ಮನೆ ಅಪರಾಧ ಸಿಸಿಬಿ ಪೊಲೀಸರಿಂದ ಇಬ್ಬರು ಮನೆ ಕಳ್ಳರ ಬಂಧನ: ಚಿನ್ನಾಭರಣ, ಬೆಳ್ಳಿ ಪದಾರ್ಥ ವಶಕ್ಕೆ

ಸಿಸಿಬಿ ಪೊಲೀಸರಿಂದ ಇಬ್ಬರು ಮನೆ ಕಳ್ಳರ ಬಂಧನ: ಚಿನ್ನಾಭರಣ, ಬೆಳ್ಳಿ ಪದಾರ್ಥ ವಶಕ್ಕೆ

0

ಮೈಸೂರು: ಸಿಸಿಬಿ ಪೊಲೀಸರು ಇಬ್ಬರು ಕುಖ್ಯಾತ ಮನೆ ಕಳ್ಳರನ್ನ ಬಂಧಿಸಿ ಚಿನ್ನಾಭರಣ, ಬೆಳ್ಳಿ ಪದಾರ್ಥಗಳನ್ನ ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರದಲ್ಲಿ ವರದಿಯಾದ ಮನೆ ಕಳ್ಳತನ ಪ್ರಕರಣಗಳ ಪತ್ತೆ ಸಂಬಂಧ ಪೊಲೀಸ್ ಆಯುಕ್ತರು, ಸಿ.ಸಿ.ಐ. ಘಟಕದ ವಿಶೇಷ ತಂಡ ರಚನೆ ಮಾಡಿದ್ದರು.  ಈ ವಿಶೇಷ ತಂಡವು ಒಬ್ಬ ಹಳೆಯ ಆಸಾಮಿಯನ್ನು ಬೆಂಗಳೂರಿನ ಶಿವಾಜಿ ನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈತನು ಮೈಸೂರು ನಗರ ವ್ಯಾಪ್ತಿಯಲ್ಲಿ 03 ಮನೆಗಳಲ್ಲಿ ಮನೆ ಕನ್ನ ಕಳುವು ಮಾಡಿರುವುದಾಗಿ ತಿಳಿಸಿದ್ದು, ಈ ವೇಳೆ ಆತನನ್ನ ಬಂಧಿಸಿ ಆರೋಪಿಯಿಂದ 2 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈತನು ಕಳವು ಮಾಡಿದ್ದ ಸುಮಾರು 56 ಗ್ರಾಂ ತೂಕದ ಚಿನ್ನಾಭರಣಗಳನ್ನು ಈತ ತನ್ನ ಸ್ನೇಹಿತರ ಮೂಲಕ ಬೆಂಗಳೂರಿನ ಆಟ್ಟಕಾ ಗೋಲ್ಡ್ ಪ್ರೈವೇಟ್ ಸಂಸ್ಥೆಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಸದರಿ ಚಿನ್ನಾಭರಣಗಳನ್ನು ಹಾಜರುಪಡಿಸುವಂತೆ ಆಟಕಾ ಗೋಲ್ಡ್ ಪ್ರೈವೇಟ್ ಕಂಪನಿಯವರಿಗೆ ನೋಟೀಸ್ ನೀಡಲಾಗಿದೆ.

 ಇದರಿಂದ ಒಟ್ಟು 9,00,000 ರೂ ಬೆಲೆ ಬಾಳುವ ಚಿನ್ನಾಭರಣ ಮತ್ತು ಬೆಳ್ಳ ಪದಾರ್ಥಗಳು ಪತ್ತೆಯಾಗಿದೆ. ಈ ಪತ್ತೆ ಕಾರ್ಯದಿಂದ ಲಕ್ಷ್ಮೀಪುರಂ ಠಾಣೆಯ-1, ಮೇಟಗಳ್ಳಿ-1, ಜಯಲಕ್ಷ್ಮೀಮರಂ -01 ಕನ್ನ ಕಳುವು ಪ್ರಕರಣಗಳು ಪತ್ತೆಯಾಗಿವೆ.

ಈತನು ಬೆಂಗಳೂರಿನ ಹಲವಾರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಮನೆಕನ್ನಾ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದನೆಂಬ ವಿಚಾರ ತಿಳಿದು ಬಂದಿದ್ದು, ಜೈಲಿನಿಂದ ಬಿಡುಗಡೆಯಾಗಿ ಬಂದು ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದ್ದನೆಂಬ ವಿಚಾರ ತಿಳಿದು  ಬಂದಿದೆ.

ಹಿಂದಿನ ಲೇಖನಟಿಟಿಡಿಯಿಂದ ಮತ್ತಷ್ಟು ದರ್ಶನ ಟಿಕೆಟ್ ಬಿಡುಗಡೆ
ಮುಂದಿನ ಲೇಖನರಾಜಕೀಯ ಕೊರೊನಾ ಹಬ್ಬಿಸುತ್ತಿರುವ ರಾಜಕೀಯ ಪಕ್ಷಗಳು: ಹೆಚ್.ಡಿ.ಕುಮಾರಸ್ವಾಮಿ