ಮನೆ ಆರೋಗ್ಯ ಬಿಪಿಯನ್ನು ಅಳೆಯುವ ಪದ್ದತಿಗಳು

ಬಿಪಿಯನ್ನು ಅಳೆಯುವ ಪದ್ದತಿಗಳು

0

ರಕ್ತದೋತ್ತಡವನ್ನು ಅಳೆಯಲು ಉಪಯೋಗಿಸುವ ಪರಿಕರಗಳನ್ನು ಸ್ವಿಗೋ ಮೊನೋಮೀಟರ್ (SphygmomanoMeter)  ಎನ್ನುತ್ತಾರೆ ಇವು ಮೂರು ಬಗೆಯಲ್ಲಿ ಲಭ್ಯವಿದೆ

1. ಮರ್ಕ್ಯೂರಿ (Mercury)

2. ಡಯಲ್ ಡೈಪ್ ಅನೆರಾಯ್ಡ್ (Alneroid)

3. ಡಿಜಿಟಲ್ ಟೈಪ್ ಎಲೆಕ್ಟ್ರಾನಿಕ್ (Elctronic)

ಈ ಮೂರರಲ್ಲಿ ಖಚಿತವಾದ ರೀಡಿಂಗ್ ತೋರಿಸುವುದು ಮರ್ಕ್ಯೂರಿ ಟೈಪ್ ವಿಕ್ಕವರಡಕ್ಕೂ ನಂತರದ ಸ್ಥಾನ.

ಇತ್ತೀಚಿನ ದಿನಗಳಲ್ಲಿ ಬಹಳ ಮಂದಿ ಮನೆಯಲ್ಲಿ ತಮಗೆ ತಾವೇ ಬಿಪಿ ಚೆಕ್ ಮಾಡಿಕೊಳ್ಳಲು ಎಲೆಕ್ಟ್ರಾನಿಕ್ ಡಿಜಿಟಲ್ ಪರಿಕರವನ್ನು ಬಳಸುತ್ತಿದ್ದಾರೆ. ಈ ಪರಿಕರ ಒಮ್ಮೊಮ್ಮೆ ಹೆಚ್ಚು ಒಮ್ಮೊಮ್ಮೆ ಕಡಿಮೆ ರೀಡಿಂಗ್ ತೋರಿಸುವ ಅಪಾಯವಿದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿ ತನಗೆ ಬಿಪಿ ಬಹಳ ಹೆಚ್ಚಾಗಿದೆಯಂ  ಕಳವಳ ಪಡಬಹುದು

ಬಿಪಿಯನ್ನು ಸರಿಯಾಗಿ ತಿಳಿದುಕೊಳ್ಳಲು ಡಾಕ್ಟರ್ ಬಳಿಗೆ ಹೋಗುವುದೇ ಒಳ್ಳೆಯದು ಒಂದು ವೇಳೆ ಯಾರಿಗಾದರೂ ಮರ್ಕ್ಯುರಿ ಟೈಪ್ ಪರಿಕರಣವನ್ನು ಸರಿಯಾಗಿ ಉಪಯೋಗಿಸುವುದು ತಿಳಿದಿದ್ದರೆ ಅಂತಹವರಿಂದ ಚೆಕಪ್ ಮಾಡಿಸಿಕೊಳ್ಳಬಹುದು.

