿವಾನ್ ನಲ್ಲಿ ನಡೆದಿದೆ.

Join Our Whatsapp Group

ಲಕ್ಷ್ಮೀಪುರ ಗ್ರಾಮದ ನಿವಾಸಿ ಮಹೇಂದ್ರ ಪಾಂಡೆ (40) ಬಂಧಿತ ಆರೋಪಿ.

ಬಾಲಕಿಯ ತಾಯಿಗೆ ಆರೋಪಿ ಮಹೇಂದ್ರ ಪಾಂಡೆ 2 ಲಕ್ಷ ರೂ. ಸಾಲವನ್ನು ನೀಡಿದ್ದ. ಸಾಲವನ್ನು ಆಕೆ ವಾಪಾಸ್ ಕೊಡದ ಕಾರಣಕ್ಕೆ ಮಹೇಂದ್ರ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೈರ್ವಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಈ ಬಗ್ಗೆ ದೂರು ನೀಡಿದ್ದು,ಆರೋಪಿಯನ್ನು ಪೋಕ್ಸೊ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.

ಬಂಧನದ ಬಳಿಕ ಬಾಲಕಿ ಹಾಗೂ ಆರೋಪಿ ತಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.

ಆರೋಪಿ ಮಹೇಂದ್ರ ಪಾಂಡೆಗೆ ಈಗಾಗಲೇ ಒಂದು ಪತ್ನಿ ಇದ್ದಾರೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ: ಜೆಪಿ ನಡ್ಡಾ
ಮುಂದಿನ ಲೇಖನ‘ಪ್ರಜಾ’ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