ಮನೆ ಜ್ಯೋತಿಷ್ಯ ಸಂಧಿವಾತ

ಸಂಧಿವಾತ

0

 5. ತಾರುಣ್ಯರಲ್ಲಿ ಬರುವ ದೀರ್ಘವಾದ ಸಂಧಿವಾತ  (Juvenile chronic Arthritis)

Join Our Whatsapp Group

         ಈ ವ್ಯಾಧಿ ಸಾಮಾನ್ಯವಾಗಿ 16 ವರ್ಷದೊಳಗಿನ ಮಕ್ಕಳಿಗೆ ತಗುಲಿ ಬಹಳ ವೀರ್ಘಕಾಲದವರೆಗೂ ಇರುತ್ತದೆ ಒಂದು ಅಥವಾ ಎರಡು ಜೋಡಣೆ ಕೇಂದ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಜೋಡಣೆ ಯನ್ನು ಚಲಿಸಲು ಆರಂಭಿಸಿದರೆ ನೋವು ಕಾಣಿಸಿಕೊಂಡು ಆ ಸ್ಥಳದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇದರ ಕಾಲಾವಧಿಯು ಆರು ವಾರದಿಂದ 12 ವಾರದ ವರೆಗೆ ಈ ವ್ಯಾದಿಯು ಕ್ರಮೇಣ ಪೋಲ್ಯ ಆರ್ತರೈಟಿಸ್ (ಐದಕ್ಕಿಂತ ಹೆಚ್ಚು ಜೋಡಣೆ ಕೇಂದ್ರಗಳಲ್ಲಿ ಹರಡುವುದು) ಒಲಿಗೋ ಆರ್ತರೈಟೀಸ್ (ನಾಲ್ಕಕ್ಕಿಂತ ಹೆಚ್ಚು ಜೋಡಣೆ ಕೇಂದ್ರದಲ್ಲಿ ಕಾಣಿಸಿಕೊಳ್ಳುವುದು) ಅಥವಾ ಇದು ವ್ಯವಸ್ಥಿತವಾದ ವ್ಯಾಧಿಯಾಗಿ ಮಾರ್ಪಟ್ಟು ಆಗಾಗ ಜ್ವರ ಬಿಟ್ಟು ಬಿಟ್ಟು ಬರುವುದು ಸಂಧಿವಾತ, ಯಕ್ಷಸ್, ರಿವರ್), ಸ್ಪೀನ್, ಹಾರ್ಮೋನ್ ಗ್ರಂಧಿ ದೊಡ್ಡವಾಗುವುದು, ನಾವು ಜಾಗ್ರತೆ ವಹಿಸದಿದ್ದರೆ ತೀವ್ರತೆ ಹೆಚ್ಚಾಗಿ ಮುಂದೆ ಈ ನಿಷ್ಕ್ರಿಯ ಅಂಗಾಂಗಗಳನ್ನು ಸರಿಮಾಡಲು ಫಿಸಿಯೋತೆರಪಿಗೆ ಹೋಗಬೇಕಾಗುತ್ತದೆ. ಅದರಲ್ಲೂ ಆಗವಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗುತ್ತದೆ.

6. ಉರಿಯಿಂದ ಕೂಡಿದ ಸಂಧಿವಾತ (Gouty Arthritis)