  ಇತ್ತೀಚಿನ ದಿನಗಳಲ್ಲಿ ಹೈ ಬೀಪಿ ಇರುವುದು ಸರ್ವೇಸಾಧಾರಣ. ಇದಕ್ಕೆ ಪ್ರತ್ಯೇಕ ಲಕ್ಷಣಗಳು (Symptoms)ಎಂದೇನೂ ಇಲ್ಲ.ಸಕಾಲದಲ್ಲಿ ಕಂಡುಕೊಂಡರೆ ಚಿಕಿತ್ಸೆ ಸುಲಭ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

ಹೈಪರ್ ಟೆನ್ಶನ್  (Hypertension )

        ಹೈ ಬೀಪಿ ಮತ್ತು ಅಸಾಧಾರಣವಾಗಿ  ಹೆಚ್ಚಾದರೆ ಅದನ್ನು ಹೈಪರ್ ಟೆನ್ಷನ್ ಎನ್ನುತ್ತಾರೆ. ಮಾನಸಿಕವಾಗಿ ಶಾರೀರಿಕವಾಗಿ ಒತ್ತಡಕ್ಕೆ ಗುರಿಯಾದಾಗ ಬೀಪಿ ಬಹಳ ಹೆಚ್ಚಾಗಿ ಹೈಪರ್ ಟೆನ್ಷನ್ ಗೆ ದಾರಿಯಾಗುತ್ತದೆ. ಆದರೆ ಹೈಪರ್ ಟೆನ್ಷನ್ ಬಾಧೆಪಡುವ ವ್ಯಕ್ತಿಗೆ ಯಾವ ಒತ್ತಡವೂ ಇಲ್ಲದ ಸಾಧಾರಣ ಸ್ಥಿತಿಯಲ್ಲೂ ಸಹ ಬೀಪಿ ಹೆಚ್ಚಾಗುವ ಅವಕಾಶಗಳಿವೆ.

ಬಹಳ ಮಂದಿ ತಮಗೆ ಹೈಪರ್ ಟೆನ್ಷನ್ ಇದೆಯೆಂಬ ಅರಿವಿಲ್ಲದೆಯೇ, ಅದರ ಬಾಧೆ ಗೊಳಗಾಗಿ ಪಾರ್ಶ್ವವಾಯುವಿಗೆ ಈಡಾಗುವುದನ್ನು ಕಾಣುತ್ತೇವೆ. ಅದ್ದರಿಂದ ಪ್ರತಿಯೊಬ್ಬರೂ 40 ವರ್ಷ ವಯಸ್ಸು ದಾಟಿದ ಮೇಲೆ, ರೆಗ್ಯುಲರ್ ಆಗಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳುವುದು ಅಗತ್ಯ.

ಸಾಧಾರಣ ಬೀಪಿಗೂ ಹೈಬೀಪಿಗೂ ನಡುವೆ ನಿರ್ದಿಷ್ಟ ಸೀಮಾರೇಖೆಯೆಂಬುದೇನೂ  ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯವರು ಸೂಚಿಸುವ ಪ್ರಕಾರ systolic pressure 160mm Hg ಇರುವುದು Diastolic 95 mm Hg ಇದ್ದರೆ ಅದು ಹೈಪರ್ ಟೆನ್ಷನ್ ಎಂದು ಪರಿಗಣಿಸಲಲ್ಪಡುತ್ತದೆ. 

ಹಾಗೆಯೇ Systolic 140-160 ನಡುವೆ ಮತ್ತು Diastolic pressure 90-95 ನಡುವೆ ಇರುವುದು ಸಾಧಾರಣ ಹೈಪರ್ ಟೆನ್ಷನ್ ಕೆಳಗೆ ಬರುತ್ತದೆ.

 ಹೈಪರ್ ಟೆನ್ಷನ್ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗೆಯೇ ಮಧ್ಯ ವಯಸ್ಕರಲ್ಲಿ ವಯಸ್ಸಾದವರಲ್ಲಿ ಅತ್ಯಧಿಕವಾಗಿ ಇರುತ್ತದೆ  ಯೌವನದಲ್ಲಿಯೂ ಸಹ ಆಗಾಗ ಕಾಣಿಸಿಕೊಳ್ಳಬಹುದು.

