Saval TV on YouTube
ನವದೆಹಲಿ: ಭಾರತದ ಮೆಹುಲಿ ಘೋಷ್ ಮತ್ತು ತಿಲೋತ್ತಮಾ ಸೇನ್ ಅವರು ಏಷ್ಯನ್ ಏರ್’ಗನ್ ಚಾಂಪಿಯನ್’ಷಿಪ್’ನಲ್ಲಿ ಚಿನ್ನದ ಪದಕ ಜಯಸಿದ್ದಾರೆ.
ಕೊರಿಯಾದ ಡೇಗುನಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ವಿಭಾಗದ ಫೈನಲ್ನಲ್ಲಿ ಮೆಹುಲಿ 16–12ರಿಂದ ಕೊರಿಯಾದ ಚೊ ಯುನ್ಯಂಗ್ ಅವರನ್ನು ಪರಾಭವಗೊಳಿಸಿದರು.
ಕಜಕಸ್ತಾನದ ಲೇ ಅಲೆಕ್ಸಾಂಡ್ರಾ ಕಂಚು ತಮ್ಮದಾಗಿಸಿಕೊಂಡರು.ಮಹಿಳೆಯರ 10 ಮೀ. ಏರ್ ರೈಫಲ್ ಜೂನಿಯರ್ ವಿಭಾಗದಲ್ಲಿ ತಿಲೋತ್ತಮಾ ಹಾಗೂ ಭಾರತದವರೇ ಆದ ನ್ಯಾನ್ಸಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದರು.
ಫೈನಲ್ನಲ್ಲಿ ತಿಲೋತ್ತಮಾ 17–12ರಿಂದ ನ್ಯಾನ್ಸಿ ಅವರಿಗೆ ಸೋಲುಣಿಸಿದರು. ಈ ವಿಭಾಗದ ಕಂಚಿನ ಪದಕವು ಜಪಾನ್’ನ ನೋಬಟಾ ಮಿಸಾಕಿ ಅವರ ಪಾಲಾಯಿತು.