       ಇದು ಪುರುಷರಿಗೆ 40 ವರ್ಷವಾಟದ ಮೇಲೆ ಸಾಮಾನ್ಯವಾಗಿ ಸ್ತ್ರೀಯರಿಗೆ ಋತು ನಿಲ್ಲುವ ಸಮಯದಲ್ಲಿ ಸಂಭವವಿರುತ್ತದೆ. ಜೋಡಣ ಕೇಂದ್ರಗಳಲ್ಲಿ ‘ಯುರಿಕ್ ಆ್ಯಸಿಡ್ ನ ಲವಣಗಳು ಉತ್ವತ್ತಿ ಆಗುವುದು. ಮೂತ್ರಪಿಂಡ ಮತ್ತು ಮೂತ್ರನಾಳದಲ್ಲಿ ಕಲ್ಲುಗಳಿಂದ ಈ ವ್ಯಾಧಿ ಕಾಣಿಸಿಕೊಳ್ಳುತ್ತದೆ. ಈ ‘ಯುರಿಕ್ ಆ್ಯಸಿಡ್’ ದೇಹದ ಕಾರ್ಯಟುವಾಟಿಕೆಯಲ್ಲಿ ಕೊನೆಯ ಗಟ್ಟದಲ್ಲಿ ಉತ್ಪತ್ತಿಯಾಗುವ ರಸಾಯನಿಕ ವಸ್ತು. ಈ ಉರಿಯಿಂದ ಕೂಡಿದ ಸಂಧಿವಾತದವರಿಗೆ ರಕ್ತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿ ಯುರಿಕ್ ಆಸಿಡ್ ಇರುತ್ತದೆ. ಈ ರೀತಿ ಹೆಚ್ಚುವರಿಯಾದ ಆ್ಯಸಿಡ್ ಅನ್ನು ಮೂತ್ರಪಿಂಡವು(ಕಿಡ್ನಿ) ಮೂತ್ರದಿಂದ ಹೊರ ಹಾಕಲಾಗುತ್ತದೆ. ಮನುಷ್ಯನ ದೇಹದಲ್ಲಿ ಈ ಆ್ಯಸಿಡ್ ಶೇಕಡ 70% ರಷ್ಟು ಮಾತ್ರ ಮೂತ್ರದಿಂದ ಹೊರ ಹಾಕಲು ಸಾಮರ್ಥ್ಯ ಹೊಂದಿದೆ. ಉಳಿದ ಆ್ಯಸಿಡ್ ರಕ್ತದಲ್ಲಿಯೇ ಉಳಿಯುವುದರಿಂದ ಅದು ಕಾಲ ಕ್ರಮೇಣ ಹೆಚ್ಚಾಗಿ ಸೂಜಿಯಾಕಾರದಲ್ಲಿ ಜೋಡಣಾಕೇಂದ್ರದಲ್ಲಿ ಸ್ಥಿತವಾಗಿ ಅದು ಚುಚ್ಚುವುದರಿಂದ ಅಲ್ಲಿ ಉರಿ ಉಂಟಾಗುತ್ತದೆ. ಈ ಸೂಜಿಯಾಕಾರದ ಕಲ್ಲುಗಳು ಕಿಡ್ನಿ ಮತ್ತು ಮೂತ್ರನಾಳಗಳಲ್ಲಿ ಕಾಣಿಸಿ ಕೊಳ್ಳುತ್ತದೆ. ಇದು ಒರಟಾಗಿ ಜೋಡಣಾಸ್ಥಳಗಳಲ್ಲಿ ಗಾಯಗಳಾಗುತ್ತದೆ. ಇದು ಹೆಚ್ಚು ಮದ್ಯಪಾನ, ಮಾಂಸಾಹಾರ, ಸಿಹಿಬ್ರೆಡ್, ಅಣಬೆ, ಹೂಕೋಸು, ಕಾಳುಗಳ ಸೇವನೆಯಿಂದ ಬರುತ್ತದೆ.

        ಮೊದಲು ಇದು ಕಾಲು ಮತ್ತು ಕೈಬೆರಳುಗಳಲ್ಲಿ ಕಾಣಿಸಿಕೊಂಡು, ಅಲ್ಲಿ ಆಕಸ್ಮಿಕವಾಗಿ ಮೃದುವಾಗಿ ಬಿಸಿಯಾಗಿ ಬಾಹುವಾಗಿ ತೀವ್ರತರವಾದ ನೋವು ಹೆಚ್ಚಾಗುತ್ತದೆ ಇಮಧ್ಯರಾತ್ರಿ ನೋವು ಹೆಚ್ಚಾಗಿ ಬಾಧೆ ಪಡಬೇಕಾಗುತ್ತದೆ. ಇದಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ಎರಡು ವಾರಗಳಲ್ಲಿ ತೀವ್ರವಾಗುತ್ತದೆ. ನಂತರ ಜೋಡಣ ಸ್ಥಳಗಳು ಹಾಳಾಗುತ್ತದೆ.

