ಮನೆ ಅಪರಾಧ ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

0

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಜಿಂಕೆಯನ್ನು ಬೇಟೆಯಾಡಿ, ಮಾಂಸವನ್ನು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಕೃತ್ಯಕ್ಕೆ ಬಳಸಿದ್ದ ಪರಿಕರಗಳೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.

Join Our Whatsapp Group

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕೊಳವಿಗೆ ಹಾಡಿಯ ದಿನೇಶ, ಬಿಲ್ಲೇನಹೊಸಹಳ್ಳಿ ಹಾಡಿಯ ರಾಮ ಬಂಧಿತರು.

ಆರೋಪಿಗಳಿಂದ 40 ಕೆ.ಜಿ. ಜಿಂಕೆಯ ಮಾಂಸ, ತಲೆ, ಚರ್ಮ, ನಾಲ್ಕು ಕಾಲುಗಳು, ಎರಡು ಕೊಂಬು, ಕೃತ್ಯಕ್ಕೆ ಬಳಸಿದ್ದ ಉರುಳು, ಕತ್ತಿ ಹಾಗೂ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಕಚುವಿನಹಳ್ಳಿ ಶಾಖೆಯ ಸಣ್ಣಗದ್ದೆ ಗಸ್ತಿನ ತಟ್ಟಿಹಳ್ಳ ಪಾರೆ ಅರಣ್ಯ ಪ್ರದೇಶದಲ್ಲಿ ಡಿ.ಆರ್.ಎಫ್.ಓ ಆದ ಎಚ್.ಎಂ.ಪ್ರಮೋದ್, ಗಸ್ತು ಅರಣ್ಯ ಪಾಲಕರು ಹಾಗೂ ಎಪಿಸಿ ಸಿಬ್ಬಂದಿಗಳೊಂದಿಗೆ ಗಸ್ತು ಮಾಡುತ್ತಿದ್ದ ವೇಳೆ ಐವರ ತಂಡ ಜಿಂಕೆ ಕೊಂದು ಮಾಂಸದೊಂದಿಗೆ ಪರಾರಿಯಾಗುತ್ತಿದ್ದರು.

ಇದ್ದನ್ನು ಕಂಡು ಸಿನಿಮೀಯಾ ಮಾದರಿಯಲ್ಲಿ  ಬೆನ್ನಟ್ಟಿದಾಗ ಇಬ್ಬರು ಆರೋಪಿಗಳು ಮಾಂಸ ಮತ್ತು ಪರಿಕರಗಳೊಂದಿಗೆ ಸಿಕ್ಕಿ ಬಿದ್ದರು. ಬಿಲ್ಲೇನಹೊಸಹಳ್ಳಿ ಹಾಡಿಯ ಗಣೇಶ್, ವಿಶ್ವ, ಕುಮಾರ್ ಪರಾರಿಯಾಗಿದ್ದಾರೆ.

ಬಂದಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ಮೂವರು ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಡಿ.ಸಿ.ಎಫ್.ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.