ನರ ದೌರ್ಬಲ್ಯ: ದಿಂದ ಬಳಲುವವರು ಒಂದು ಚಮಚೆ ಅಶ್ವಗಂಧದ ಬೇರಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.
ಪುರುಷನಲ್ಲಿ ವೀರ್ಯಾಣುಗಳನ್ನು ಆರೋಗ್ಯವಾಗಿರದಿದ್ದಲ್ಲಿ ಮತ್ತು ಸಂಖ್ಯೆ ಕಡಿಮೆ ಇದ್ದಲ್ಲಿ : ಪ್ರತಿದಿನ ಒಂದು ಚಮಚೆ ಅಶ್ವಗಂಧದ ಬೇರಿನ ಪುಡಿಯನ್ನು ಜೇನುತುಪ್ಪ ಅಥವಾ ಹಾಲು ಅಥವಾ ತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಹಾಗೂ ಸಂಜೆ ಸೇವಿಸಬೇಕು.
ಲೈಂಗಿಕ: ಶಕ್ತಿಯಿಂದ ಬಳಲುವವರು ದಿನಕ್ಕೆರಡು ಬಾರಿ ಅಶ್ವಗಂಧದ ಬೇರಿನ ಪುಡಿಯನ್ನು ಹಾಲಿನೊಂದಿಗೆ ಕುಡಿಯಬೇಕು.
ಸ್ತ್ರೀಯರಲ್ಲಿ ರಕ್ತಹೀನತೆ,ಬಿಳಿ ಮುಟ್ಟು, ಅಧಿಕ ರಕ್ತಸ್ರಾ : ವವಿದ್ದಲ್ಲಿ ಅಶ್ವಗಂಧದ ಬೇರನ್ನು ಪುಡಿಮಾಡಿ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಸಂಧಿವಾತದಿಂದ: ಬಳಲುವವರು ಅಶ್ವಗಂಧದ ಬೇರನ್ನು ಕುಟ್ಟಿ ಪುಡಿ ಮಾಡಿ ಹಾಲಿನೊಂದಿಗೆ ದಿನಕ್ಕೆರಡು ಬಾರಿ ಕುಡಿಯುವುದಲ್ಲದೆ ಬೇರನ್ನು ತೇಯ್ದು ನೋವಿರುವ ಜಾಗಕ್ಕೆ ಲೇಪಿಸಿಕೊಳ್ಳಬೇಕು.
ಟಾನಿಕ್: ದೀರ್ಘಕಾಲ ಯಾವುದಾದರೂಂದು ಕಾಯಿಲೆಯಿಂದ ಬಳಲಿದ್ದವರು, ಮಕ್ಕಳು ವೃದ್ಧರು ಮುಂತಾದವರು ಅಶ್ವಗಂಧದ ಬೇರಿನ ಪುಡಿಯನ್ನು ಹಾಲು ಅಥವಾ ಜೇನುತುಪ್ಪದಲ್ಲಿ ದಿನಕೆರಡು ಬಾರಿ ಬಿಡದೇ ಸೇವನೆ ಮಾಡಬೇಕು.
ಬಂಜೆತನ: ಸ್ತ್ರೀಯರ ಬಂಜೆತನಕ್ಕೂ ಇದು ಉತ್ತಮ ಔಷಧಿಯಾಗಿದೆ. ಅಶ್ವಗಂಧದ ಬೇರಿನ ಕಷಾಯ ತಯಾರಿಸಿ ಹಾಲಿನೊಂದಿಗೆ ಕುಡಿಯಬೇಕು ಮಾಸಿಕ ಸ್ರಾವದ ಐದನಯ ದಿನದಿಂದ 15 ದಿನಗಳ ಕಾಲ ಇದನ್ನು ಸೇವಿಸಬೇಕು.
ಗಾಯ: ಹಳೆಯ ಗಾಯಗಳಾಗಿದ್ದಲ್ಲಿ ಅಶ್ವಗಂಧದ ತಾಜಾ ಬೇರನ್ನು ತೈಯ್ದು ಲೇಪಿಸಬೇಕು.
ಜಂತು ನಾಶಕ: ಜಂತುಗಳಿಗಾಗಿದ್ದಲ್ಲಿ ಅಶ್ವಗಂಧದ ಎಲೆಗಳ ಕಷಾಯ ತಯಾರಿಸಿ ಒಂದು ವಾರಕಾಲ ದಿನಕ್ಕೆರಡು ಬಾರಿ ಕುಡಿಯಲು ಕೊಡಬೇಕು.