        ರಕ್ತದ ತಪಾಸಣೆಯಿಂದ ಯುರಿಕ್ ಆ್ಯಸಿಡ್ ರಕ್ತದಲ್ಲಿ ಎಷ್ಟಿದೆಯೆಂದು ತಿಳಿದು ಚಿಕಿತ್ಸೆ ಪಡೆಯ ಬಹುದು.

7. ಚರ್ಮ ಸಂಬಂಧವಾದ ಸಂಧಿವಾತ (Psoriatic Arthropathy/Pseudogout)

         ಈ ವ್ಯಾಧಿಯು ಸಾಮಾನ್ಯವಾಗಿ ಹಿರಿಯರಿಗೆ 60 ವರ್ಷಗಳ ಮೇಲ್ಪಟ್ಟವರಿಗೆ ಬರುತ್ತದೆ. ಪುರುಷ ಸ್ತ್ರೀಯರಿಗೆ ಅವರ ಜೋಡಣಾ ಸ್ಥಳಗಳಲ್ಲಿ ಕ್ಯಾಲ್ಸಿಯಂ ಹರಳುಗಳು ಶೇಖರವಾಗಿರುತ್ತದೆ. ನೋವು ಮತ್ತು ಬಾಹು ಅವರ ಕೈನ ಮಣಿಕಟ್ಟು ಮತ್ತು ಬೆರಳು ಹಾಗೆ ಮಂಡಿಗಳಲ್ಲಿ ಶೇಖರವಾಗಿರುತ್ತದೆ. ನಮ್ಮ ದೇಹದಲ್ಲಿರುವ ಪ್ಯಾರಾಥೈರಾಯಿಡ್ ಗ್ರಂಥಿಯು ಹೆಚ್ಚಾಗಿ ಕ್ಯಾಲ್ಸಿಯಂನ್ನು ಉತ್ಪತ್ತಿ ಮಾಡುವುದರಿಂದ ಈ ರೀತಿ ಹರಳುಗಳ ರೂಪದಲ್ಲಿ ಶೇಖರವಾಗುತ್ತದೆ. ಒಂದು ವೇಳೆ ಈ ಥೈರಾಯಿಡ್ ಗ್ರಂಥಿಯನ್ನು ನಿಯಂತ್ರಿಸಿದರೂ ಸಹ ಈ ವ್ಯಾಧಿ ನಿಲ್ಲದು ಇದನ್ನು ಸಿ.ಪಿ.ಪಿ.ಡಿ. (CPPD – Calcium Pyro-phosphate dihydrate Crystal deposition disease) ಎಂದು ಕರೆಯುತ್ತಾರೆ. ವೈದ್ಯರು ರೋಗಿಯ ರಕ್ತ ಪರೀಕ್ಷೆ ಮಾಡಿದಾಗ ಥೈರಾಯಿಡ್ ಮತ್ತು ಪ್ಯಾರಾಥೈರಾಯಿಡ್ಗಳ ಕ್ರಿಯೆಗಳು ಅವು ಹೊರಸೂಸುವ ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಪ್ರಮಾಣವನ್ನು ತಿಳಿಯಬಹುದು.