ಕಾಂಪ್ಲಿಕೇಷನ್ಸ್  (ಜಟಿಲತೆಗಳು )

     lಹೈ ಬೀಪಿಯನ್ನು ಆಗಿಂದಾಗ ನಿಯಂತ್ರಿಸಿಕೊಳ್ಳದೆ ಹೋದರೆ. ಈ ಕೆಳಗಿನ ಜಟಿಲಸಮಸ್ಯೆಗಳಿಗೆ ಗುರಿಯಾಗುವ ಸಂಭವವಿದೆ.

     ಆಯಸ್ಸು ಕಡಿಮೆಯಾಗುತ್ತದೆ ಹೈ ಬೀಪಿಯನ್ನು ಕ್ರಮಬದವಾಗಿ.ಸಕಾಲದಲ್ಲಿ ಕಡಿಮೆ ಮಾಡಿಕೊಳ್ಳದೆ ಹೋದರೆ. ಆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಎಂಬುದಕ್ಕೆ ಸಾಕ್ಷಾಧಾರಗಳಿವೆ.

 ಉದಾಹರಣೆಗೆ:

     35 ವರ್ಷಗಳ ವ್ಯಕ್ತಿಯ  ಸಿಸ್ಟಾಲಿಕ್ 150mm Hgಯಾಗಿಯೂ ಡಯಾಸ್ಟಾಲಿಕ್ ಬೀ100mmHgಯಾಗಿಯೂ ಇದ್ದು. ಅವನು ತನ್ನ ಬೀಪಿಯನ್ನು ಆಗಿಂದಾಗ್ಗೆ ನಿಯಂತ್ರಿಸಿಕೊಳ್ಳದಿದ್ದರೆ ಅವನು  16.5 ವರ್ಷಗಳ ಮೊದಲೇ ಮರಣಿಸುತ್ತಾನೆ.

      ಹಾಗೆಯೇ 45 ವರ್ಷ 55 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಮೇಲೆ ಹೇಳಿದ ರೀತಿಯ ಬೀಪಿ ಇದ್ದರೆ ಅವರ ವಯಸ್ಸಿನಲ್ಲಿ ಕ್ರಮವಾಗಿ 11.5 ವರ್ಷಗಳು, 6 ವರ್ಷಗಳು ಕಡಿಮೆಯಾಗುವ ಸಂಭವವಿದೆ.

         ಹೃದಯ ಹಿಗುತ್ತದೆ : ಹೈಬೀಪಿ ಇರುವ ವ್ಯಕ್ತಿಯ ರಕ್ತನಾಳಗಳಲ್ಲಿ ಅಧಿಕ ಶ್ರಮದಿಂದ ರಕ್ತ ಹರಿಯಬೇಕಾಗುವುದರಿಂದ,ಹೃದಯದ ಮೇಲೆ ಹೆಚ್ಚಿನ ಹೊರೆಯಾಗಿ ರಕ್ತವನ್ನು ಪಂಪ್ ಮಾಡಲು ಹೃದಯ ಹೆಚ್ಚು ಶ್ರಮಪಡಬೇಕಾಗುತ್ತದೆ.ಆ ಪ್ರಕ್ರಿಯೆಯಲ್ಲಿ ಅವನ ಹೃದಯದ ಗಾತ್ರ ಬಹಳ ಚೆನ್ನಾಗಿ, ಇನ್ನು ಸ್ವಲ್ಪ ಮಾತ್ರವೂ ಒತ್ತಡವನ್ನು ತಡೆಯಲಾರದ ಸ್ಥಿತಿಗೆ ತಲುಪಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾದೆ

ಹಿಂದಿನ ಲೇಖನಕುಡಿಯುವ ನೀರಿನ ವಿಚಾರಕ್ಕೆ ಗಲಾಟೆ: ಯುವಕನ ಕೊಲೆ
ಮುಂದಿನ ಲೇಖನಎಸ್ ಎಸ್ ಎಲ್ ​ಸಿ  ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ: ಮೂವರಿಗೆ ಚಾಕು ಇರಿತ