ಮನೆ Uncategorized ಬಿಇಸಿಐಎಲ್’ನಿಂದ ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವಿ, ಪಿಜಿ ವಿದ್ಯಾರ್ಹತೆ

ಬಿಇಸಿಐಎಲ್’ನಿಂದ ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವಿ, ಪಿಜಿ ವಿದ್ಯಾರ್ಹತೆ

0

ಬ್ರಾಡ್’ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್’ಟಂಟ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸ್ಟಾಫ್ ನರ್ಸ್ ಹುದ್ದೆಗಳಿಗೆ ಜಿಎನ್’ಎಂ, ಬಿಎಸ್ಸಿ / ಎಂಎಸ್ಸಿ ಅನ್ನು ನರ್ಸಿಂಗ್ ವಿಷಯದಲ್ಲಿ ಓದಿದವರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಮೇ 08, 2023 ರೊಳಗೆ ಅರ್ಜಿ ಸಲ್ಲಿಸಬಹುದು.

Join Our Whatsapp Group

ನೇಮಕಾತಿ ಪ್ರಾಧಿಕಾರ : ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್

ಹುದ್ದೆ ಹೆಸರು : ಸ್ಟಾಫ್ ನರ್ಸ್

ಹುದ್ದೆಗಳ ಸಂಖ್ಯೆ : 65

ವಿದ್ಯಾರ್ಹತೆ : ಜಿಎನ್’ಎಂ ಪಾಸ್ ಮಾಡಿರಬೇಕು. ಬಿಎಸ್ಸಿ / ಎಂಎಸ್ಸಿ ನರ್ಸಿಂಗ್ ಓದಿದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಅನನುಭವಿಗಳು ಅರ್ಜಿ ಹಾಕಬಹುದು.

ಬಿಇಸಿಐಎಲ್ ಸ್ಟಾಫ್ ನರ್ಸ್ ಹುದ್ದೆಗಳಿಗೆ ಮಾಸಿಕ ವೇತನ ರೂ.30,000.

ಅರ್ಜಿ ಸಲ್ಲಿಸುವುದು ಹೇಗೆ?

– ವೆಬ್’ಸೈಟ್ ವಿಳಾಸ www.becil.com / https://becilregistration.com ಗೆ ಭೇಟಿ ನೀಡಿ.

– ನಂತರ ‘Career’ ಸೆಕ್ಷನ್ ಆಯ್ಕೆ ಮಾಡಿ ಕ್ಲಿಕ್ ಮಾಡಿ.

– ಸ್ಟಾಫ್ ನರ್ಸ್ ಹುದ್ದೆಗಳ ಅರ್ಜಿಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ.

– ಅರ್ಜಿಯ ವೆಬ್ಪೇಜ್ ಓಪನ್ ಆಗುತ್ತದೆ. ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು / ಮಾಹಿತಿಗಳು

ಆಧಾರ್ ಕಾರ್ಡ್, ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ಇದ್ದಲ್ಲಿ ದಾಖಲೆ, ಎಸ್’ಎಸ್’ಎಲ್’ಸಿ ಅಂಕಪಟ್ಟಿ, ಇತರೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಹಾಗೂ ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇವರಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಹಿಂದಿನ ಲೇಖನದಿನಾ ಒಂದಲ್ಲಾ ಒಂದು ಕಾರಣಗಳಿಗಾಗಿ ಕೊರಗುವವರು ಈ ರಾಶಿಯವರು..!
ಮುಂದಿನ ಲೇಖನಪ್ರಧಾನಿ ಮೋದಿ ಕೇರಳ ಪ್ರವಾಸದ ವೇಳೆ ಆತ್ಮಹತ್ಯಾ ದಾಳಿ ಬೆದರಿಕೆ: ತೀವ್ರಗೊಂಡ ತನಿಖೆ