8. ಮೂಳೆಯ ಜೋಡಣೆಯಿಂದ ಸಂಧಿವಾತ : (Ankylosing Spondylitis)

      ಇದು ಅವಶ್ಯಕವಾಗಿ ಬೆನ್ನು ಹುರಿಯಲ್ಲಿ ಕಾಣಿಸಿಕೊಳ್ಳುತ್ತದೆ ಅಲ್ಲಿ ಬಿಗಿತ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಆ ಸ್ಥಳದಲ್ಲಿ ಉರಿಯಾಗುತ್ತದೆ. ನಮ್ಮ ಬೆನ್ನು ಮೂಳೆಗಳ ಜೋಡಣಾಗಳದಲ್ಲಿ ಬಿಗಿತ ಗಡಸಾಗಿ ಅವು ಬಿಟ್ಟು ಹೋಗುತ್ತದೆ. ಇದು ಆಗಾಗ ಯುವಕರಲ್ಲಿ ಆಗುತ್ತದೆ ಬಹಳ ಅಂತಿಮವಾಗಿ ಬೆನ್ನೆಲುಬುಗಳ  ಜೋಡಣೆ ಬಿಟ್ಟು ಹೋಗುತ್ತದೆ. ಆದ್ದರಿಂದ ಈ ವ್ಯಾಧಿಯನ್ನು ಮೊದಲ ಹಂತದಲ್ಲಿ ತಡೆಯದಿದ್ದರೆ  ಮುಂದೆ ಕೆಳಬೆನ್ನು ಮತ್ತು ಸೊಂಟದಲ್ಲಿ ಬಿಗಿತವಾಗಿ ತೊಂದರೆಯಾಗುತ್ತದೆ.

       ಇದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇರುತ್ತದೆ ಜೆನೆಟಿಕ್ ಎಚ್ ಎಲ್ ಎ-ಬಿ.27 ಇದ್ದರವರು ಶೇಕಡ 95% ಭಾಗ ಈ ರೋಗಕ್ಕೆ ತುತ್ತಾಗುತ್ತಾರೆಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ. ಮೊದಲ ಮುನ್ಸೂಚನೆಯು ಬೆನ್ನಿನ ಕೆಳಭಾಗದಲ್ಲಿ ಬೆಳಿಗ್ಗೆ ಹಾಸಿಗೆಯಿಂದ ಏಳುವ ಸಮಯದಲ್ಲಿ ಕಾಣಿಸಿ ಕೂಳ್ಳುತ್ತದೆ. ಬೆನ್ನ ಕೆಳಭಾಗ ಸಕ್ಕೋಯಿಲಿಕ್ ಅಂದರೆ ಸೊಂಟ ಮತ್ತು ಬೆನ್ನಿನ ಕೆಳಭಾಗದ ಮಧ್ಯದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.

      ಈ ಉರಿಯು ಕ್ರಮೇಣ ಕಟಿ ಭಾಗದ ಎಲ್ಲಾ ಕಡೆ ಪ್ರಸರಿಸುತ್ತದೆ. ಆನಂತರ ಕತ್ತು ಭಾಗ ಬಿಗಿಯಾಗುತ್ತದೆ. ಇದನ್ನು ನಾವು ಗಮನಿಸದಿದ್ದರೆ ಬೆನ್ನು ಶಾಶ್ವತವಾಗಿ ಭಾಗುತ್ತದೆ. ಪೀಡಿತ ವಾದ ಬೆನ್ನು ಮೂಳೆಭಾಗವು ನಡೆಯುವಾಗ ತೊಂದರೆ ನೀಡುತ್ತದೆ. ಚಿಕಿತ್ಸೆಯು -ಪಿಸಿಯೋತೆರಪಿಯ ಮುಖಾಂತರ ಬೆನ್ನಿಗೆ ಸಂಬಂಧವಾದ ವ್ಯಾಯಾಮ ಕೈಗೊಳ್ಳಬೇಕು.