ಚಿಕ್ಕ ಮಕ್ಕಳಿಗೆ: ಒಂದು ವರ್ಷವಯಸಿನೊಳಗಿನ ಮಕ್ಕಳಿಗೆ ಆಶಕ್ತತೆ ಇದ್ದಲ್ಲಿ ಅಶ್ವಗಂಧದ ಬೇರೆನ್ನು ಹಾಲಿನಲ್ಲಿ ತೇಯ್ದು ಬೆಣ್ಣೆಯೊಂದಿಗೆ ಸಕ್ಕರೆ ಬೆರೆಸಿ ತಿನ್ನಿಸಬೇಕು.
ಮೂಲವ್ಯಾಧಿಯಿಂದ: ಬಳಲುವವರು ಅಶ್ವಗಂಧದ ಎಲೆಗಳ ರಸವನ್ನು 4 ರಿಂದ 6 ಚಮಚೆಯಷ್ಟು ದಿನಕ್ಕೆರಡು ಬಾರಿ ಕುಡಿಯಬೇಕು.
ಊತವಿರುವ: ಜಾಗದಲ್ಲಿ ಎಲೆಗಳನ್ನು ನುಣ್ಣಗೆ ಅರೆದು ಪಟ್ಟು ಹಾಕಬೇಕು. ಎಲೆಗಳನ್ನು ಬಿಸಿ ಮಾಡಿ ಶಾಖ ಕೊಡುವುದರಿಂದ ನೋವು ಕಡಿಮೆ ಆಗುತ್ತದೆ.
ಬಾಣಂತಿಯರು: ಅಶ್ವಗಂಧದ ಬೇರಿನ ಪುಡಿಯನ್ನು ಹಾಲಿನೊಂದಿಗೆ ಕುಡಿದಲ್ಲಿ ಎದೆ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ.
ಇಸಬು, ಕಜ್ಜಿ: ಮುಂತಾದ ರೋಗಗಳಿಂದ ಬಳಲುವವರ ಅಶ್ವಗಂಧದ ಬೇರಿನ ಕಷಾಯವನ್ನು ಎಲ್ಲೆಣ್ಣೆ ಇಲ್ಲವೇ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತೈಲ ತಯಾರಿಸಿಟ್ಟುಕೊಂಡು ಮೇಲೆ ಲೇಪಿಸಬೇಕು.
ಅಭ್ಯಂಗ: ಅಶ್ವಗಂಧದ ಬೇರಿನಿಂದ ತಯಾರಿಸಿದ ತೈಲವನ್ನು ವಾರಕ್ಕೊಂದು ಬಾರಿ ಅಭ್ಯಂಗ ಮೈಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡು ಒಂದು ಗಂಟೆ ಕಾಲ ಬಿಟ್ಟು ಸ್ನಾನ ಮಾಡುವುದು ಮಾಡುವುದರಿಂದ ಚರ್ಮ ಆರೋಗ್ಯಕರವಾಗಿರುವುದಲ್ಲದೆ ಕಾಂತಿಯೂ ಹೆಚ್ಚುತ್ತದೆ.
ರಕ್ತದೊತ್ತಡದ ಕಡಿಮೆಯಾಗಿದ್ದಲ್ಲಿ: ಒಂದು ಚಮಚ ಅಶ್ವಗಂಧದ ಬೇರಿನ ಪುಡಿಯನ್ನು ದಿನಕ್ಕೆರಡು ಬಾರಿ ಹಾಲಿನೊಂದಿಗೆ ಇಲ್ಲವೇ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಸಹಜಸ್ಥಿತಿಗೆ ಬರುತ್ತದೆ.
ಚೇಳು ಕಡಿತದಲ್ಲಿ: ಅಶ್ವಗಂಧದ ಬೇರಿನ ಕಷಾಯ ತಯಾರಿಸಿ ಕುಡಿಯುವುದರೊಂದಿಗೆ ಹಾಲಿನಲ್ಲಿ ಬೇರೆನ್ನು ತೇಯ್ದು ಕಡಿತದ ಸ್ಥಳಕ್ಕೆ ಲೇಪಿಸಬೇಕು.ಇದು ವಿಷಹರವಾಗಿ ಕೆಲಸ ಮಾಡುತ್ತದೆ.
