ಮನೆ ಅಪರಾಧ ಕಳ್ಳತನ ಮಾಡಿದ ಬೈಕ್ ನಲ್ಲಿ ತಿರುಗುತ್ತಿದ್ದ ಇಬ್ಬರ ಬಂಧನ

ಕಳ್ಳತನ ಮಾಡಿದ ಬೈಕ್ ನಲ್ಲಿ ತಿರುಗುತ್ತಿದ್ದ ಇಬ್ಬರ ಬಂಧನ

0

ಮಂಗಳೂರು:ಕಳ್ಳತನ ಮಾಡಿದ ಬೈಕ್‌ ನಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ಫಾರಿಶ್‌ ಶರ್ಮಾ(19), ಧನುಷ್‌ (20) ಬಂಧಿತ ಆರೋಪಿಗಳು. ಬಂಧಿತರಿಂದ ಯಮಹಾ ಅರ್ ಎಕ್ಸ್ ,ಬಜಾಜ್ ಪಲ್ಸರ್ ಬೈಕ್ ಗಳನ್ನು ಸ್ವಾಧೀನಪಡಿಸಕೊಳ್ಳಲಾಗಿದೆ.

ಮಂಗಳವಾರ ( 28-03-2023) ಮಂಗಳೂರು ನಗರದ ಮಲ್ಲಿಕಟ್ಟೆಯ ಬಳಿ ಬೈಕ್‌ ಸವಾರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಶಯಸ್ಪದವಾಗಿ ಕಂಡು ಬಂದ ಬಗ್ಗೆ ಅವರನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಈ ಎರಡು ಬೈಕ್‌ ಗಳು ಈ ಹಿಂದೆ ಮಂಗಳೂರು ನಗರದ ಪಂಪವಲ್ ನ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಅರ್ ಎಕ್ಸ್ ಬೈಕ್ ನ್ನು ಹಾಗೂ ವಲೇನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ ಗಳೆಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಲ್ಲಿ ಫಾರಿಶ್‌ ಶರ್ಮಾ ವಿರುದ್ದ 2022 ರಲ್ಲಿ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಠಾಣೆಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಜೆಡಿಎಸ್ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 5 ಸಿಲಿಂಡರ್ ಉಚಿತ: ಎಚ್‌.ಡಿ.ಕುಮಾರಸ್ವಾಮಿ
ಮುಂದಿನ ಲೇಖನನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಮುದ್ರಣಕ್ಕೆ ಆದೇಶ: ರೂಪೇಶ್ ರಾಜಣ್ಣ ಆಕ್ರೋಶ