ಭಿನ್ನವಾದ ನೀರಿನಿಂದ ಚಿಕಿತ್ಸೆ ಈ ಚಿಕಿತ್ಸೆಯಿಂದ ಜಡವಾದ ಅಂಗಾಂಗದ ಭಾಗಕ್ಕೆ ರಕ್ತ ಪರಿಚಲನೆ ಮಾಡಿದಂತಾಗುತ್ತದೆ. ಮೊದಲು ಬಿಸಿ ನೀರಿನಿಂದ ಈ ಭಾಗವನ್ನು ಚಿಕಿತ್ಸೆ ಮಾಡಿ, ಕೆಲವು ನಿಮಿಷದಲ್ಲಿ ನಂತರ ತಂಪಾದ ನೀರಿನಿಂದ ಚಿಕಿತ್ಸೆ ಮಾಡಿ. ಅಂದರೆ ಬಿಸಿ ನೀರಿನ ರಬ್ಬರ್ ಬ್ಯಾಗ್ ಇಡಬಹುದು ಮತ್ತು ಐಸ್‌ ಬ್ಯಾಗ್ ಇಡಬಹುದು ಅಥವಾ ಬಿಸಿನೀರು ಮತ್ತು ತಣ್ಣನೆ ನೀರನ್ನು ನಿಧಾನವಾಗಿ ಈ ಭಾಗದ ಮೇಲೆ ಸುರಿಯುತ್ತಿರ ಬಹುದು.

ಮೃದುವಾದ ಬ್ರೆಸ್‌ನಿಂದ ಈ ಭಾಗದ ಮೇಲೆ ಮಸಾಜ್ ಮಾಡಿ ಅಥವಾ ಟವಲ್‌ನಿಂದ ಮಸಾಜ್ ಮಾಡಬಹುದು. ಇದರಿಂದ ಆ ಭಾಗದಲ್ಲಿ ರಕ್ತ ಪರಿಚಲನೆ ಉತ್ತಮವಾಗಿ ಅಲ್ಲಿರುವ ಜೀವಾಣುಗಳಿಂದ ಉತ್ಪತ್ತಿಯಾಗುವ ಕೆಟ್ಟ ವಿಷಪದಾರ್ಥ ಅಲ್ಲಿಂದ ಹೊರಹೋಗಿ ಆ ಭಾಗದ ಜೋಡಣೆಯಲ್ಲಿ ನೋವು ಕಡಿಮೆಯಾಗುವುದು.

        ನೋವಿರುವ ಜೋಡಣಾಕೇಂದ್ರದ ಮೇಲೆ ನೋವು ನಿವಾರಕ ಔಷಧಯುಕ್ತ ಎಣ್ಣೆ ಅಥವಾ ಮೂಲಾಮನ್ನು ಹಚ್ಚಿ ನಿಧಾನವಾಗಿ ಮಸಾಜ್ ಬೆಳಿಗ್ಗೆ ಮತ್ತು ಸಂಜೆ ಮಾಡುತ್ತಾ ಬರುವುದು.

      ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಒಂದು ಅಗಲವಾದ ಪಾತ್ರೆಗೆ ಹಾಕಿ ನಿಮ್ಮ ಜೋಡಣಾಸ್ಥಳವನ್ನು ಅದರಲ್ಲಿ ಕೆಲವು ಕಾಲ ಮುಳುಗಿಸಿಡಿ ಅಥವಾ ಉಪ್ಪು ಸಹಿತವಾದ ಬಿಸಿನೀರಿಗೆ ಟವಲ್ ಹಾಕಿ ಅದನ್ನು ಸ್ವಲ್ಪ ಹಿಂಡಿ ಆ ಬಿಸಿ ಟವಲ್ ನಿಂದ ಜೋಡಣಾಸ್ಥಳದ ಮೇಲೆ ಇಡಿ. ಈ ರೀತಿ ಹಲವು ಸಲ ಮಾಡಿ. ಇದರಿಂದ ಆ ಭಾಗದ ಮಾಂಸಖಂಡಗಳು ಸಡಿಲಗೊಂಡು ರಕ್ತ ಪರಿಚಲನೆಯಾಗಿ, ನೋವು ಕಡಿಮೆ ಆಗುತ್ತದೆ.