ಮನೆ ರಾಜ್ಯ ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ, ಚೈತ್ರಾ ಪೋಸ್ಟ್‌ ವಾರ್‌..!

ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ, ಚೈತ್ರಾ ಪೋಸ್ಟ್‌ ವಾರ್‌..!

0

ಬಿಗ್​​ ಬಾಸ್ ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಅದೇ ಗುದ್ದಾಟ ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ vs ಅಶ್ವಿನಿ ಗೌಡ ಪೋಸ್ಟ್ ವಾರ್ ಜೋರಾಗಿದೆ.

ಬಿಗ್​ ಬಾಸ್ ಸೀಸನ್​ 12ರ ಶೋನಲ್ಲಿ ವೈಲ್ಡ್​​ ಕಾರ್ಡ್ ಎಂಟ್ರಿ ಮೂಲಕ ರಜತ್​ ಹಾಗೂ ಚೈತ್ರಾ ಕುಂದಾಪುರ ಬಿಗ್​​ ಬಾಸ್​ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ​ ಶೇರ್​​ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ.

ಅಶ್ವಿನಿ ಗೌಡ ಅವರ ಒಂದು ಪೋಸ್ಟ್​​​ಗೆ ಚೈತ್ರಾ ಕುಂದಾಪುರ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಕೈ ಕಾಲುಗಳ ಮೇಲೆ ಪರಚಿರುವ ಗಾಯದ ಫೋಟೋವನ್ನು ಅಶ್ವಿನಿ ಗೌಡ ಪೋಸ್ಟ್ ಮಾಡಿದ್ದಾರೆ. ಇದು ಚೈತ್ರಾ ಕುಂದಾಪುರ ಅವರೇ ಪರಚಿದ ಗಾಯಗಳು ಅಂತ ಜನರು ಕಮೆಂಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅಶ್ವಿನಿ ಪೋಸ್ಟ್​ಗೆ ಚೈತ್ರಾ ಕುಂದಾಪುರ ಕೂಡ ತಿರುಗೇಟು ನೀಡಿದ್ದಾರೆ.

ನಂಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದ್ರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ತಂಡ​ ಇಲ್ಲ ಎಂದು ಕೌಂಟರ್​ ಪೋಸ್ಟ್ ಮಾಡಿದ್ದಾರೆ. ಚೈತ್ರಾ ಕುಂದಾಪುರ ಪೋಸ್ಟ್​ ಮೇಲೆ ಪೋಸ್ಟ್​ ಶೇರ್​ ಮಾಡಿ ಕೌಂಟರ್​ ಕೊಟ್ಟಿದ್ದು, ಅಶ್ವಿನಿ ಗೌಡ ಫ್ಯಾನ್ಸ್ ಗರಂ ಆಗಿದ್ದಾರೆ. ಚೈತ್ರಾ ವಿರುದ್ಧ ನಾನಾ ಆಕ್ರೋಶದ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ.