ಮನೆ ಮನರಂಜನೆ ಖ್ಯಾತ ತಮಿಳು ನಟ ಮನೋಬಾಲಾ ನಿಧನ

ಖ್ಯಾತ ತಮಿಳು ನಟ ಮನೋಬಾಲಾ ನಿಧನ

0

ಚೆನ್ನೈ: ಕಾಲಿವುಡ್‌ ನಲ್ಲಿ ನಟ, ನಿರ್ದೇಶಕರಾಗಿ ಅಪಾರ ಖ್ಯಾತಿಯನ್ನು ಗಳಸಿದ್ದ ಮನೋಬಾಲಾ (69) ಬುಧವಾರ (ಮೇ 3 ರಂದು) ಚೆನ್ನೈನಲ್ಲಿ ನಿಧನರಾಗಿದ್ದಾರೆ.

Join Our Whatsapp Group

ಕಳೆದ ಕೆಲ ಸಮಯದಿಂದ ಶ್ವಾಸಕೋಶ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ವರದಿ ತಿಳಿಸಿದೆ.

ಅವರ ನಿಧನದ ಸುದ್ದಿಯನ್ನು ನಟ-ನಿರ್ದೇಶಕ ಜಿಎಂ ಕುಮಾರ್ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ.

1979 ರಲ್ಲಿ ಭಾರತಿರಾಜ ಅವರ ʼಪುತಿಯ ವಾರ್ಪುಗಳ್ʼ ಚಿತ್ರದ ಮೂಲಕ ‌ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ನೂರಕ್ಕೂ ಅಧಿಕ ಸಿನಿಮಾದಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು.

ಕಮಲ್ ಹಾಸನ್ ಅವರ ಸಲಹೆಯ ಮೇರೆಗೆ ಭಾರತಿರಾಜ ಅವರಡಿಯಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇದಾದ ಬಳಿಕ 1982 ರಲ್ಲಿ ʼಆಗಾಯ ಗಂಗೈʼ ಚಿತ್ರದ ಮೂಲಕ ಮೊದಲ ಬಾರಿ ತಮ್ಮ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದರು.

ʼಪಿಳ್ಳೈ ನಿಲಾʼ, ʼಊರ್ಕಾವಲನ್ʼ, ʼಎನ್ ಪುರುಷಾನ್ತನ್ ಎನಕ್ಕು ಮಟ್ಟುಮ್ತಾನ್ʼ, ʼಕರುಪ್ಪು ವೆಳ್ಳೈʼ, ʼಮಲ್ಲು ವೆಟ್ಟಿ ಮೈನರ್ʼ ʼಪಾರಂಬರಿಯಂʼ.. ಹೀಗೆ 25 ಸಿನಿಮಾಗಳನ್ನು ನಿರ್ದೇಶನ ಮಾಡಿ ಮಿಂಚಿದ್ದರು. ಸಿನಿಮಾ ಮಾತ್ರವಲ್ಲದೆ ಧಾರಾವಾಹಿಗಳಲ್ಲೂ ನಟಿಸಿ, ಕಿರುತೆರೆಯ ಕೆಲ ಧಾರಾವಾಹಿಗಳನ್ನೂ ನಿರ್ದೇಶಿಸಿದ್ದರು. ನಿರ್ಮಾಪಕರಾಗಿಯೂ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದರು.

35 ವರ್ಷಗಳ ಸಿನಿ ಜರ್ನಿಯಲ್ಲಿ ಸುಮಾರು 450 ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಅವರು,ಕಾಜಲ್ ಅಗರ್ವಾಲ್ ಅವರ ʼಘೋಸ್ಟಿʼ ಚಿತ್ರದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.

ಪತ್ನಿ ಮತ್ತು ಮಗನನ್ನು ಅವರು ಅಗಲಿದ್ದಾರೆ.

ಹಿಂದಿನ ಲೇಖನಸ್ಕೂಟಿಗೆ ಕಾರು ಡಿಕ್ಕಿ: ರಕ್ತಸಿಕ್ತವಾಗಿ ಕಾರಿನ ಮೇಲೆ ಸ್ಕೂಟಿ ಚಾಲಕ ಬಿದ್ದಿದ್ದರೂ 3 ಕಿ.ಮೀ ಕಾರು ಓಡಿಸಿದ ಚಾಲಕ
ಮುಂದಿನ ಲೇಖನಆಟೋ ರಿಕ್ಷಾಕ್ಕೆ ಬೆಂಕಿ: ಮಹಿಳೆ ಸಜೀವ ದಹನ