ಮನೆ ಅಪರಾಧ ಬೈಕ್ ಕಳ್ಳತನ ಮಾಡುತ್ತಿದ್ದ 16 ವರ್ಷದ ಇಬ್ಬರು ಬಾಲಕರ ಬಂಧನ

ಬೈಕ್ ಕಳ್ಳತನ ಮಾಡುತ್ತಿದ್ದ 16 ವರ್ಷದ ಇಬ್ಬರು ಬಾಲಕರ ಬಂಧನ

0

ಬೆಂಗಳೂರು: ಬೆಂಗಳೂರು ಮತ್ತು ಆಂಧ್ರ ಪ್ರದೇಶದ ವಿವಿಧ ನಗರಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ 16 ವರ್ಷದ ಇಬ್ಬರು ಬಾಲಕರನ್ನು  ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಒಂದೇ ವರ್ಷದಲ್ಲಿ 44 ಬೈಕ್ ಗಳನ್ನು ಕಳ್ಳತ ಮಾಡಿದ್ದಾರೆ. ಇದರಲ್ಲಿ ಹೆಚ್ಚಿನವು ಗೇರ್ ಲೆಸ್ ಸ್ಕೂಟರ್ ಗಳಾಗಿವೆ. ಪೊಲೀಸರು ಬಾಲಕರನ್ನು ಬಾಲಾಪರಾಧಿ ಗೃಹಕ್ಕೆ ಒಪ್ಪಿಸಿದ್ದಾರೆ.

ಇದಕ್ಕೂ ಮುನ್ನ ಪೊಲೀಸರು, ಪೋಷಕರು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳ ಜೊತೆ  ವಿಚಾರಣೆ ನಡೆಸಿದಾಗ, ಬೈಕ್ ನ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

ಇಬ್ಬರು ಬಾಲ ಆರೋಪಿಗಳಲ್ಲಿ ಓರ್ವ ಬಾಲಕ ನಗರದಲ್ಲಿ ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದನು. ತಾಯಿ ಮತ್ತು ಸಹೋದರಿ ಯೊಂದಿಗೆ  ಪ್ರತಿನಿತ್ಯ ಜಗಳ ಮಾಡುತ್ತಿದ್ದನು. ತಂಬಾಕು ಸೇವನೆಯ ಚಟವೂ ಈತನಿಗೆ ಇತ್ತು,  ಹೀಗಾಗಿ ಈತನನ್ನು ಸರಿ ದಾರಿಗೆ ತರುವುದಾಗಿ, ಈತ ಶಿಸ್ತು ಕಲಿಯಲಿ ಎಂದು 2ವರ್ಷಗಳ ಹಿಂದೆ ತಾಯಿ ಮಗನನ್ನು ರಿಮ್ಯಾಂಡ್ ಹೋಮ್ ಗೆ ಸೇರಿಸಿದ್ದಳು.

ಈ ಬಲಕ ರಿಮ್ಯಾಂಡ್ ಹೋಮ್ನಲ್ಲಿ ಇದ್ದ  ಇನ್ನೊಬ್ಬ ಹುಡುಗ ಜೊತೆ  ಸೇರಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಮುರಿದು ಬೈಕ್ ಹೇಗೆ ಕಳ್ಳತನ ಮಾಡುವುದು, ಮತ್ತು ಎಲೆಕ್ಟ್ರಿಕಲ್ ಸರ್ಕ್ಯೂಟ್ ಅನ್ನು ಟ್ಯಾಂಪ ರಿಂಗ್ ಮಾಡಿ ಕಳ್ಳತನ ಮಾಡಿ ಓಡಿಸುವುದನ್ನು ಕಲಿತನು. ಇನ್ನು ಇನ್ನೊಬ್ಬ ಹುಡುಗನ ತಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ಇಬ್ಬರೂ ಹುಡುಗರು ಹೈಸ್ಕೂಲ್ ಡ್ರಾಪ್  ಔಟ್ ಆಗಿದ್ದಾರೆ.  ಹಗಲು ರಾತ್ರಿ ಗೊತ್ತುಗುರಿಯಿಲ್ಲದೆ ತಿರುಗಾಡುತ್ತಾರೆ. ಪ್ರತ್ಯೇಕ ಸ್ಥಳಗಳಲ್ಲಿ ಅಥವಾ ಮಂದ ಬೆಳಕಿನಲ್ಲಿರುವ  ವಸತಿ ಪ್ರದೇಶಗಳಲ್ಲಿ ನಿಲ್ಲಿಸಿದ ಬೈಕ್ ಗಳನ್ನು ಕದಿಯುತ್ತಿದ್ದರು.

ಕದ್ದ ಬೈಕ್ ಗಳಲ್ಲಿ 18 ಬೈಕ್ ಅನ್ನು ತಲಾ 5,000 ರೂ. ಗಳಿಗೆ ಮಾರಿದ್ದಾರೆ. ಬ್ಯಾಂಕ್ ಗಳಿಗೆ ವಸೂಲಿ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದು, ಸಾಲವನ್ನು ಪಾವತಿಸದ ಕಾರಣ ಅವರ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಮಾರುತ್ತಿದ್ದೇವೆ ಎಂದು ಹೇಳಿಕೊಂಡು ಬೈಕ್ ಗಳನ್ನು ಮಾರುತ್ತಿದ್ದರು.

ಬೆಂಗಳೂರಿನ ಜೆಪಿ ನಗರ, ಬನಶಂಕರಿ, ಜಯನಗರ, ತಿಲಕನಗರ, ಮೈಕೋ ಲೇಔಟ್, ಎಚ್ ಎಎಲ್, ಕೆಆರ್ ಪುರಂ, ಬೆಳ್ಳಂದೂರು, ಎಚ್ ಎಸ್ಆರ್ ಲೇಔಟ್ ಮತ್ತು ಕಾಡುಗೋಡಿಯಲ್ಲಿ ಇವರಿಬ್ಬರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದಿನ ಲೇಖನಕೊಪ್ಪಳ: ಬಸ್ ಗೆ ಕಲ್ಲೆಸೆದು 5 ಸಾವಿರ ರೂ. ದಂಡ ಕಟ್ಟಿದ ಮಹಿಳೆ
ಮುಂದಿನ ಲೇಖನಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