ಮುತ್ರೋತ್ತೇಜಕ: ಅಶ್ವಗಂಧದ ಬೀಜದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಮೂತ್ರ ಸ್ರಾವ ಕಡಿಮೆಯಾಗದಿದ್ದಲ್ಲಿ ಸಹಜ ಸ್ಥಿತಿಗೆ ಬರುತ್ತದೆ.
. *ಋತು ಬಂಧ: ಸಮಯದಲ್ಲಿ ಸ್ತ್ರೀಯರಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಬದಲಾವಣೆಯಾಗುವುದು ಸಹಜ ಆದ್ದರಿಂದ ಅಂತಹ ಸಮಯದಲ್ಲಿ ದಿನಕ್ಕೆರಡು ಬಾರಿ ಒಂದು ಚಮಚ ಅಶ್ವಗಂಧದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದಲ್ಲಿ ಯಾವುದೇ ತೊಂದರೆಗಳು ಬಧಿಸಲಾರವು.
ತಲೆನೋವು: ನಿರಂತರವಾಗಿ ತಲೆನೋವು ಬಿಡದೇ ಬಾಧಿಸುತ್ತಿದ್ದಲ್ಲಿ ಒಂದು ಚಮಚ ಅಶ್ವಗಂಧ ಬೇರಿನ ಪುಡಿಯನ್ನು ಹಾಲಿನಲ್ಲಿ ಬೆರೆಸಿ, ಎರಡರಿಂದ ಮೂರು ವಾರ ದಿನಕ್ಕೆರಡು ಬಾರಿ ಸೇವಿಸಬೇಕು.
ಮಾರುಕಟ್ಟೆಯಲ್ಲಿ ಅಶ್ವಗಂಧಿನಿಂದ ತಯಾರಿಸಲ್ಪಟ್ಟ ಅಶ್ವಗಂಧ ಲೇಹ್ಯ, ಅಶ್ವಗಂಧಾರಿಷ್ಟ, ಅಶ್ವಗಂಧಾದ ಚೂರ್ಣ, ಬಲಾಶ್ವಗಂಧ ತೈಲ ಲಭ್ಯ.
ಸಂಶೋಧನೆ: ಅಶ್ವಗಂಧ ಬೇರನ್ನು ಇಲಿಗಳ ಮೇಲೆ ಪ್ರಯೋಗಾತ್ಮಕವಾಗಿ ನೀಡಿದಾಗ ಅದು ದೇಹದಲ್ಲಿನ ವಿಷ ದ್ರವ್ಯಗಳನ್ನು ಹೊರ ಹಾಕಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿರುವುದು ದೃಡಪಟ್ಟಿದೆ. ಅಶ್ವಗಂಧದಲ್ಲಿನ ಆಲ್ಕಲಾಯ್ಡ್ ಗಳು ದೇಹವನ್ನು ಶುದ್ಧಿಗೊಳಿಸುತ್ತವೆ.
ಅಶ್ವಗಂಧದ ಸೇವನೆ: ಲೋಹಗಳಿಂದ ಉತ್ಪತ್ತಿಯಾದ ವಿಷಾಣುಗಳನ್ನು ಹೊರಹಾಕಿ ಯಕೃತ್ ಮತ್ತು ಮೂತ್ರಕೋಶಗಳನ್ನು ರಕ್ಷಿಸುತ್ತದೆ ಎಂಬುದು ಪ್ರಯೋಗಗಳಿಂದ ದೃಢಪಟ್ಟಿದೆ.
ಚಿಕ್ಕ ಮಕ್ಕಳಲ್ಲಿ ಶಾಲೆಗೆ ಹೋಗು ಸೇರುವ ಮುನ್ನ ಐದು ವರ್ಷದೊಳಗಿನ ಮಕ್ಕಳಲ್ಲಿ ಅಶ್ವಗಂಧವನ್ನು ಮಾತ್ರೆಯ ರೂಪದಲ್ಲಿ ಪ್ರಯೋಗಾತ್ಮಕವಾಗಿ ನೀಡಿದಾಗ ಅದರಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿದ್ದುದು ಕಂಡು ಬಂದಿದೆ.